/newsfirstlive-kannada/media/post_attachments/wp-content/uploads/2025/02/SS-Rajamouli.jpg)
ತೆಲುಗಿನ ಮಗಧೀರ, ಈಗ, ಬಾಹುಬಲಿ, RRR ಸಿನಿಮಾಗಳ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ರಾಜಮೌಳಿ ಜೊತೆ 34 ವರ್ಷಗಳಿಂದ ಜೊತೆಗಿದ್ದ ಆಪ್ತ ಸ್ನೇಹಿತ ಶ್ರೀನಿವಾಸ್ ರಾವ್ ಅವರು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: VIDEO: ತೆಲುಗು ಹಾಸ್ಯ ನಟ ಪೋಸಾನಿ ಕೃಷ್ಣ ಮುರಳಿ ಬಂಧನ.. ಮನೆಯಲ್ಲಿ ಹೈಡ್ರಾಮಾ! ಕಾರಣವೇನು?
ಶ್ರೀನಿವಾಸ ರಾವ್ ಅವರು ಡೆತ್‌ನೋಟ್ ಬರೆದಿದ್ದು, ಸಾವಿಗೂ ಮುನ್ನ ವಿಡಿಯೋ ರೆಕಾರ್ಡ್ ಮಾಡಿ ರಾಜಮೌಳಿ ವಿರುದ್ಧ ಪೊಲೀಸರಿಗೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲು ಮನವಿ ಮಾಡಿದ್ದಾರೆ. ನನ್ನ ಆತ್ಮಹತ್ಯೆಗೆ ರಾಜಮೌಳಿ ಕಾರಣವೆಂದು ಡೆತ್ ನೋಟ್‌ನಲ್ಲಿ ಶ್ರೀನಿವಾಸ ರಾವ್ ಆರೋಪ ಮಾಡಿದ್ದಾರೆ.
Star Director #SSRajamouli in Big controversy
వివాదంలో స్టార్ డైరెక్టర్ ఎస్.ఎస్. రాజమౌళిpic.twitter.com/Jw7PhoqFEg
— Milagro Movies (@MilagroMovies)
Star Director #SSRajamouli in Big controversy
వివాదంలో స్టార్ డైరెక్టర్ ఎస్.ఎస్. రాజమౌళిpic.twitter.com/Jw7PhoqFEg— Milagro Movies (@MilagroMovies) February 27, 2025
">February 27, 2025
ರಾಜಮೌಳಿ, ಶ್ರೀನಿವಾಸ್ ರಾವ್ 34 ವರ್ಷಗಳಿಂದ ಸ್ನೇಹಿತರಾಗಿದ್ದರು. ಯಮದಂಗಾ ಸಿನಿಮಾದ ನಿರ್ಮಾಪಕರಾಗಿರುವ ಶ್ರೀನಿವಾಸ್ ರಾವ್ ಕಿರುಕುಳ ಸೇರಿದಂತೆ ಹಲವು ಗಂಭೀರ ಆರೋಪ ಮಾಡಿರೋದು ತೆಲುಗು ಚಿತ್ರರಂಗದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಆರೋಪ ಮಾಡಿರುವ ಶ್ರೀನಿವಾಸ್ ರಾವ್ ಅವರು ನಾಪತ್ತೆಯಾಗಿದ್ದು, ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ