newsfirstkannada.com

ಖ್ಯಾತ ಕಿರುತೆರೆ ನಟ ರವಿಕಿರಣ್ ವಿರುದ್ಧ ವಂಚನೆ ಆರೋಪ; ರೊಚ್ಚಿಗೆದ್ದ ಕಲಾವಿದರಿಂದ ಕಾನೂನು ಸಮರ

Share :

Published February 12, 2024 at 10:25pm

Update February 12, 2024 at 10:30pm

  ರವಿಕಿರಣ್ ವಿರುದ್ಧ ಹೋರಾಟ ಮಾಡ್ತೀವಿ ಎಂದ ಕಲಾವಿದರು

  ಟಿವಿ ಕಲ್ಚರಲ್ ಮತ್ತು ಸ್ಪೋರ್ಟ್ಸ್‌ ಕ್ಲಬ್ ಸದಸ್ಯರಿಂದ ದೂರು

  ಅಕ್ರಮಗಳ ಹಿನ್ನೆಲೆ ಈ ಹಿಂದೆಯೇ ರವಿಕಿರಣ್‌ ಅಮಾನತು

ಬೆಂಗಳೂರು: ಕಿರುತೆರೆ ನಟ ರವಿಕಿರಣ್ ವಿರುದ್ಧ ಗಂಭೀರ ವಂಚನೆ ಆರೋಪವೊಂದು ಕೇಳಿ ಬಂದಿದೆ. ಟಿವಿ ಕಲ್ಚರಲ್ ಅಂಡ್ ಸ್ಫೋರ್ಟ್ ಕ್ಲಬ್‌ನಲ್ಲಿ ಅವ್ಯವಹಾರ ಹಾಗೂ ಹಣ ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ನಟ ರವಿಕಿರಣ್ ವಿರುದ್ಧ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನು ಓದಿ: ಮರಣ ದಂಡನೆಯಿಂದ ಜಸ್ಟ್ ಮಿಸ್.. ಕತಾರ್​ ಜೈಲಿನಲ್ಲಿದ್ದ 8 ಭಾರತೀಯರು ಬಿಡುಗಡೆಯಾಗಿದ್ದೇ ರೋಚಕ ಕಥೆ!

ಹಲವು ವರ್ಷಗಳಿಂದ ರವಿಕಿರಣ್ ಕ್ಲಬ್ ಕಾರ್ಯದರ್ಶಿಯಾಗಿದ್ದಾರೆ. ಈ ವೇಳೆ ಕ್ಲಬ್‌ನ ಹಣ ಅವ್ಯವಹಾರ ಮಾಡಿರುವ ಆರೋಪ ಕೇಳಿ ಬಂದಿದೆ. ಅಕ್ರಮಗಳ ಹಿನ್ನೆಲೆ ಈ ಹಿಂದೆಯೇ ರವಿಕಿರಣ್‌ ಅವರನ್ನು ಕಾರ್ಯದರ್ಶಿ ಸ್ಥಾನದಿಂದ ಅಮಾನತು ಮಾಡಲಾಗಿತ್ತು. ಇಂದು ಅನುಮತಿ ಇಲ್ಲದಿದ್ರೂ ಕ್ಲಬ್​ಗೆ ಬಂದಿದ್ದನ್ನ ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಟ್ಯಾಕ್ಸ್‌ ಸಂಗ್ರಹ, ಪಾವತಿಸದೆ ಸದಸ್ಯರಿಗೆ ದೋಖಾ ಮಾಡಿದ್ದಾರೆ ಅನ್ನೋ ಆರೋಪ ಕೂಡ ರವಿಕಿರಣ್ ಮೇಲಿದೆ. ರವಿಕಿರಣ್ ವಿರುದ್ಧ ಹೋರಾಟ ಮಾಡ್ತೀವಿ ಅಂತ ಸದ್ಯ ಕಲಾವಿದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಹಿಂದೆ ನಟ ರವಿಕಿರಣ್ ಅವರಿಗೆ ನವೀನ್ ಭಾಗ್ಯಶ್ರೀ ಗುರೂಜಿ ಎಂಬುವವರು ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದರು. ಆ ಗುರೂಜಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು. ಇದೀಗ ನಟ ರವಿಕಿರಣ್ ವಿರುದ್ಧ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ಕಿರುತೆರೆ ನಟ ರವಿಕಿರಣ್ ವಿರುದ್ಧ ವಂಚನೆ ಆರೋಪ; ರೊಚ್ಚಿಗೆದ್ದ ಕಲಾವಿದರಿಂದ ಕಾನೂನು ಸಮರ

https://newsfirstlive.com/wp-content/uploads/2024/02/ravi-kiran.jpg

Load More