/newsfirstlive-kannada/media/post_attachments/wp-content/uploads/2025/07/prabhu-chavan.jpg)
ಬೀದರ್​: ಕೆಲವು ದಿನಗಳ ಹಿಂದೆ ಶಾಸಕ ಪ್ರಭು ಚೌಹಾಣ್ ಮನೆಗೆ ನುಗ್ಗಿ ಬೀಗರು ಗಲಾಟೆ ಮಾಡಿಕೊಂಡಿದ್ದರು. ಇದೀಗ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ಮೇಲೆ ಗಂಭೀರ ದೂರು ದಾಖಲಾಗಿದೆ. ಹೌದು, ಮಹಿಳಾ ಆಯೋಗಕ್ಕೆ ಪ್ರತೀಕ್ ಚೌಹಾಣ್ ವಿರುದ್ಧ ದೂರು ಸಲ್ಲಿಕೆಯಾಗಿದೆ. ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಘಟನೆ?
ಜುಲೈ 5 ರಂದು ಔರಾದ್ ಶಾಸಕ ಪ್ರಭು ಚೌಹಾಣ್ ಮನೆಗೆ ಸಂತ್ರಸ್ತೆ ಕಡೆಯವರು ನುಗ್ಗಿ ಗಲಾಟೆ ಮಾಡಿರೋ ವಿಡಿಯೋ ವೈರಲ್ ಆಗಿತ್ತು. ಪ್ರಭು ಚೌಹಾಣ್ ಅವರ ನಿವಾಸಕ್ಕೆ ಮಹಾರಾಷ್ಟ್ರದ ಉದಗೀರ್ ಮೂಲದ ಸಂತ್ರಸ್ತೆ ಕುಟುಂಬಸ್ಥರು ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಇದೇ ಗಲಾಟೆಯಲ್ಲಿ ಚೌಹಾಣ್ ಅವರು ಕಪಾಳಮೋಕ್ಷ ಮಾಡುವ ವಿಡಿಯೋ ವೈರಲ್ ಆಗಿತ್ತು. ಇದೀಗ ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರನ ಮೇಲೆ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.
ಸಂತ್ರಸ್ತೆ ನೀಡಿದ ದೂರಿನಲ್ಲಿ ಏನಿದೆ?
25-12-2023ರಂದು ಮನೆಯವರೆಲ್ಲ ಸೇರಿ ಪ್ರತೀಕ್ ಚೌಹಾಣ್ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿದ್ದಾರೆ. ಎರಡು ಕುಟುಂಬ ಒಪ್ಪಿಗೆಯಿಂದಲೇ ಈ ನಿಶ್ಚಿತಾರ್ಥ ನಡೆದಿದೆ. ನಿಶ್ಚಿತಾರ್ಥದ ನಂತರ ಪ್ರತೀಕ್ ಚೌಹಾಣ್ ಜೊತೆ ಹೊಂದಾಣಿಕೆ ಬರಬೇಕು. ಹಾಗಾಗಿ ಅವರ ಕುಟುಂಬ ನಮ್ಮ ಕುಟುಂಬದೊಂದಿಗೆ ಮಾತಾಡಿದ್ದರು. ಪ್ರತಿಕ್ ಜೊತೆ ಬೇರೆ ಬೇರೆ ಸ್ಥಳಗಳಿಗೆ ಕಳುಹಿಸಿ ಕೊಟ್ಟಿದ್ರು. ಪ್ರತೀಕ್ ಮಹಾರಾಷ್ಟ್ರದ ಲಾತೂರ್​ಗೆ ನನ್ನನ್ನ ಕರೆದು ಕೊಂಡು ಹೋಗಿದ್ದ. ಆಗ ಲೈಂಗಿಕ ಕ್ರಿಯೆ ನಡೆಸಿದರೆ ತಪ್ಪಿಲ್ಲ ಎಂದು ಒತ್ತಾಯಿಸಿದ್ದ. ನಾನು ಅವರ ಒತ್ತಾಯಕ್ಕೆ ಮಣಿದು ಸಹಕರಿಸಿದೆ. 13-5-2024ರಂದು ವಿಮಾನದ ಮೂಲಕ ಶಿರಡಿಗೆ ನಾವು 4ಜನರ ಜೊತೆಗೆ ಹೋಗಿದ್ದೆವು. ಖಾಸಗಿ ಹೋಟೆಲ್​ನಲ್ಲಿ ನಾವು ನಾಲ್ವರು ಉಳಿದುಕೊಂಡಿದ್ವಿ. ನಾನು ಮತ್ತು ಪ್ರತೀಕ್ ಒಂದೇ ರೂಮ್ ನಲ್ಲಿದ್ದೆವು. ಆಗಲೂ ಪ್ರತೀಕ್ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡಿದ್ದಾರೆ. ನಂತರ ಮದುವೆಗೆ ಒತ್ತಾಯ ಮಾಡಿದ್ರೆ, ಅವರು ಮುಂದೂಡುತ್ತಲೇ ಬಂದಿದ್ದಾರೆ. ನನ್ನ ಕನ್ಯತ್ವದ ಬಗ್ಗೆಯೂ ಅವರು ಪ್ರಶ್ನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 5-7-2025 ರಂದು ಸಂಜೆ 7-30ಕ್ಕೆ ಅವರ ಮನೆಗೆ ನನ್ನ ಪೋಷಕರು ಭೇಟಿ ಕೊಟ್ಟು ಪ್ರಶ್ನೆ ಮಾಡಿದ್ದಾರೆ. ಆಗ ಅವರ ಮನೆಯಯ ವಾಗ್ವಾದ ಆಗಿದೆ. ಬಡವರು ಎಂದು ನಮ್ಮನ್ನ ಹೀಯಾಳಿಸಿದ್ದಾರೆ. ಈ ಕುರಿತು 6-7-2025 ರಂದು ಬೀದರ್ ಜಿಲ್ಲೆಯ ಔರಾದ್‌ನ ಹೋಕ್ರಾಣ್ ಪೊಲೀಸ್ ಠಾಣೆಗೆ ದೂರು ಕೊಡಲು ಹೋಗಿದ್ದೆವು. ಆದರೆ ಪೊಲೀಸರು ದೂರನ್ನ ಸ್ವೀಕಾರ ಮಾಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ