RCB ಸ್ಟಾರ್​ ಬೌಲರ್​ ಯಶ್​ ದಯಾಳ್​ ವಿರುದ್ಧ ಯುವತಿ ಗಂಭೀರ ಆರೋಪ.. ಏನದು?

author-image
Veena Gangani
Updated On
RCB ಸ್ಟಾರ್​ ಬೌಲರ್​ ಯಶ್​ ದಯಾಳ್​ ವಿರುದ್ಧ ಯುವತಿ ಗಂಭೀರ ಆರೋಪ.. ಏನದು?
Advertisment
  • ಆರ್​ಸಿಬಿ ವೇಗಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ
  • ವೇಗಿ ಯಶ್​ ದಯಾಳ್​ ವಿರುದ್ಧ ಎಫ್​ಐಆರ್​ ದಾಖಲು
  • ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ಯುವತಿ ದೂರು

RCB ಸ್ಟಾರ್​ ಬೌಲರ್ ಯಶ್​ ದಯಾಳ್​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಉತ್ತರ ಪ್ರದೇಶದ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ಯುವತಿಯೊಬ್ಬಳು ಯಶ್​ ದಯಾಳ್​ ವಿರುದ್ಧ ದೂರು ನೀಡಿದ್ದಾಳೆ.

publive-image

ಯಶ್​ ದಯಾಳ್ ಯುವತಿ ಜೊತೆ 5 ವರ್ಷದ ರಿಲೇಷನ್​ಶಿಪ್​ನಲ್ಲಿ ಇದ್ದರಂತೆ. ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದಾರಂತೆ. ನನಗೆ ಲೈಂಗಿಕ ಕಿರುಕುಳ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಹಲವು ಯುವತಿಯರಿಗೆ ಇದೇ ರೀತಿ ವಂಚಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: ಗುಡ್​​ನ್ಯೂಸ್​​; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ

publive-image

ಈ ಹಿಂದೆಯೂ ಯುವತಿ ಯಶ್​ ದಯಾಳ್​ ವಿರುದ್ಧ ದೂರು ಕೊಟ್ಟಿದ್ದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಅಂತ ಗಂಭೀರ ಆರೋಪ ಮಾಡಿದ್ದಾರೆ. ಸದ್ಯ ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ ದೂರು ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಸತ್ಯಾಂಶದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಯುಪಿ ಪೊಲೀಸರು ತಿಳಿಸಿದ್ದಾರೆ. ಆರ್​ಸಿಬಿ ಐಪಿಎಲ್​ 2025 ಚಾಂಪಿಯನ್ ಆಗಲು ಯಶ್​ ದಯಾಳ್ ಪ್ರಮುಖ ಪಾತ್ರ ವಹಿಸಿದ್ದರು. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment