‘ಹಳ್ಳಿಕಾರ್​​ ರೇಸ್​ ಹೆಸರಲ್ಲಿ ಲಕ್ಷ ಲಕ್ಷ ಕಲೆಕ್ಷನ್’- ವರ್ತೂರು ಸಂತೋಷ್​​ ವಿರುದ್ಧ ಗಂಭೀರ ಆರೋಪ!

author-image
Ganesh Nachikethu
Updated On
‘ಹಳ್ಳಿಕಾರ್​​ ರೇಸ್​ ಹೆಸರಲ್ಲಿ ಲಕ್ಷ ಲಕ್ಷ ಕಲೆಕ್ಷನ್’- ವರ್ತೂರು ಸಂತೋಷ್​​ ವಿರುದ್ಧ ಗಂಭೀರ ಆರೋಪ!
Advertisment
  • ಪ್ರತಿ ವರ್ಷ ಹಳ್ಳಿಕಾರ್​ ರೇಸ್​ ಆಯೋಜಿಸಲಿರೋ ವರ್ತೂರು ಸಂತೋಷ್​​​
  • ಬಿಗ್​ಬಾಸ್​ ವರ್ತೂರು ಸಂತೋಷ್​​ ವಿರುದ್ಧ ಆರೋಪಗಳ ಸುರಿಮಳೆಗೈದ್ರು
  • ವರ್ತೂರು ಸಂತೋಷ್​​ ವಿರುದ್ಧ ಸ್ನೇಹಿತ ಬೀರೇಶ್​ ಎಂಬುವರಿಂದ ಆರೋಪ

ಬಿಗ್​ಬಾಸ್​​ ಮನೆಯಿಂದ ಹೊರ ಬಂದ ಮೇಲೆ ವರ್ತೂರು ಸಂತೋಷ್​ ಯಾವ ಸ್ಟಾರ್​ಗೂ ಕಡಿಮೆ ಇಲ್ಲ. ವರ್ತೂರು ಸಂತೋಷ್​ ಹೋದಲ್ಲಿ ಬಂದಲ್ಲಿ ಜನರ ನೂಕು ನುಗ್ಗಲು. ಹಳ್ಳಿಕಾರ್ ಸಂತೋಷ್ ಅವರ ಜತೆ ಸೆಲ್ಫಿಗಾಗಿ ಮುಗಿ ಬೀಳುತ್ತಾರೆ. ಹೀಗಾಗಿ ಅವರು ಸೆಲೆಬ್ರಿಟಿ ಆಗಿದ್ದಾರೆ.

ಇನ್ನು, ವರ್ತೂರು ಸಂತೋಷ್​​ ಪ್ರತಿ ವರ್ಷ ಮಾರ್ಚ್​​ ತಿಂಗಳಲ್ಲಿ ಹಳ್ಳಿಕಾರ್‌ ರೇಸ್‌ ನಡೆಸುತ್ತಾರೆ. ಈ ವರ್ಷ ಕೂಡ ಮಾರ್ಚ್‌ನಲ್ಲಿ ಹಳ್ಳಿಕಾರ್​ ರೇಸ್​ ಆಯೋಜಿಸಿದ್ರು. ಈ ರೇಸ್​ನಲ್ಲಿ ಗ್ರಾಮೀಣ ಪ್ರತಿಭೆಗಳು ಭಾಗಿಯಾಗಿದ್ರು. ಎಲ್ಲೆಡೆ ಹಳ್ಳಿಕಾರ್​ ರೇಸ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಹಳ್ಳಿಕಾರ್ ರೇಸ್​ ಆಯೋಜಿಸಿದ್ದ ವರ್ತೂರು ಸಂತೋಷ್​ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

publive-image

ವರ್ತೂರು ಸಂತೋಷ್​ ಮತ್ತು ಆಪ್ತ ಸ್ನೇಹಿತರ ನಡುವೆ ಬಿರುಕು ಮೂಡಿದೆ. ಈ ಬಗ್ಗೆ ಜನಶಕ್ತಿ ನ್ಯೂಸ್​ ಕನ್ನಡ ಅನ್ನೋ ಸ್ಥಳೀಯ ಚಾನೆಲ್​ವೊಂದು ಸುದ್ದಿ ಮಾಡಿದೆ. ಜನಶಕ್ತಿ ನ್ಯೂಸ್​ ಚಾನೆಲ್​ ಜೊತೆ ಮಾತಾಡಿರೋ ವರ್ತೂರು ಸಂತೋಷ್​ ಸ್ನೇಹಿತ ಬೀರೇಶ್​ ಎಂಬುವರು ಆರೋಪಗಳ ಸುರಿಮಳೆಗೈದಿದ್ದಾರೆ.

ವರ್ತೂರು ಸಂತೋಷ್​​ ವಿರುದ್ಧ ಆರೋಪಗಳ ಸುರಿಮಳೆ..!

2022ರಲ್ಲಿ ಹಳ್ಳಿಕಾರ್​ ರೇಸ್ ಮಾಡಿದ್ವಿ. ಈ ರೇಸ್​ಗೆ ನನ್ನ ಸಹಾಯ ಕೇಳಿದ್ರು. ಅದಕ್ಕೆ ನಾನು ಓಕೆ ಎಂದಿದ್ದೆ. ಅವಾಗ ಸ್ಟೇಷನ್​ ಪರ್ಮೀಶನ್​ಯಿಂದ ಹಿಡಿದು ಪ್ರತಿಯೊಂದು ನಾವು ಮಾಡಿದ್ವಿ. ಎಲ್ಲಾ ಪರ್ಮೀಷನ್​ ನಾನು ತಗೊಂಡಿದ್ದು. ಡಾಕ್ಯೂಮೆಂಟ್ಸ್​ ಎಲ್ಲವೂ ನನ್ನ ಹೆಸರಲ್ಲೇ ಇದ್ದಿದ್ದು. ನಮ್ಮ ಯಜಮಾನರ ಹತ್ತಿರ 10 ಲಕ್ಷ ದುಡ್ಡು ಕೊಡಿಸಿದ್ದೆ. ಅದು ಬಿಟ್ಟು ನಾನು ದುಡ್ಡು ಖರ್ಚು ಮಾಡಿದೀನಿ. ಆದ್ರೂ ವರ್ತೂರು ಸಂತೋಷ್​ ವಿಡಿಯೋದಲ್ಲಿ ಎಲ್ಲಾ ಮಾಡಿದ್ದು ನಾನೇ ಎಂದು ಹೇಳ್ತಾರೆ. ಕರೆಂಟ್​ ವೈರ್​ ಕನೆಕ್ಷನ್​ಗೆ 50 ಸಾವಿರ, ಬ್ಯಾನರ್​​ಗೆ 60 ಸಾವಿರ ಖರ್ಚು ಆಯ್ತು. ಅದಕ್ಕೆಲ್ಲಾ ದುಡ್ಡು ಕೊಟ್ಟಿದ್ದು ನಾನು, ಆದ್ರೆ ಹೈಲೆಟ್​ ಆಗಿದ್ದು ವರ್ತೂರು ಸಂತೋಷ್​​. ಎಲ್ಲದಕ್ಕೂ ಅವರೇ ಖರ್ಷು ಮಾಡಿದ್ದು ಅಂತಾರೆ. ಅವರು ಒಂದು ರೂ. ಖರ್ಚು ಮಾಡಿಲ್ಲ. ಆತ ಮಾಡಿರೋ ಅನಾಚಾರ ಒಂದು ಎರಡಲ್ಲ. ಅವರಿಗೆ ಅಹಂ ಇಳಿಸಬೇಕು ಅನ್ನೋ ಕಾರಣಕ್ಕೆ ಮಾತಾಡ್ತಿದೀನಿ. ನಾನು ಹೈಲೆಟ್​​ ಆಗಬೇಕಿರೋ ಅಗತ್ಯ ಇಲ್ಲ ಎಂದು ಆರೋಪ ಮಾಡಿದ್ದಾರೆ.

400 ಜೋಡಿ ಎತ್ತು ಬರುತ್ತೆ. ಒಂದು ಜೋಡಿ 3 ಸಾವಿರ ಅಂದ್ರೂ 12 ಲಕ್ಷ ಆಯ್ತು. ನಾನು 10 ಲಕ್ಷ ಕೊಡಿಸಿದೀನಿ. ಅದು ಬಿಟ್ಟು ಸಣ್ಣಪುಟ್ಟ ಖರ್ಚು ನಾನೇ ನೋಡಿಕೊಂಡಿದೀನಿ. ರೇಸ್​ಗೆ ಖರ್ಚಾಗೋದು 15 ಲಕ್ಷ. ಒಂದು ರೇಸ್​ಗೆ ಲಕ್ಷ ಲಕ್ಷ ಕಲೆಕ್ಷನ್​ ಆಗುತ್ತೆ, ಎಲ್ಲಾ ದುಡ್ಡು ಎಲ್ಲಿ ಹೋಯ್ತು. ವರ್ತೂರ್ ಸಂತೋಷ್ ಒಬ್ಬ ಡೋಂಗಿ ಸರ್.. ಖಾಲಿ ಪಲಾವ್, ಬರೀ ಬಿಲ್ಡಪ್ ತಗೋತಾನೆ. ಅವರು ಏನು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ನಾಲಿಗೆಗೆ ಕಚ್ಚೋ ನಾಗರಹಾವು.. ಕಾರ್ಕೋಟಕ ಸರ್ಪಗಳೇ ಆಟದ ವಸ್ತು; ಏನಿದರ ವಿಶೇಷ? ವಿಡಿಯೋ ನೋಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment