/newsfirstlive-kannada/media/post_attachments/wp-content/uploads/2025/05/manu.-madenur.jpg)
ಬೆಂಗಳೂರು: ಕಿರುತೆರೆ ನಟ ಮಡೆನೂರು ಮನು ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಕಾಮಿಡಿ ಕಿಲಾಡಿಗಳು' ಮೂಲಕ ನಟ ಮಡೆನೂರು ಮನು ಜನಪ್ರಿಯತೆ ಪಡೆದುಕೊಂಡಿದ್ದರು. ಅಲ್ಲದೇ ಕಾಮಿಡಿ ಕಿಲಾಡಿಗಳು ಸೀಸನ್ 2ರ ವಿನ್ನರ್ ಕೂಡ ಆಗಿದ್ದರು ಮಡೆನೂರು ಮನು.
ಇದನ್ನೂ ಓದಿ:ಸೀತಾರಾಮ ತಂಡದಿಂದ ಬಿಗ್ ಶಾಕ್.. ವೀಕ್ಷಕರಿಗೆ ಗುಡ್ ಬೈ ಹೇಳಲು ಮುಂದಾದ ಟಾಪ್ ಸೀರಿಯಲ್
ಆದರೆ ಕಿರುತೆರೆ ನಟಿ ಮಡೆನೂರು ಮನು ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಿರುತೆರೆ ನಟಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಇನ್ನೂ, ನಿರ್ದೇಶಕ ಯೋಗರಾಜ್ ಭಟ್ ಅವರ ಬ್ಯಾನರ್‌ನಲ್ಲಿ ಮೂಡಿಬಂದ ಸಿನಿಮಾದಲ್ಲಿ ನಟ ಮಡೆನೂರು ಮನು ನಟಿಸಿದ್ದಾರೆ.
ಈ ಕುಲದಲ್ಲಿ ಕೀಳ್ಯಾವೋದು ಸಿನಿಮಾ ನಾಳೆ ರಿಲೀಸ್ ಆಗಬೇಕಿದೆ. ಆದ್ರೆ ಇದರ ಮಧ್ಯೆ ನಟ ಮಡೆನೂರು ಮನು ಮೇಲೆ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ನಟ ಮನುಗಾಗಿ ಹುಡಕಾಟ ಶುರು ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ