newsfirstkannada.com

ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

Share :

Published June 3, 2024 at 1:00pm

    ಅಭ್ಯಾಸ ಪಂದ್ಯದಲ್ಲಿ ಗೆದ್ದ ಮಾತ್ರ ಹಿರಿಹಿರಿ ಹಿಗ್ಗಬೇಕಿಲ್ಲ

    ಮೊದಲ ಪಂದ್ಯಕ್ಕೆ ಇನ್ನು ಎರಡು ಮಾತ್ರ ಬಾಕಿ ಇದೆ

    ಐರ್ಲೆಂಡ್ ವಿರುದ್ಧ ಮೊದಲ ಪಂದ್ಯ ಆಡಲಿದೆ ಭಾರತ

ಟೀಮ್ ಇಂಡಿಯಾ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾಗೆ ಶಾಕ್ ನೀಡಿದೆ. ಅಷ್ಟಕ್ಕೆ ಖುಷಿ ಪಡಬೇಕಿಲ್ಲ. ಯಾಕಂದ್ರೆ ಮ್ಯಾಚ್​​ ವಿನ್ನರ್​ಗಳೇ ಕೈಕೊಟ್ಟಿದ್ದಾರೆ. ಇವರ ಕಳಪೆ ಆಟ ಟೀಮ್ ಇಂಡಿಯಾಗೆ ದೊಡ್ಡ ಸೆಟ್​ಬ್ಯಾಕ್ ಆಗಿದೆ.

ಅಭ್ಯಾಸದಲ್ಲಿ ಪಂದ್ಯದಲ್ಲಿ ಮೂವರ ಅಬ್ಬರ ಮಾಯ
ಟೀಮ್ ಇಂಡಿಯಾ ನಿರೀಕ್ಷೆಯಂತೆ ವಾರ್ಮ್​ಅಪ್​​ ಮ್ಯಾಚ್​ನಲ್ಲಿ ಬಾಂಗ್ಲಾದೇಶವನ್ನು ಬಗ್ಗು ಬಡಿದಿದೆ. 60 ರನ್​​ಗಳಿಂದ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆದರೆ ಬೃಹತ್ ವಿಕ್ಟರಿ ದಾಖಲಿಸಿದ್ರೂ ಈ ಗೆಲುವು ಭಾರತಕ್ಕೆ ತೃಪ್ತಿ ತಂದಿಲ್ಲ. ಯಾಕಂದ್ರೆ ಅಭ್ಯಾಸ ಪಂದ್ಯದಲ್ಲಿ ನಂಬಿಗಸ್ಥ ಬ್ಯಾಟ್ಸ್​​ಮನ್​​ಗಳು ಕೈಕೊಟ್ಟಿದ್ದಾರೆ. ಇವರ ಬ್ಯಾಡ್​​ಫಾರ್ಮ್​ ತಂಡಕ್ಕೆ ಬಿಗ್ ಸೆಟ್​ಬ್ಯಾಕ್ ಆಗಿದೆ. ಅಭ್ಯಾಸ ಪಂದ್ಯದಲ್ಲಿ ಹೀಗಾಡಿದ್ರೆ ಅಸಲಿ ವಾರ್​​ನಲ್ಲಿ ಇನ್ನೇಗೆ ಆಡ್ತಾರೆ ಅನ್ನೋ ಆತಂಕ ಹೆಚ್ಚಿಸಿದೆ.

ಇದನ್ನೂ ಓದಿ:ಅಹಿತಕರ ಸಂಗತಿಗಳ ಮಧ್ಯೆಯೂ ಒಂದೊಳ್ಳೆ ಸುದ್ದಿ.. 40 ದಿನ ಹಿಂದೂ ಬಾಣಂತಿಯ ಆರೈಕೆ ಮಾಡಿ ಕಳುಹಿಸಿದ ಮುಸ್ಲಿಂ ಕುಟುಂಬ

23 ರನ್​​​.. 121 ಸ್ಟ್ರೈಕ್​ರೇಟ್​​​​​​​​​​​.. ಸಾಕಾ ಕ್ಯಾಪ್ಟನ್ ರೋಹಿತ್​​..?
ಸವಾಲಿನ ಪಿಚ್​​ನಲ್ಲಿ ಕ್ಯಾಪ್ಟನ್ ರೋಹಿತ್​​​ ಡಿಸೆಂಟ್​ ಆಟವಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಸ್ಸೌ ಅಂತಾರಾಷ್ಟ್ರೀಯ ಮೈದಾನದಲ್ಲಿ ಹಿಟ್​ಮ್ಯಾನ್​ ರನ್​​ಗಳಿಸಲು ಪರದಾಡಿದ್ರು. ಮೈಚಳಿ ಬಿಟ್ಟು ಆಡಬೇಕಿದ್ದ ರೋಹಿತ್​ ಕೇವಲ 23 ರನ್​ಗೆ ಆಟ ನಿಲ್ಲಿಸಿದ್ರು. 121.05 ಸ್ಟ್ರೈಕ್​ರೇಟ್​ ವಾಕರಿಕೆ ಬರುವಂತಿತ್ತು. ನಾಯಕನಾಗಿ ಜವಾಬ್ದಾರಿ ಹೊರದ ಹಿಟ್​ಮ್ಯಾನ್​ ಅಸಲಿ ವಾರ್​​ನಲ್ಲಿ ಹೇಗೆ ಆಡ್ತಾರೆ ಅನ್ನೋ ಪ್ರಶ್ನೆ ಮೂಡಿದೆ.

ಗೋಲ್ಡನ್ ಚಾನ್ಸ್​ ಕೈಚೆಲ್ಲಿದ ಸಂಜು ಸ್ಯಾಮ್ಸನ್​​
ವಿಶ್ವಕಪ್​​ ಅಭಿಯಾನ ಶುರುಮಾಡೋಕೂ ಮುನ್ನ ಭಾರತಕ್ಕೆ ಇದ್ದಿದ್ದು ಒಂದೇ ಒಂದು ಅಭ್ಯಾಸ ಪಂದ್ಯ. ಈ ಗೋಲ್ಡನ್ ಅವಕಾಶವನ್ನು ಬಿಗ್​ ಹಿಟ್ಟರ್ ಕೈಚೆಲ್ಲಿದ್ರು. ಆರಂಭಿಕ ಬಡ್ತಿ ಪಡೆದ ಸ್ಯಾಮ್ಸನ್ ಏನು ಕಡಿದು ಕಟ್ಟೆ ಹಾಕ್ಲಿಲ್ಲ. 6 ಎಸೆತ ಎದುರಿಸಿದ ಸಂಜು ಬಾರಿಸಿದ್ದು ಒಂದೇ ಒಂದು ರನ್​​​. ಸ್ಯಾಮ್ಸನ್ ಟ್ಯಾಲೆಂಟ್​ಗೆ ಇದು ತಕ್ಕುದಾದ ಆಟ ಅಲ್ಲವೇ ಅಲ್ಲ. ಟೀಮ್ ಮ್ಯಾನೇಜ್​​ಮೆಂಟ್ ಕೆಂಗಣ್ಣಿಗೆ ಗುರಿಯಾದ ಸ್ಯಾಮ್ಸನ್​ ಹನ್ನೊಂದರ ಬಳಗದಲ್ಲಿ ಆಡುವ ಅವಕಾಶಕ್ಕೆ ತಾವೇ ಕೊಳ್ಳಿಯಿಟ್ಟುಕೊಂಡಿದ್ದಾರೆ.

ಇದನ್ನೂ ಓದಿ:ಎಲ್ಲರ ಕಣ್ಣು ಹಾರ್ದಿಕ್ ಮೇಲೆ.. ಒಂದೇ ಕಲ್ಲಿನಲ್ಲಿ 5 ಹಕ್ಕಿ ಹೊಡೆಯಲು ಪಾಂಡ್ಯ ಪ್ಲಾನ್​​​..!

IPLನಲ್ಲಿ ಆರ್ಭಟ.. ಅಭ್ಯಾಸ ಪಂದ್ಯದಲ್ಲಿ ದುಬೆ ಠುಸ್​​​..!
ಐಪಿಎಲ್​​​ನಲ್ಲಿ ಅಬ್ಬರಿಸಿ ಬೊಬ್ಬಿರಿದ ಶಿವಂ ದುಬೆ, ವಿಶ್ವಕಪ್​​​ನ ಅಭ್ಯಾಸ ಪಂದ್ಯದಲ್ಲಿ ಫೇಲ್ಯೂರ್​ ಕಂಡಿದ್ದಾರೆ. ಕ್ರೀಸ್​ಗಿಳಿದ ಕ್ಷಣದಿಂದ ಪೆವಿಲಿಯನ್​​​ಗೆ ಹೋಗುವ ತನಕ ರನ್​​​​​​​​​​ ಗಳಿಸಲು ತಿಣುಕಾಡಿದ್ರು. ಬರೀ ಒಂದು ಸಿಕ್ಸ್​​ಗೆ ಅಬ್ಬರ ಮಾಯವಾಯ್ತು.16 ಎಸೆತದಲ್ಲಿ 14 ರನ್​​ ಕಲೆ ಹಾಕಿದ ದುಬೆ ತಮ್ಮ ಸಾಮರ್ಥ್ಯದ ಬಗ್ಗೆ ಪ್ರಶ್ನೆ ತಲೆದೂರುವಂತೆ ಮಾಡಿದ್ದಾರೆ.

ಎಲ್ಲಿ ಹೋಯ್ತು ಸ್ಪಿನ್ನರ್ಸ್​ ಖದರ್​​..?
ಅಭ್ಯಾಸ ಪಂದ್ಯದಲ್ಲಿ ಬೌಲರ್ಸ್​ ಸಾಲಿಡ್​ ಪ್ರದರ್ಶನ ನೀಡಿದ್ರು. ಎಸ್ಪೆಶಲಿ ಸ್ಪೀಡ್​ ಬೌಲರ್ಸ್​. ಆದರೆ ಟರ್ನ್​ ಪಿಚ್​​ನಲ್ಲಿ ಸ್ಪಿನ್ನರ್ಸ್​ ಅಬ್ಬರಿಸಲಿಲ್ಲ. ಬಾಂಗ್ಲಾದ 9 ವಿಕೆಟ್​​ಗಳ ಪೈಕಿ ಎಂಟು ವೇಗಿಗಳ ಪಾಲಾದ್ವು. ಅಕ್ಷರ್​ ಪಟೇಲ್​ 1 ವಿಕೆಟ್​​​​​​​​ ​ ಪಡೆದ್ರು. ಉತ್ತಮ ಎಕಾನಮಿ ಕಾಯ್ದುಕೊಂಡ ಕುಲ್ದೀಪ್​​ ಯಾದವ್​​​​ ಹಾಗೂ ಜಡೇಜಾ ವಿಕೆಟ್​​ ರಹಿತ ಪ್ರದರ್ಶನ ನೀಡಿದ್ರು. ಸ್ಪಿನ್ನರ್​ಗಳ ಈ ಡಿಸೆಂಟ್​​​​​​ ಪ್ರದರ್ಶನ ಭಾರತಕ್ಕೆ ದೊಡ್ಡ ಸೆಟ್​ಬ್ಯಾಕ್ ಆಗಿದೆ.

ಇದನ್ನೂ ಓದಿ:ಟೀಂ ಇಂಡಿಯಾದ ಮುಖ್ಯ ಕೋಚ್​.. ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್..! ಏನಂದ್ರು?

ಒಟ್ಟಿನಲ್ಲಿ ಅಭ್ಯಾಸ ಪಂದ್ಯದಲ್ಲಿ ಗೆದ್ದ ಮಾತ್ರ ಭಾರತ ಹಿರಿ ಹಿರಿ ಹಿಗ್ಗಬೇಕಿಲ್ಲ. ಕ್ಯಾಪ್ಟನ್ ರೋಹಿತ್​​​ ಶರ್ಮಾ, ಶಿವಂ ದುಬೆ ಹಾಗೂ ಸಂಜು ಸ್ಯಾಮ್ಸನ್ ಫಾರ್ಮ್​ ಭಾರತಕ್ಕೆ ಟೆನ್ಷನ್ ತಂದೊಡ್ಡಿದೆ. ಮೊದಲ ಪಂದ್ಯಕ್ಕೆ ಇನ್ನು ಎರಡು ಬಾಕಿ ಇದೆ. ಅಷ್ಟರೊಳಗೆ ಮ್ಯಾಚ್​ ವಿನ್ನರ್ಸ್​ ತಮ್ಮ ತಪ್ಪನ್ನ ತಿದ್ದಿಕೊಂಡು ಕಣಕ್ಕಿಳಿಯಲಿ.

ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್​​

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಶಾಕಿಂಗ್ ನ್ಯೂಸ್​.. ಇವತ್ತಿನಿಂದ ಹಾಲಿನ ದರ ಮತ್ತಷ್ಟು ಏರಿಕೆ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟೀಂ ಇಂಡಿಯಾಗೆ ದೊಡ್ಡ ಹಿನ್ನಡೆ.. ಆತಂಕ ಹುಟ್ಟಿಸಿದ ಮೂವರು ಸ್ಟಾರ್ ಪ್ಲೇಯರ್ಸ್..!

https://newsfirstlive.com/wp-content/uploads/2024/06/ROHIT-10.jpg

Load More