newsfirstkannada.com

VIDEO: 2 ಲಾರಿ 1 ಬಸ್​ ನಡುವೆ ಭಯಾನಕ ಅಪಘಾತ.. 7 ಮಂದಿ ಸಾವು, 15 ಜನರ ಸ್ಥಿತಿ ಗಂಭೀರ

Share :

Published February 10, 2024 at 11:29am

    ಟೋಲ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿಯಾದ ಇನ್ನೊಂದು ಲಾರಿ

    ಮಧ್ಯರಾತ್ರಿ ಸಮಯದಲ್ಲಿ ಎರಡು ಲಾರಿ, ಒಂದು ಬಸ್​ ನಡುವೆ ಡಿಕ್ಕಿ

    ಭೀಕರ ಅಪಘಾತದಿಂದ 7 ಜನರು ಸಾವು, 15 ಜನರಿಗೆ ಗಾಯ

ವಿಜಯವಾಡ: ಎರಡು ಲಾರಿ ಮತ್ತು ಒಂದು ಖಾಸಗಿ ಬಸ್​ ನಡುವೆ ಡಿಕ್ಕಿ ಸಂಭವಿಸಿ 7 ಜನರು ಸಾವನ್ನಪ್ಪಿರುವ ಭೀಕರ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವಲಿ ಟೋಲ್ ಪ್ಲಾಜ್​​ದ ಬಳಿ ನಡೆದಿದೆ. ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದರೆ, 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಕವಲಿ ಟೋಲ್ ಪ್ಲಾಜ್​​ದ ಬಳಿ ಲಾರಿಯೊಂದು ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಇನ್ನೊಂದು ರಭಸವಾಗಿ ಡಿಕ್ಕಿ ಹೊಡೆದಿದೆ. ಇದಾದ ತಕ್ಷಣ ಎದುರುಗಡೆಯಿಂದ ಬರುತ್ತಿದ್ದ ಬಸ್​ ಕೂಡ ಬಂದ ಆ ಲಾರಿಗಳಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಲಾರಿಯ ಡ್ರೈವರ್​ಗಳಿಬ್ಬರು ಮತ್ತು ಬಸ್​ ಚಾಲಕ ಹಾಗೂ 4 ಪ್ರಯಾಣಿಕರು ಸೇರಿ ಒಟ್ಟು 7 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 15 ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಎವಿ ಕಾವೇರಿ ಟ್ರಾವೆಲ್ಸ್​ಗೆ ಸೇರಿದ ಬಸ್​ ಚೆನ್ನೈಯಿಂದ ಹೈದರಾಬಾದ್​ಗೆ ಹೋಗುವಾಗ ಲಾರಿಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಬಸ್​ನ ಮುಂಭಾಗವೆಲ್ಲ ಫುಲ್ ಜಖಂ ಆಗಿದ್ದರಿಂದ ಡ್ರೈವರ್​ ಸೇರಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಇನ್ನು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: 2 ಲಾರಿ 1 ಬಸ್​ ನಡುವೆ ಭಯಾನಕ ಅಪಘಾತ.. 7 ಮಂದಿ ಸಾವು, 15 ಜನರ ಸ್ಥಿತಿ ಗಂಭೀರ

https://newsfirstlive.com/wp-content/uploads/2024/02/AP_BUS_LORRY_ACCIDENT.jpg

Load More