/newsfirstlive-kannada/media/post_attachments/wp-content/uploads/2024/12/7-Oldest-Language.jpg)
ನಾವು ಮಾತನಾಡುವ ಭಾಷೆಗಳು ನಮ್ಮ ಇತಿಹಾಸದ ಬೇರುಗಳೊಂದಿಗೆ ಬೆಸೆದುಕೊಂಡಿವೆ. ಒಂದಲ್ಲ ಎರಡಲ್ಲ ಸಾವಿರ ಸಾವಿರ ವರ್ಷಗಳ ಹಿಂದಿನಿಂದ ಅವು ನಿರಂತರವಾಗಿ ನಡೆದುಕೊಂಡು ಬಂದ ಕಾಲದ ಗುರುತು ಇದೆ. ಇಂದು ಇಲ್ಲಿ ನಿಮಗೆ ವಿಶ್ವದ ಅತ್ಯಂತ ಪುರಾತನ 7 ಭಾಷೆಗಳು ಹೇಗೆ ನಡೆದುಕೊಂಡು ಬಂದವು. ಇಂದಿಗೂ ಕೂಡ ಕಾಲಗರ್ಭದಲ್ಲಿ ಮಾಯವಾಗಿ ಹೋಗದೇ ಹಾಗೆ ಉಳಿದುಕೊಂಡು ಬಂದಿರುವ ಭಾಷೆಗಳು ಯಾವುವು ಎನ್ನುವುದರ ಬಗ್ಗೆ ನಾವು ಮಾಹಿತಿ ನೀಡುತ್ತೇವೆ.
1. ಸಂಸ್ಕೃತ: ಸಂಸ್ಕೃತವನ್ನು ದಕ್ಷಿಣ ಏಷಿಯಾದ ಅನೇಕ ಭಾಷೆಗಳ ತಾಯಿ ಎಂದೇ ಗುರುತಿಸಲಾಗುತ್ತದೆ. ಹಲವು ಭಾಷೆಗಳಿಗೆ ಬುನಾದಿಯನ್ನು ಹಾಕಿಕೊಟ್ಟಿದ್ದೇ ಈ ಸಂಸ್ಕೃತ ಭಾಷೆ. ಸುಮಾರು 3500 ವರ್ಷಗಳಿಂದ ಈ ಒಂದು ಭಾಷೆ ಮಾನವನ ಬದುಕಿನೊಂದಿಗೆ ನಡೆದುಕೊಂಡು ಬಂದಿದೆ. ಎಲ್ಲಿಯೂ ಮುಕ್ಕಾಗದೇ, ಮುಪ್ಪಾಗದೇ ಅದೇ ಮೌಲ್ಯವನ್ನು ಉಳಿಸಿಕೊಂಡು ಇಂದಿಗೂ ಜಗತ್ತಿನ ನಡುವೆ ಇದೆ. ಜಗತ್ತಿನ ಶ್ರೀಮಂತ ಗ್ರಂಥಗಳು ಎಂಬ ಗರಿಮೆ ಹೊಂದಿದ ವೇದಗಳು, ಮಹಾಭಾರತ ಹಾಗೂ ರಾಮಾಯಣ ಇವೆಲ್ಲವೂ ಮೂಲವಾಗಿ ಸಂಸ್ಕೃತ ಭಾಷೆಯ ಮೂಲದಲ್ಲಿಯೇ ಬೆಳೆದು ಬಂದಿದ್ದು. ಈ ಗ್ರಂಥಗಳೇ ಭಾರತೀಯ ಸಂಸ್ಕೃತಿಗೆ ಪರಂಪರೆಗೆ ಒಂದು ರೂಪವನ್ನು ಕೊಟ್ಟಿದ್ದು. ಈಗಲೂ ಕೂಡ ಅನೇಕರು ಸಂಸ್ಕೃತವನ್ನು ಆಡಭಾಷೆಯಾಗಿ ರೂಢಿಸಿಕೊಂಡು ಬಂದಿದ್ದಾರೆ. ಭಾರತದಲ್ಲಿ ಇಂದಿಗೂ ಕೂಡ ಇದೊಂದು ಧಾರ್ಮಿಕ ಭಾಷೆಯಾಗಿ ಉಳಿದುಕೊಂಡು ಬಂದಿದೆ. ಸಂಸ್ಕೃತ ಭಾಷೆಯನ್ನು ವಿಶ್ವದಾದ್ಯಂತ ಇಂದಿಗೂ ಕೂಡ ಅನೇಕ ಕಡೆ ಅಧ್ಯಯನ ಮಾಡುತ್ತಿದ್ದಾರೆ.
ಇದನ್ನೂ ಓದಿ: VIDEO: ಕ್ಯಾನ್ಸರ್ ಪೀಡಿತ ಗಂಡನ ಉಳಿಸಲು ಪತ್ನಿ ಹೋರಾಟ; ಕಥೆ ಕೇಳಿ ಕಣ್ಣೀರಿಟ್ಟ ಸಾರ್ವಜನಿಕರು
2. ತಮಿಳು: ತಮಿಳು ಭಾಷೆಯೂ ಕೂಡ ಅತ್ಯಂತ ಪುರಾತನ ಭಾಷೆಗಳಲ್ಲಿ ಒಂದಾಗಿದೆ. ಇದರ ಇತಿಹಾಸ ಸುಮಾರು 2 ಸಾವಿರ ವರ್ಷಗಳಿಗಿಂತಲೂ ಹಳೆಯದು. ದೀರ್ಘಕಾಲದಿಂದ ಬಾಳಿಕೊಂಡು ಬಂದಿರುವ ಭಾಷೆಯಲ್ಲಿ ತಮಿಳು ಕೂಡ ಒಂದು. ಈ ಒಂದು ಭಾಷೆಯನ್ನು ಜಾಗತಿಕವಾಗಿ 8 ಕೋಟಿ ಜನರು ಆಡುತ್ತಾರೆ. ತಮಿಳುನಲ್ಲಿ ದೊಡ್ಡ ಮಟ್ಟದಲ್ಲಿ ಸಾಹಿತ್ಯ ಕೃಷಿ ನಡೆದಿದೆ. ಸಂಗಮ್ ಕವಿತೆ. ತಿರುಕ್ಕುರಲ್ ಹಾಗೂ ಶಿಲಪ್ಪಾದಿಕಾರಂ ಎಂಬ ಮಹಾನ್ ಗ್ರಂಥಗಳು ಇಲ್ಲಿ ಇವೆ.
3. ಹಿಬ್ರೂ: ಹಿಬ್ರೂ ಭಾಷೆ ಸುಮಾರು 3 ಸಾವಿರ ವರ್ಷಗಳಿಂದ ಬಾಳಿಕೊಂಡು ಬಂದಿದೆ. ಇದರ ಬೇರು ಸುಮಾರು 3 ಸಾವಿರ ವರ್ಷಗಳಿಗಿಂತಲೂ ಹಿಂದೆ ಇವೆ ಎಂದು ಹೇಳಲಾಗುತ್ತದೆ. ತೀರ ಅಳಿವನಂಚಿಗೆ ಹೋಗಿದ್ದ ಈ ಭಾಷೆಯನ್ನು 19ನೇ ಶತಮಾನದಲ್ಲಿ ಹಲವು ಇಸ್ರೇಲಿಗರ ನಿರಂತರ ಶ್ರಮದಿಂದ ಇದನ್ನು ಆಧುನಿಕವಾಗಿ ಪುನರಜ್ಜೀವನಗೊಳಿಸಲಾಯ್ತು. ಇಂದು ಕೋಟ್ಯಾಂತರ ಇಸ್ರೇಲಿಗರು ಈ ಭಾಷೆಯನ್ನು ವಿಶ್ವದಾದ್ಯಂತ ಮಾತನಾಡುತ್ತಾರೆ.
4. ಗ್ರೀಕ್: ಗ್ರೀಕ್ ಭಾಷೆಯೂ ಕ್ರಿಸ್ತಶಕ ಪೂರ್ವ 1450ರಷ್ಟು ಹಳೆಯದು ಎಂದು ಗುರುತಿಸಲಾಗುತ್ತದೆ. ಇದು ಯುರೋಪಿನ ಅತ್ಯಂತ ಪುರಾತನ ಭಾಷೆ ಎಂದು ಕೂಡ ಹೇಳಲಾಗುತ್ತದೆ. ಇಡೀ ಜಗತ್ತಿಗೆ ತತ್ವಶಾಸ್ತ್ರದ ಅತಿದೊಡ್ಡ ಜ್ಞಾನವು ಹರಿದು ಬಂದಿದ್ದು ಇದೇ ಗ್ರೀಕ್ ಭಾಷೆಯಿಂದ. ಪ್ಲೆಟೋ ಅರಿಸ್ಟಾಟಲ್ನಂತಹ ಅನೇಕ ತತ್ವಜ್ಞಾನಿಗಳು ಇದನ್ನು ಮತ್ತಷ್ಟು ಶ್ರೀಮಂತಿಕೆಗೊಳಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿದ್ದಾರೆ.
ಇದನ್ನೂ ಓದಿ:Pushpa2; 2ನೇ ವಾರದ ಕಲೆಕ್ಷನ್ ಎಷ್ಟು ಸಾವಿರ ಕೋಟಿ.. ಪ್ರಭಾಸ್ ರೆಕಾರ್ಡ್ ಬ್ರೇಕ್ ಮಾಡಿದ್ರಾ ಅಲ್ಲು ಅರ್ಜುನ್?
5. ಚೈನೀಸ್ ಭಾಷೆ: ಚೀನಿ ಭಾಷೆಯೂ ಕೂಡ ಜಗತ್ತಿನ ಪುರಾತನ ಭಾಷೆಗಳಲ್ಲಿ ಒಂದು. ಸದ್ಯ ಮಂದಾರಿನ್ ಎಂಬ ಚೈನೀಸ್ ಭಾಷೆ ಇಂದು ಹೆಚ್ಚು ಬಳಕೆಯಲ್ಲಿದೆ. ಚೀನಾದ ಪರಂಪರೆ ಹಾಗೂ ಸಂಸ್ಕೃತಿಯೊಂದಿಗೆ ನಿರಂತರ ಹರಿದುಕೊಂಡು ಬಂದಿದೆ ಈ ಭಾಷೆ.
6. ಅರೇಬಿಕ್: 1500 ವರ್ಷಗಳ ಹಿಂದೆ ಆಡುವ ಭಾಷೆ ಇಂದಿಗೂ ಕೂಡ ಚಾಲ್ತಿಯಲ್ಲಿದೆ. ಇದು ಕೇವಲ ಕುರಾನ್ನ ಒಂದು ಭಾಗವಾಗಿ ಉಳಿದುಕೊಂಡಿಲ್ಲ ವೈಜ್ಞಾನಿಕ, ಗಣಿತದ ಹಾಗೂ ಸಾಹಿತ್ಯದ ಭಾಷೆಯಾಗಿಯೂ ಇಂದಿಗೂ ಕೂಡ ಚಾಲ್ತಿಯಲ್ಲಿದೆ. ಕೋಟ್ಯಾಂತರ ಜನರು ಇಂದಿಗೂ ಕೂಡ ಅರೇಬಿಕ್ ಭಾಷೆಯನ್ನು ಮಾತನಾಡುತ್ತಾರೆ. ಇಸ್ಲಾಂ ರಾಷ್ಟ್ರದ ಅನೇಕ ಕಡೆ ಈ ಭಾಷೆಯೂ ಇಂದಿಗೂ ಬಳಕೆಯಲ್ಲಿದೆ.
7. ಲ್ಯಾಟೀನ್: ಲ್ಯಾಟೀನ್ ಬಾಷೆ ಇಂದು ಆಡುಭಾಷೆಯಾಗಿ ಉಳಿದುಕೊಂಡಿಲ್ಲ. ಆದರೆ ಇದು ಅನೇಕ ಭಾಷೆಗಳ ಮೇಲೆ ಬೀರಿದ ಪರಿಣಾಮವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. 2700 ವರ್ಷಗಳ ಹಿಂದಿನ ಈ ಭಾಷೆಯ ಪ್ರಭಾವದಿಂದಲೇ ಸ್ಪೇನಿಶ್, ಫ್ರೆಂಚ್ ಹಾಗೂ ಇಟಾಲಿಯನ್ ಭಾಷೆಗಳು ಬೆಳೆದುಕೊಂಡಿವೆ. ರೋಮನ್ ಕ್ಯಾಥೋಲಿಕ್ ಚರ್ಚ್ಗಳಲ್ಲಿ ಇಂದಿಗೂ ಕೂಡ ಇದು ಧಾರ್ಮಿಕ ಭಾಷೆಯಾಗಿ ಉಳಿದುಕೊಂಡು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ