/newsfirstlive-kannada/media/post_attachments/wp-content/uploads/2024/05/KERALA-RAIN.jpg)
ಕೇರಳದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮಳೆ ಸಂಬಂಧಿತ ಅವಘಡದಲ್ಲಿ ಒಟ್ಟು 7 ಜನರು ಸಾವನ್ನಪ್ಪಿದ್ದಾರೆ.
ಭಾರೀ ಮಳೆಯಾಗುವ ಸಾಧ್ಯತೆಯಿರುವ ಕೇರಳದ ಪತ್ತನಂತಿಟ್ಟ, ಆಲಪ್ಪುಳ, ಕೊಟ್ಟಾಯಂ, ಎರ್ನಾಕುಲಂ ಮತ್ತು ಇಡುಕ್ಕಿಯಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇರಳದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಿರುವನಂತಪುರಂ, ಕೊಚ್ಚಿ ಮತ್ತು ತ್ರಿಶೂರ್‌ನಂತಹ ಪ್ರಮುಖ ನಗರಗಳ ಹಲವೆಡೆ ಜಲಸಂಕಟ ಶುರುವಾಗಿದೆ.
ಇದನ್ನೂ ಓದಿ: ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?
ಕೊಚ್ಚಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಎಂಜಿ ರಸ್ತೆ ಸೇರಿದಂತೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಐದು ಜಿಲ್ಲೆಗಳು ಮಾತ್ರವಲ್ಲ, ಕರಾವಳಿ ಭಾಗದಲ್ಲಿ ಭಾರೀ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರದ ಅಲೆಗಳ ಏರಿಳಿತದಲ್ಲಿ ವ್ಯತ್ಯಾಸ ಆಗುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ