ಬ್ರೆಜಿಲ್; ವಸತಿ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಂಡ ವಿಮಾನ! ಜೀವ ಕಳೆದುಕೊಂಡ 10 ಜನರು

author-image
Gopal Kulkarni
Updated On
ಬ್ರೆಜಿಲ್; ವಸತಿ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಂಡ ವಿಮಾನ! ಜೀವ ಕಳೆದುಕೊಂಡ 10 ಜನರು
Advertisment
  • ಬ್ರೆಜಿಲ್​ನಲ್ಲಿ ಭೀಕರ ವಿಮಾನ ದುರಂತ 10 ಜನರ ಸಾವು
  • ವಸತಿ ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ ಹೊತ್ತಿ ಉರಿಯಿತು
  • ಘಟನೆಯಲ್ಲಿ15 ಜನರಿಗೆ ಗಂಭೀರ ಗಾಯ, ಆಸ್ಪತ್ರೆಗೆ ರವಾನೆ

ಬ್ರೆಜಿಲ್​ನ ಪ್ರವಾಸಿ ತಾಣವಾದ ಗ್ರಾಮಡೊದಲ್ಲಿ ವಿಮಾನ ಸ್ಫೋಟಗೊಂಡು ಸುಮಾರು 10 ಜನರು ಜೀವವನ್ನು ಬಿಟ್ಟಿದ್ದು. 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಕ್ಷಿಣ ಬ್ರೆಜಿಲ್‌ನ ಪ್ರವಾಸಿ ನಗರವಾದ ಗ್ರಾಮಡೊದ ಮಧ್ಯಭಾಗಕ್ಕೆ 10 ಜನರನ್ನ ಹೊತ್ತು ಮಿನಿ ವಿಮಾನವೊಂದು ಸಾಗುತ್ತಿತ್ತು. ಆದ್ರೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಇದ್ದಕ್ಕಿದಂತೆ ವಿಮಾನವು ಅಂಗಡಿಗಳು ಮತ್ತು ಮನೆಗಳಿಗೆ ಅಪ್ಪಳಿಸಿ ಬೆಂಕಿ ಹೊತ್ತಿಕೊಂಡಿದೆ.

ಭೀಕರ ದುರಂತದಲ್ಲಿಮಾನದಲ್ಲಿದ್ದ 10 ಜನರು ಸಾವನಪ್ಪಿದ್ದಾರೆ.ಇನ್ನು ಅಂಗಡಿಗಳಲ್ಲಿದ್ದ 15 ಜನರು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಇದು ಪರೋಪಕಾರ ಅಂದ್ರೆ.. ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚೆಂದವೋ!

ಇನ್ನು ಸ್ಥಳೀಯ ಮಾಧ್ಯಮಗಳು ನೀಡಿದ ವರದಿ ಪ್ರಕಾರ ವಿಮಾನದಲ್ಲಿದ್ದ ಎಲ್ಲರೂ ಒಂದೇ ಕುಟುಂಬದವರಾಗಿದ್ದರು ಎಂದು ತಿಳಿದು ಬಂದಿದೆ. ಸಾವೊ ಪೈಲೋ ರಾಜ್ಯದಿಂದ ರಿಯೋ ಗ್ರಾಂಡೆ ಡು ಸೊಲ್​ಗೆ ಪ್ರಯಾಣ ಬೆಳೆಸಿದ್ದರು ಸೆರಾ ಎಂಬ ಗುಡ್ಡುಗಾಡು ಪ್ರದೇಶದಲ್ಲಿ ಈ ಗ್ರಾಮಾಡೊ ಎಂಬ ಪ್ರವಾಸಿ ತಾಣ ಬರುತ್ತದೆ. ಈ ಪ್ರದೇಶವನ್ನು ತಲುಪಿದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು. ವಸತಿ ಕಟ್ಟಡ ಹಾಗೂ ಮೊಬೈಲ್​ ಶಾಪ್​ಗೆ ಅಪ್ಪಳಿಸಿದ ವಿಮಾನ ಸ್ಫೋಟಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment