ತಿರುಪತಿ ದೇವಸ್ಥಾನದಲ್ಲಿ ಭಾರೀ ಕಾಲ್ತುಳಿತ; ಜೀವ ಕಳೆದುಕೊಂಡ 7 ಮಂದಿ ಭಕ್ತರು

author-image
Ganesh Nachikethu
Updated On
ತಿರುಪತಿ ದೇವಸ್ಥಾನದಲ್ಲಿ ಭಾರೀ ಕಾಲ್ತುಳಿತ; ಜೀವ ಕಳೆದುಕೊಂಡ 7 ಮಂದಿ ಭಕ್ತರು
Advertisment
  • ತಿರುಪತಿ ತಿರುಮಲ ದೇವಾಲಯದಲ್ಲಿ ಭಾರೀ ಕಾಲ್ತುಳಿತ
  • ದುರಂತದಲ್ಲಿ 7 ಭಕ್ತರು ಸಾವು; ಹಲವರಿಗೆ ಗಂಭೀರ ಗಾಯ
  • ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು

ಅಮರಾವತಿ: ತಿರುಪತಿ ತಿರುಮಲ ದೇವಾಲಯದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿದೆ. ಈ ದುರಂತದಲ್ಲಿ ಏಳು ಭಕ್ತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ ಏರುತ್ತಲೇ ಇದೆ.

ಇನ್ನು, ತೀವ್ರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಾಲಯದಲ್ಲಿ ವೈಕುಂಠ ಏಕಾದಶಿ ದರ್ಶನದ ವಿಶೇಷ ಟಿಕೆಟ್ ಪಡೆಯುವ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಇಂದು ರಾತ್ರಿ ವೈಕುಂಠ ಏಕಾದಶಿ ವಿಶೇಷ ದರ್ಶನದ ಟಿಕೆಟ್ ಪಡೆಯುವ ಸಂದರ್ಭದ ನೂಕು ನುಗ್ಗಲು ಸಂಭವಿಸಿದೆ. ಈ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಮಹಿಳೆ ಸೇರಿ 6 ಭಕ್ತರು ಮೃತಪಟ್ಟಿದ್ದಾರೆ.

ಇದನ್ನೂ ಓದಿ:VIDEO: ತಿರುಪತಿಯಲ್ಲಿ ಭಕ್ತರ ನೂಕುನುಗ್ಗಲು.. ಕಾಲ್ತುಳಿತದಲ್ಲಿ ಭಾರೀ ದುರಂತ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment