27 ಶತಕ, 31 ಅರ್ಧಶತಕ.. ಅವಕಾಶಕ್ಕಾಗಿ ಕಾಯುತ್ತಿರೋ ಯಂಗ್ ಬ್ಯಾಟರ್ ಅಭಿಮನ್ಯು!

author-image
Bheemappa
Updated On
27 ಶತಕ, 31 ಅರ್ಧಶತಕ.. ಅವಕಾಶಕ್ಕಾಗಿ ಕಾಯುತ್ತಿರೋ ಯಂಗ್ ಬ್ಯಾಟರ್ ಅಭಿಮನ್ಯು!
Advertisment
  • IPL​ನಲ್ಲಿ ಪ್ರದರ್ಶನ ನೀಡಿದರೆ ಟೆಸ್ಟ್​ ಕ್ರಿಕೆಟ್​ಗೆ ಆಡುವ ಅವಕಾಶ
  • ಅಭಿಮನ್ಯು ಈಶ್ವರನ್​​ಗೆ ಟೀಮ್ ಇಂಡಿಯಾದಿಂದ ಅನ್ಯಾಯ..?
  • ಲೀಡ್ಸ್​ ಟೆಸ್ಟ್ ಸೋಲು, ಕೆಲ ಆಟಗಾರರ ಆಯ್ಕೆ ಅಸಮಾಧಾನ

ಇಂಗ್ಲೆಂಡ್‌ ವಿರುದ್ಧದ ಬಹುನಿರೀಕ್ಷಿತ 5 ಪಂದ್ಯಗಳ ಟೆಸ್ಟ್‌ ಸರಣಿ ಆರಂಭವಾಗಿದೆ. ಮೊದಲ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಕೆಲ ಆಟಗಾರರ ಪ್ರದರ್ಶನ ಮೆಚ್ಚಿಕೊಂಡಿರುವ ಕ್ರಿಕೆಟ್ ಪ್ರಿಯರಿಗೆ, ಲೀಡ್ಸ್​ ಟೆಸ್ಟ್ ಸೋಲು ಮಾತ್ರವೇ ಅಲ್ಲ. ಕೆಲ ಆಟಗಾರರ ಆಯ್ಕೆಯೂ ಅಸಮಾಧಾನ ತರಿಸಿದೆ. ಇದಕ್ಕೆಲ್ಲ ಕಾರಣ ಐಪಿಎಲ್​​ಗೆ ಆದ್ಯತೆ. ದೇಶಿ ಕ್ರಿಕೆಟ್​ ಆಟಕ್ಕೆ ಕಡಗಣನೆ.

ಟೀಮ್ ಇಂಡಿಯಾದಲ್ಲಿ ಶುಭಮನ್ ಗಿಲ್ ನಾಯಕತ್ವದ ಹೊಸ ಪರ್ವ ಶುರುವಾಗಿದೆ. ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲೇ ಟೀಮ್ ಇಂಡಿಯಾ ಅದ್ಭುತ ಆಟವಾಡಿದೆ. ಆದ್ರೆ, ಇದೇ ಪಂದ್ಯದಲ್ಲಿ ಸಾಯಿ ಸುದರ್ಶನ್​ಗೆ ಟೆಸ್ಟ್​ ಕ್ಯಾಪ್​ ನೀಡಿ ದೇಶಿ ಕ್ರಿಕೆಟ್​​ ಅಭಿಮನ್ಯು ಈಶ್ವರನ್​ಗೆ ಬೆಂಚ್ ಕಾಯಿಸಿದ ನಡೆ ಕ್ರಿಕೆಟ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ, ದೇಶಿ ಕ್ರಿಕೆಟ್​ಗಿಂತ ಐಪಿಎಲ್ ಪ್ರದರ್ಶನವೇ ಟೀಮ್ ಇಂಡಿಯಾ ಡೆಬ್ಯುಗೆ ಮುಖ್ಯನಾ ಎಂಬ ಪ್ರಶ್ನೆ ಹುಟ್ಟಿಹಾಕಿದೆ. ಇದಕ್ಕೆ ಕಾರಣ ಟೀಮ್ ಇಂಡಿಯಾದಲ್ಲಿ ನಡೀತ್ತಿರುವ ಧೋರಣೆ.

publive-image

ದೇಶಿ ಕ್ರಿಕೆಟ್​ ಹೀರೋ ಈಶ್ವರನ್​ಗೆ ಯಾಕಿಲ್ಲ ಸ್ಥಾನ..?

ಅಭಿಮನ್ಯು ಈಶ್ವರನ್.. ಕಳೆದ 3 ವರ್ಷಗಳಿಂದ ಟೀಮ್ ಇಂಡಿಯಾದ ವಾಟರ್ ಭಾಯ್​.. ಗೆಸ್ಟ್ ಅಪಿರಿಯನ್ಸ್ ಪ್ಲೇಯರ್. ಒಂದಲ್ಲ ಎರಡಲ್ಲ, 2022ರ ಬಾಂಗ್ಲಾ ಪ್ರವಾಸದಿಂದಲೂ ಬಹುಪಾಲು ಟೆಸ್ಟ್​ ಸರಣಿಗಳಲ್ಲಿ ಅಭಿಮನ್ಯು ಈಶ್ವರನ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿದೆ. ಆದ್ರೆ, ಆಡುವ ಹನ್ನೊಂದರಲ್ಲಿ ಮಾತ್ರ ಸ್ಥಾನ ಇಲ್ಲ. ಬಹುತೇಕ ಸರಣಿಗಳಲ್ಲಿ ಕೇವಲ ಬೆಂಚ್ ಬಿಸಿ ಮಾಡಿದ ಅಭಿಮನ್ಯು, ಇಂಗ್ಲೆಂಡ್ ಸರಣಿಯಲ್ಲಾದರು ಡೆಬ್ಯು ಮಾಡುವ ಕನಸು ಕಂಡಿದ್ದರು. ಆದ್ರೆ, ಆ ಕನಸು ಭಗ್ನಗೊಂಡಿದೆ. ದೇಶಿ ಕ್ರಿಕೆಟ್​​ನಲ್ಲಿ ಟನ್ ಗಟ್ಟಲೇ ರನ್​ ಗಳಿಸಿದ ಈಶ್ವರನ್​ಗೆ ಕನಿಷ್ಠ ಒಂದೇ ಒಂದು ಚಾನ್ಸ್ ನೀಡದೆ ಅನ್ಯಾಯ ಎಸಗಿದೆ.

ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅಭಿಮನ್ಯು

ಇದುವರೆಗೆ 103 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅಭಿಮನ್ಯು ಈಶ್ವರನ್‌, 48.70 ಸರಾಸರಿಯಲ್ಲಿ 7841 ರನ್ ಗಳಿಸಿದ್ದಾರೆ. ಈ ಪೈಕಿ 27 ಶತಕ, 31 ಅರ್ಧ ಶತಕ ದಾಖಲಿಸಿದ್ದಾರೆ. ಇಷ್ಟಾದ್ರೂ, ಅಭಿಮನ್ಯ ಈಶ್ವರನ್​ ಬದಲಿಗೆ ಸಾಯಿ ಸುದರ್ಶನ್​ಗೆ ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ನೀಡಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಮಾತ್ರವೇ ಕಾರಣವಾಗಿಲ್ಲ. ಟೀಮ್ ಇಂಡಿಯಾ ಆಯ್ಕೆ, ಡೆಬ್ಯು ಮಾನದಂಡಗಳನ್ನು ಪ್ರಶ್ನಿಸುವಂತೆ ಮಾಡಿದೆ.

ಟೀಮ್ ಇಂಡಿಯಾ ಪರ ಆಡಲು ಇನ್ನೇನು ಮಾಡಬೇಕು..?

ದೇಶಿ ಕ್ರಿಕೆಟ್​ನಲ್ಲಿ 7841 ರನ್​. 48.70 ಬ್ಯಾಟಿಂಗ್ ಅವರೇಜ್​. 27 ಶತಕ. 31 ಅರ್ಧಶತಕ. ಇದು ಅಭಿಮನ್ಯು ಈಶ್ವರನ್​ರ ಫಸ್ಟ್ ಕ್ಲಾಸ್ ಕ್ರಿಕೆಟ್​​ನ ಟ್ರ್ಯಾಕ್ ರೆಕಾರ್ಡ್​. ಈ ಟ್ರ್ಯಾಕ್​ ರೆಕಾರ್ಡ್​ ಸದ್ಯ ಟೀಮ್ ಇಂಡಿಯಾ ಪರ ಆಡ್ತಿರುವ ಹಾಗೂ ಇತ್ತಿಚೆಗೆ ಡೆಬ್ಯು ಮಾಡಿರುವ ಯಾವೊಬ್ಬ ಕ್ರಿಕೆಟರ್​​​ ಸಹ ಹೊಂದಿಲ್ಲ. ಬೇರೆ ಯಾರೋ ಯಾಕೆ.? ಸದ್ಯ ಟೀಮ್ ಇಂಡಿಯಾಗೆ ಡೆಬ್ಯು ಮಾಡಿದ ಸಾಯಿ ಸುದರ್ಶನ್ ಸಹ 39ರ ಬ್ಯಾಟಿಂಗ್ ಅವರೇಜ್​ನಲ್ಲಿ ಗಳಿಸಿದ ರನ್ 1957. ಆಡಿದ ಪಂದ್ಯಗಳು 29 ಮಾತ್ರ. ಆದ್ರೆ, ಈಶ್ವರನ್​ 103 ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ರು. ಟೀಮ್ ಇಂಡಿಯಾ ಪರ ಆಡುವ ಭಾಗ್ಯ ಸಿಕ್ಕಿಲ್ಲ.

ಸೀಸನ್​​-17ರ ಐಪಿಎಲ್​ - ಹರ್ಷಿತ್ ರಾಣಾ ಟೆಸ್ಟ್​ ಡೆಬ್ಯು..!

ಹರ್ಷಿತ್ ರಾಣಾ, ನಿತಿಶ್ ಕುಮಾರ್ ರೆಡ್ಡಿ ಸೀಸನ್​​-17 ಐಪಿಎಲ್​ನಲ್ಲಿ ಬೆಳಕಿಗೆ ಬಂದ ಪ್ರತಿಭೆಗಳು. ಜಸ್ಟ್ ಒಂದೇ ಒಂದು ಸೀಸನ್ ಆಡಿದಷ್ಟೇ ಇವರ ಬದುಕೆ ಬದಲಾಯ್ತು. ಡೈರೆಕ್ಟ್ ಟಿ20 ತಂಡದಲ್ಲಿ ಸ್ಥಾನ ಪಡೆದ ಇವರು, ಟೆಸ್ಟ್​ ಟೀಮ್​ಗೆ ಎಂಟ್ರಿ ನೀಡಲು ಡೆಬ್ಯ ಮಾಡಲು ಆಗಿದ್ದು ಬೆರಳೆಣಿಗೆ ದಿನಗಳು ಮಾತ್ರ.

ಹರ್ಷಿತ್ ರಾಣಾ, ನಿತಿಶ್ ರೆಡ್ಡಿಗೆ ಹೋಲಿಕೆ ಮಾಡಿದ್ರೆ, ಸಾಯಿ ಸುದರ್ಶನ್, ಕಳೆದ ಎರಡು ಐಪಿಎಲ್ ಸೀಸನ್​ಗಳಿಂದ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಬೆನ್ನಲ್ಲೇ ಟೆಸ್ಟ್​ ಕ್ರಿಕೆಟ್​ಗೆ ಬುಲಾವ್ ನೀಡಿದ್ದಾರೆ. ಅಷ್ಟೇ ಅಲ್ಲ, ಮೊದಲ ಸರಣಿಯಲ್ಲೇ ಡೆಬ್ಯು ಮಾಡಿದ್ದಾಗಿದೆ. ಆದ್ರೆ, 2022ರಿಂದ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ತಿರುವ ಈಶ್ವರನ್​ಗೆ ಮಾತ್ರ, ಮತ್ತೆ ಮತ್ತೆ ಬೆಂಚ್ ಕಾಯಿಸ್ತಿರುವುದು ಇದೆಷ್ಟು ಸರಿ ಎಂಬ ಪ್ರಶ್ನೆ ಹುಟ್ಟದಿರಲ್ಲ.

ಇದನ್ನೂ ಓದಿ: BJP ಮಾಜಿ ಶಾಸಕನಿಗೆ ಬಿಗ್ ಶಾಕ್​; 2ನೇ ಮದುವೆ, ಪಕ್ಷದಿಂದಲೇ ಸುರೇಶ್ ರಾಥೋಡ್ ಉಚ್ಚಾಟನೆ!

publive-image

ಟೆಸ್ಟ್​ ಕ್ರಿಕೆಟ್​ಗೆ ಐಪಿಎಲ್ ಪ್ರದರ್ಶನ ಸಾಕೇ..?

ಟೀಮ್ ಇಂಡಿಯಾ ಎಂಟ್ರಿಗೆ ದೇಶಿ ಕ್ರಿಕೆಟ್ ಪ್ರದರ್ಶನ ಮುಖ್ಯವಾಗ್ತಿತ್ತು. ಆದ್ರೀಗ ಈ ಕಾಲ ಬದಲಾಗಿದೆ. ಟೆಸ್ಟ್​ ಕ್ರಿಕೆಟ್​​ಗೆ ಸಂಬಂಧವೇ ಇಲ್ಲದ, ಐಪಿಎಲ್​ನಲ್ಲಿ ಪ್ರದರ್ಶನ ನೀಡಿದ್ರೆ ಸಾಕು. ರೆಡ್ ಬಾಲ್ ಕ್ರಿಕೆಟ್ ಆಡುವ ಅವಕಾಶ ಸಿಗುತ್ತೆ. ವರ್ಷಾನುಗಟ್ಟಲೇ ದೇಶಿ ಕ್ರಿಕೆಟ್​ನಲ್ಲಿ ರನ್ ಗಳಿಸಿದರ ಹೊರತಾಗಿಯೂ ಐಪಿಎಲ್​​​ ಆಡಿದವರಿಗೆ ನೀಡ್ತಿರುವ ಆದ್ಯತೆ. ಇದು ಐಪಿಎಲ್​ ಮುಂದೆ, ಭಾರತೀಯ ಕ್ರಿಕೆಟ್​​ನಲ್ಲಿ​​ ಡೊಮೆಸ್ಟಿಕ್ ಕ್ರಿಕೆಟ್​​ಗಾಗಿರುವ ಸೋಲೇ ಆಗಿದೆ.

ಟೀಮ್ ಇಂಡಿಯಾ ಡೆಬ್ಯುಗೆ ಐಪಿಎಲ್ ಪ್ರದರ್ಶನಕ್ಕೆ ಆದ್ಯತೆ ನೀಡುವುದಾದ್ರೆ. ಭಾರತೀಯ ಕ್ರಿಕೆಟ್​ನಲ್ಲಿ ಡೊಮೆಸ್ಟಿಕ್ ಕ್ರಿಕೆಟ್​ ಮತ್ಯಾಕೆ ಎಂಬ ಪ್ರಶ್ನೆ ಹುಟ್ಟದಿರಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment