newsfirstkannada.com

ಖ್ಯಾತ ಬಾಲಿವುಡ್ ನಟ ಮಿಥುನ್​​ ಚಕ್ರವರ್ತಿ ಆಸ್ಪತ್ರೆಗೆ ದಾಖಲು; ಅಸಲಿಗೆ ಆಗಿದ್ದೇನು..?

Share :

Published February 10, 2024 at 8:55pm

    ಡಿಸ್ಕೋ ಡ್ಯಾನ್ಸರ್, ಅಗ್ನಿಪಥ್, ಘರ್ ಏಕ್ ಮಂದಿರ್ ಖ್ಯಾತಿಯ ನಟ!

    ಬಾಲಿವುಡ್​ ಖ್ಯಾತ ನಟ ಮಿಥುನ್ ಚಕ್ರವರ್ತಿಗೆ ದಿಢೀರ್​ ಎದೆ ನೋವು

    ಮಿಥುನ್ ಚಕ್ರವರ್ತಿ ಚಿಕಿತ್ಸೆಗಾಗಿ ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲು

ಬಾಲಿವುಡ್​ ಖ್ಯಾತ ನಟ ಹಾಗೂ ಬಿಜೆಪಿ ಮುಖಂಡ ಮಿಥುನ್ ಚಕ್ರವರ್ತಿ (73) ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಮಿಥುನ್​ ಚಕ್ರವರ್ತಿ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋಲ್ಕತ್ತದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಮಿಥುನ್ ಚಕ್ರವರ್ತಿ ಅವರ ಕುಟುಂಬ್ಥರು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಫೋಟೋ ನೋಡಿ ನಟನ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕ ಶುರುವಾಗಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರೋ ಫೋಟೋದಲ್ಲಿ ನಟ ಮಿಥುನ್ ಚಕ್ರವರ್ತಿ ಅವರು ಆಸ್ಪತ್ರೆಯ ಬೆಡ್​ ಮೇಲೆ ಮಲಗಿಕೊಂಡಿದ್ದಾರೆ. ಇಂದು ಬೆಳಗ್ಗೆ ನಟನಿಗೆ ಎದೆಯಲ್ಲಿ ನೋವು ಕಾಣಿಸಿಕೊಂಡ ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರಂತೆ. ಈಗಾಗಲೇ ಚಿಕಿತ್ಸೆ ಕೂಡ ನೀಡಲಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.

ಇದನ್ನು ಓದಿ: 33 ಕೋಟಿ ರೂಪಾಯಿ ಜಾಕ್‌ಪಾಟ್‌ ಗೆದ್ದ ಭಾರತೀಯ; ಈ ಅದೃಷ್ಟಶಾಲಿಗೆ ಲಾಟರಿ ಹೊಡೆದಿದ್ದು ಹೇಗೆ ಗೊತ್ತಾ?

ಇನ್ನು ನೆಚ್ಚಿನ ನಟನಿಗೆ ಮಿಥುನ್ ದಾ ಎಂದು ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ, ನಟ ಮೃಣಾಲ್ ಸೇನ್ ನಿರ್ದೇಶನದ ಮೃಗಯಾ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದು ಅವರಿಗೆ ಅತ್ಯುತ್ತಮ ನಟನಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ತಂದುಕೊಟ್ಟಿತು. ಡಿಸ್ಕೋ ಡ್ಯಾನ್ಸರ್, ಅಗ್ನಿಪಥ್, ಘರ್ ಏಕ್ ಮಂದಿರ್, ಜಲ್ಲಾದ್ ಮತ್ತು ಪ್ಯಾರ್ ಜುಕ್ತಾ ನಹಿನ್ ಅವರ ಇತರ ಕೆಲವು ಜನಪ್ರಿಯ ಸಿನಿಮಾಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಖ್ಯಾತ ಬಾಲಿವುಡ್ ನಟ ಮಿಥುನ್​​ ಚಕ್ರವರ್ತಿ ಆಸ್ಪತ್ರೆಗೆ ದಾಖಲು; ಅಸಲಿಗೆ ಆಗಿದ್ದೇನು..?

https://newsfirstlive.com/wp-content/uploads/2024/02/Mithun-Chakraborty-5.jpg

Load More