ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಪ್ಯಾರಿಸ್ಗೆ ಮುಜುಗರದ ಸಂಗತಿ
ಐವರಿಂದ ಆಸ್ಟ್ರೇಲಿಯಾ ಮೂಲದ ಮಹಿಳೆ ಮೇಲೆ ಅತ್ಯಾಚಾರ ಆರೋಪ
ಮಹಿಳೆಯರ ರಕ್ಷಣೆಯ ಕುರಿತು ಶುರುವಾದ್ವು ದೊಡ್ಡ ಸಂಶಯಗಳು
ಪ್ಯಾರಿಸ್ ಅಂಗಳದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಒಲಿಂಪಿಕ್ಸ್ ಪಂದ್ಯಾವಳಿಗಳ ಪದಕ ಬೇಟೆ ಶುರುವಾಗಲಿದೆ. ಪ್ರಾಯೋಜಕರು ನಗರವನ್ನು ಸಿದ್ಧಗೊಳಿಸಲು ನೀರು ಹರಿಸಿದಂತೆ ಹಣವನ್ನು ಹರಿಸುತ್ತಿದ್ದಾರೆ. ಇದೆಲ್ಲದರ ನಡುವೆಯೇ ಪ್ಯಾರಿಸ್ಗೆ, ಫ್ರಾನ್ಸ್ ಸರ್ಕಾರಕ್ಕೆ ಮುಜುಗರ ತರುವಂತಹ ಒಂದು ಘಟನೆ ನಡೆದು ಹೋಗಿದೆ. ಆಸ್ಟ್ರೇಲಿಯಾ ಮಹಿಳೆಯ ಮೇಲೆ ಐದು ಜನರು ಕಾಮಪಿಶಾಚಿಗಳು ಸಾಮೂಹಿಕ ಅತ್ಯಾಚಾರ ನಡೆಸಿ, ಒಲಿಂಪಿಕ್ಸ್ ಆರಂಭಕ್ಕೂ ಮುನ್ನ ಪ್ಯಾರಿಸ್ಗೆ ಕಳಂಕವೊಂದು ಅಂಟಿಕೊಂಡಂತಾಗಿದೆ.
ಇದನ್ನೂ ಓದಿ:IAS ಆಗುವ ಕನಸು.. ಊರು ಬಿಟ್ಟು ದೆಹಲಿಗೆ ಬಂದಿದ್ದ ಯುವಕನ ದಾರುಣ ಸಾವು; ಆಗಿದ್ದೇನು?
ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಪಿಗಲ್ಲೆ ಜಿಲ್ಲೆ ಅಂದ್ರೆ ಫ್ರಾನ್ಸ್ಗೆ ಅಂಟಿಕೊಂಡಿರುವ ಈ ಜಿಲ್ಲೆಯ ಒಂದು ರೆಸ್ಟೋರೆಂಟ್ನಲ್ಲಿ 25 ವರ್ಷದ ಆಸ್ಟ್ರೇಲಿಯಾದ ಯುವತಿ ಶನಿವಾರದಂದು ಬಂದು ಉಳಿದುಕೊಂಡಿದ್ದಳು. ಇಂದು ಅವಳ ರೂಮಿಗೆ ಹೋಗಿ ನೋಡಿದಾಗ ಅವಳ ಮೈಮೇಲಿದ್ದ ಬಟ್ಟೆಯೆಲ್ಲಾ ಅಸ್ತವ್ಯಸ್ತಗೊಂಡಿದ್ದು ಕಾಣಿಸಿದೆ. ಕೂಡಲೇ ಹೋಟೆಲ್ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸರು ಮೇಲ್ನೋಟಕ್ಕೆ ಇದೊಂದು ಸಾಮೂಹಿಕ ಅತ್ಯಾಚಾರದಂತೆ ಕಾಣುತ್ತಿದೆ. ಹೆಚ್ಚು ಕಡಿಮೆ ಶನಿವಾರ ಇಲ್ಲವೇ ರವಿವಾರ ಈ ಭೀಕರ ಘಟನೆ ನಡೆದಿದೆ. ಈ ಭೀಕರ ಕೃತ್ಯ ನಡೆಸಿದವರು ಯಾರು ಅನ್ನೋದು ಇನ್ನು ತಿಳಿದು ಬಂದಿಲ್ಲ ತನಿಖೆಯನ್ನು ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ
ಇದನ್ನೂ ಓದಿ: BREAKING: ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆ; ಚಾಲಕನ ಸುಳಿವು?
ಪ್ಯಾರಿಸ್ನಲ್ಲಿ 2024ರ ಒಲಂಪಿಕ್ಸ್ ಪಂದ್ಯಾವಳಿಯನ್ನು ಆಯೋಜಿಸಿರುವುದರಿಂದ ಲಕ್ಷಾಂತರ ಜನ ಸದ್ಯದಲ್ಲಿಯೇ ಇಲ್ಲಿಗೆ ನೆರೆಯಲಿದ್ದಾರೆ. ಈಗಾಗಲೇ ಫ್ರಾನ್ಸ್ಗೆ ಹಲವು ರೀತಿಯ ಬೆದರಿಕೆಗಳು ಬಂದಿವೆ. ಭಯೋತ್ಪಾನೆ, ಸೈಬರ್ ದಾಳಿ ಸೇರಿದಂತೆ ಅನೇಕ ಬೆದರಿಕೆಗಳು ಈಗಾಗಲೇ ಫ್ರಾನ್ಸ್ ಭದ್ರತಾ ಪಡೆಗೆ ಸವಾಲಾಗಿವೆ. ಅವುಗಳ ಜೊತೆ ಈ ರೀತಿಯ ಬೆಳವಣಿಗಳು ನಡೆಯುತ್ತಿದ್ದು. ಇದು ಕೂಡ ಒಂದು ಚಿಂತೆ ಹುಟ್ಟಿಸಿದೆ. ಮುಂಬರುವ ದಿನಗಳಲ್ಲಿ ಪ್ಯಾರಿಸ್ನಲ್ಲಿ ದೇಶ ವಿದೇಶದಿಂದ ಕ್ರೀಡಾಪ್ರೇಮಿಗಳು ಬರಲಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸದಂತೆ ಭದ್ರತೆಯನ್ನು ನೀಡುವ ದೊಡ್ಡ ಜವಾಬ್ದಾರಿ ಸದ್ಯ ಫ್ರಾನ್ಸ್ ಸರ್ಕಾರದ ಮೇಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ