/newsfirstlive-kannada/media/post_attachments/wp-content/uploads/2024/08/ShaCarri.jpg)
2024 ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​ನಲ್ಲಿ 24 ವರ್ಷದ ಅಮೆರಿಕಾದ ಓಟಗಾರ್ತಿ ಮಹಿಳೆಯರ 100 ಮೀಟರ್ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. 2021ರಲ್ಲಿ ಟೋಕಿಯೊದಲ್ಲಿ ನಡೆದ ಕ್ರೀಡಾಕೂಡದಲ್ಲಿ ಶಾ ಕಾರಿ ರಿಚರ್ಡ್ಸನ್ (Sha Carri Richardson) ಅವರನ್ನು ಸ್ಪರ್ಧಿಸದಂತೆ ನಿರ್ಬಂಧಿಸಿದ್ದರು. ಇದಾದ ಮೂರು ವರ್ಷಗಳ ನಂತರ ಶಾ ಕಾರಿ 100 ಮೀಟರ್ ಓಟದ ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಮೊದಲ ಸ್ಥಾನವನ್ನು ಕೇಟೀ ಲೆಡೆಕಿ 9ನೇ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಸೆನ್ಸೇಷನ್ ಸೃಷ್ಟಿಸಿದ 51 ವರ್ಷದ ಟರ್ಕಿಶ್ ಶೂಟರ್; ಒಲಿಂಪಿಕ್ಸ್‌ನಲ್ಲಿ ಇವರ ದಾಖಲೆ ಏನು?
/newsfirstlive-kannada/media/post_attachments/wp-content/uploads/2024/08/ShaCarri-3.jpg)
ಶಾ'ಕಾರಿ ರಿಚರ್ಡ್ಸನ್ ಮಾರ್ಚ್ 25, 2000ರಂದು ಅಮೆರಿಕಾದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಿಂದಲೂ ಇವರಿಗೆ ಕ್ರೀಡೆಯಲ್ಲಿ ಆಸಕ್ತಿ ಇತ್ತು. ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿಯಲ್ಲಿ ಕೇವಲ 10.75 ಸೆಕೆಂಡುಗಳ ಸಮಯದೊಂದಿಗೆ 100 ಮೀಟರ್‌ಗಳಲ್ಲಿ ಜೂನಿಯರ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. 2019ರಲ್ಲಿ 100 ಮತ್ತು 200 ಮೀಟರ್‌ಗಳಲ್ಲಿ NCAA ಪ್ರಶಸ್ತಿಗಳನ್ನು ಗೆದ್ದುಕೊಳ್ಳುತ್ತಾ ತಮ್ಮ ವೃತ್ತಿಜೀವನವು ಪ್ರಾರಂಭ ಮಾಡಿದ್ದರು. ಶಾ ಕಾರಿ ರಿಚರ್ಡ್ಸನ್ ಓಟದಲ್ಲಿ ಗುರಿ ಮುಟ್ಟುವಾಗ ತನ್ನ ಬೆರಳಿನ ಉಗುರುಗಳನ್ನ ಸಖತ್ ಸ್ಟೈಲಿಶ್ ಆಗಿ ಪ್ರದರ್ಶಿಸುತ್ತಾರೆ. ಶಾ ಕಾರಿ ಬೆರಳಿನ ನರ್ತನಕ್ಕೆ ಕ್ರೀಡಾಭಿಮಾನಿಗಳು ಫಿದಾ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/08/ShaCarri-2.jpg)
2021 ಯೂಎಸ್​ ಒಲಿಂಪಿಕ್ ಟ್ರಯಲ್ಸ್‌ನಲ್ಲಿ 10.86 ಸೆಕೆಂಡುಗಳ ಸಮಯದೊಂದಿಗೆ 100 ಮೀಟರ್‌ಗಳಲ್ಲಿ ಗೆದ್ದುಕೊಂಡು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಥಾನ ಗಳಿಸಿದರು. ಆದರೆ ಈ ಸಂಭ್ರಮದಲ್ಲಿದ್ದ ಶಾ'ಕಾರಿ ಗಾಂಜಾ ಸೇವನೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕ್ರೀಡಾ ಸಂಸ್ಥೆಯು ಮೂರು ವರ್ಷಗಳ ಕಾಲ ನಿರ್ಬಂಧ ಹೇರಿತ್ತು. ಸದ್ಯ 2024 ಪ್ಯಾರಿಸ್ ಒಲಿಂಪಕ್ಸ್​ನಲ್ಲಿ 100 ಮೀಟರ್ ಫೈನಲ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಇನ್ನೂ, ಶಾ ಕಾರಿ ಅವರು ತಮ್ಮ ವೇಗದ ಓಟದಿಂದಲೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಉಸೇನ್ ಬೋಲ್ಟ್ ವೇಗದ ಓಟದ ಮಿತಿಯು 9.58 ಸೆಕೆಂಡ್​ಗಳು ಆದರೆ 2024 ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಶಾ ಕಾರಿ ರಿಚರ್ಡ್ಸನ್ 10.65 ಸೆಕೆಂಡುಗಳವರಗೆ ಓಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us