/newsfirstlive-kannada/media/post_attachments/wp-content/uploads/2024/12/SHAH-RUKH-KHAN.jpg)
ಶಾರುಖ್​ ಖಾನ್, ಬಾಲಿವುಡ್​ನ ಬಾದ್​ಷಾ ಎಂದೆ ಖ್ಯಾತಿ ಪಡೆದಿರುವ ಶಾರುಖ್​,ಭಾರತದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು ಹಾಗೂ ವಿಪರೀತ ಪ್ರೀತಿಸುವ ಅಭಿಮಾನಿಗಳನ್ನು ಹೊಂದಿರುವ ಮೇರು ನಟ ಕೂಡ ಹೌದು. ಶಾರುಖ್ ಜಗತ್ತಿನ ಹಲವೆಡೆ ತಮ್ಮ ಆಸ್ತಿಯನ್ನು ಹೊಂದಿದ್ದಾರೆ. ಮುಂಬೈನಿಂದ ದುಬೈವರೆಗೂ ಅವರ ಆಸ್ತಿಯಿದೆ. ಈಗ ಲಂಡನ್​ನಲ್ಲಿಯೂ ಕೂಡ ಅವರು ಭವ್ಯವಾದ ಅರಮನೆಯಂತ ಬಂಗಲೆಯನ್ನು ಹೊಂದಿದ್ದಾರೆ.
ಮುಂಬೈನಲ್ಲಿರುವ ಶಾರುಖ್​ ನಿವಾಸ ಮನ್ನತ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಅಲ್ಲಿ ನಿತ್ಯವೂ ಶಾರುಖ್​ ಖಾನ್ ನೋಡಲು ಅಂತ ಬರುವ ಅಭಿಮಾನಿಗಳ ದಂಡೇ ನೆರೆದಿರುತ್ತೆ. ಈಗಾಗಲೇ ಹೇಳಿದಂತೆ ಶಾರುಖ್​ ಖಾನ್ ಆಸ್ತಿ ಗಳಿಕೆ ಈಗ ದೇಶದ ಗಡಿದಾಟಿ ಹೋಗಿದೆ. ಅವರು ಮುಂಬೈನಲ್ಲಿ ವಾಸವಿರುವ ಮನ್ನತ್ ಬಂಗಲೆಯೇ ಸುಮಾರು 200 ಕೋಟಿ ರೂಪಾಯಿ ಮೌಲ್ಯದ್ದು ಅಂದ್ರೆ ನೀವು ನಂಬಲೇಬೇಕು. ಇದಕ್ಕೂ ಮೀರಿದ ಆಸ್ತಿಯನ್ನು ಶಾರುಖ್​ ಖಾನ್ ಲಂಡನ್​ನಲ್ಲಿ ಹೊಂದಿದ್ದಾರೆ. ಸದ್ಯ ಶಾರುಖ್​ ಲಂಡನ್​ನಲ್ಲಿ ನಿರ್ಮಿಸಿರುವ ಭವ್ಯ ಅರಮನೆಯಂತ ಬಂಗಲೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಇದನ್ನೂ ಓದಿ:ಎಲ್ರೂ ನೋವಲ್ಲಿ ಇರ್ತಾರೆ.. ಉರಿಯೋ ಬೆಂಕಿಗೆ ತುಪ್ಪ, ಗಾಯಕ್ಕೆ ಉಪ್ಪು ಹಾಕಬಾರ್ದು- ಕಿಚ್ಚನ ಖಡಕ್ ಮಾತು
ಇತ್ತೀಚೆಗೆ ಇನ್​ಸ್ಟಾಗ್ರಾಮ್​ನಲ್ಲಿ ಒಂದು ದಂಪತಿ ಲಂಡನ್​ನಲ್ಲಿರುವ ಶಾರುಖ್ ಖಾನ್ ಮನೆಯ ವಿಡಿಯೋವನ್ನು ಹಂಚಿಕೊಂಡಿದೆ. ಶಾರುಖ್ ಬಂಗಲೆ ಇರುವ ರಸ್ತೆ ಮಾರ್ಗವಾಗಿ ಕಾರ್​ನಲ್ಲಿ ಹೋಗುವಾಗ ತೆಗೆದ ವಿಡಿಯೋವನ್ನು ಹಂಚಿಕೊಂಡಿದ್ದು ಅದು ಈಗ ಸಖತ್ ವೈರಲ್ ಆಗಿದೆ. ವಿಡಿಯೋದಲ್ಲಿ ಶಾರುಖ್​ ಖಾನ್​ರ ಮನೆಯ ನಂಬರ್ 117 ಎಂಬ ಬೋರ್ಡ್​ ಕಾಣಿಸಿಕೋಂಡಿದೆ. ಶಾರುಖ್​​ ನಿವಾಸ ಲಂಡನ್​ನ ಪ್ರತಿಷ್ಠಿತ ಏರಿಯಾ ಎನಿಸಿಕೊಂಡಿರುವ ಪಾರ್ಕ್ ಲೇನ್​ನಲ್ಲಿ ಇದೆ. ಕೆಲವು ಮಾಧ್ಯಮಗಳು ಹೇಳುವ ಪ್ರಕಾರ ಲಂಡನ್​ನಲ್ಲಿ ಇರುವ ಶಾರುಖ್ ಖಾನ್ ಬಂಗಲೆ ಸುಮಾರು 215 ಕೋಟಿಗೆ ಬೆಲೆಬಾಳುವಂತದ್ದು.
/newsfirstlive-kannada/media/post_attachments/wp-content/uploads/2024/12/SHAH-RUKH-KHAN-2.jpg)
ಇದನ್ನೂ ಓದಿ:ತೆಲಂಗಾಣ ಸಿಎಂ ಗ್ರೇಟ್.. ಮೌನ ಮುರಿದ ಪವನ್ ಕಲ್ಯಾಣ್; ಅಲ್ಲು ಅರ್ಜುನ್ ತಪ್ಪು ಏನು?
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಶಾರುಖ್ ಬಂಗಲೆ ವಿಡಿಯೋ ಹಾಗೂ ಫೋಟೋಗಳು ನೆಟ್ಟಿಗರನ್ನು ಸೆಳೆಯುತ್ತಿವೆ. ಕೆಲವರು ತುಂಬು ಹೃದಯದ ಹಾರೈಕೆಗಳು ನಿಮಗೆ, ನನ್ನ ಪ್ರಾರ್ಥನೆಯಲ್ಲಿ ನೀವು ಸದಾ ಇರುತ್ತೀರಿ. ಈ ಎಲ್ಲ ಸುಖ ಸಂತೋಷಗಳಿಗೆ ನೀವು ಅರ್ಹರು ಎಂದು ಹೇಳಿದ್ದರೆ. ಮತ್ತೊಬ್ಬರು. ಶಾರುಖ್ ಕೂಡ ಒಬ್ಬ ಮನುಷ್ಯರು ಅವರ ಖಾಸಗಿ ಬದುಕಿಗೆ ಧಕ್ಕೆ ತರುವ ಕೆಲಸ ಇದು. ಒಂದು ವೇಳೆ ನಿಮ್ಮ ಮನೆಯ ಹಾಗೂ ಮನೆಯ ನಂಬರ್​ನ ವಿಡಿಯೋ ಮಾಡಿ ಯಾರಾದರೂ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟರೆ ಹೇಗಿರುತ್ತೆ ಎಂದು ಪ್ರಶ್ನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us