/newsfirstlive-kannada/media/post_attachments/wp-content/uploads/2024/08/SHAHARUKH-PULLED-OLDMANA-2.jpg)
ಲೋಕಾರ್ನೊ: ಕಿಂಗ್ ಖಾನ್ ಶಾರುಖ್ ಖಾನ್ ತಮ್ಮ ವೃತ್ತಿ ಜೀವನದಲ್ಲಿ ಮತ್ತೊಂದು ಗರಿಮೆಗೆ ಪಾತ್ರರಾಗಿದ್ದಾರೆ. ಲೋಕರ್ನೋ ಫಿಲ್ಮಫೆಸ್ಟಿವಲ್​ನ 77ನೇ ಆವೃತ್ತಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಶಾರುಖ್ ಪಾತ್ರರಾಗಿದ್ದಾರೆ. ಸ್ವಿಟ್ಜರ್​ಲ್ಯಾಂಡ್​ನಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್​ನಲ್ಲಿ ಭಾಗಿಯಾದ ಶಾರುಖ್​ ಖಾನ ತಮ್ಮ ಜೀವಮಾನದ ಶ್ರೇಷ್ಠ ಸಾಧನೆಯ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಒಂದು ಯಡವಟ್ಟು ನಡೆದು ಹೋಗಿದೆ. ಆ ಒಂದು ಯಡವಟ್ಟು ಈಗ ಶಾರುಖ್​ರನ್ನ ಸರಿ ತಪ್ಪು ತಕ್ಕಡಿಯಲ್ಲಿಟ್ಟು ತೂಗುವಂತಾಗಿದೆ.
ಸದ್ಯ ಶಾರುಖ್ ಮಾಡಿರುವ ಆ ಒಂದು ಕೆಲಸ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗುತ್ತಿದೆ. ಶಾರುಖ್ ನಡೆದುಕೊಂಡ ರೀತಿಯನ್ನು ಕೆಲವರು ಸಮರ್ಥಿಸಿಕೊಂಡ್ರೆ, ಇನ್ನೂ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಗಿದ್ದು ಇಷ್ಟೇ, ಶನಿವಾರ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾರುಖ್​ ಖಾನ್ ಫೋಟೋ ಸೇಷನ್ ನಡೆಸುತ್ತಿದ್ದರು. ಈ ವೇಳೆ ಒಬ್ಬ ವೃದ್ಧರು ಫ್ರೇಮ್​ನಲ್ಲಿ ಬರೋ ರೀತಿ ಶಾರುಖ್ ಪಕ್ಕದಲ್ಲಿ ನಿಂತಿದ್ದರು. ಆ ವೃದ್ಧನನ್ನು ಶಾರುಖ್​ ನಯವಾಗಿ ತಳ್ಳಿ ಆಚೆ ಸರಿಯಿರಿ ಎಂದಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ.
. #ShahRukhKhan he pushed that old man!!! Shame on you @iamsrkpic.twitter.com/eA1g3G66xb
— Azzmin✨ SIKANDAR? (@being_azmin)
. #ShahRukhKhan he pushed that old man!!! Shame on you @iamsrkpic.twitter.com/eA1g3G66xb
— Azzmin🗿 (@being_azmin) August 10, 2024
">August 10, 2024
ಇದನ್ನೂ ಓದಿ: KanguvaTrailer: ಸೂರ್ಯನ ಅಬ್ಬರ, ಬಾಬಿ ಡಿಯೋಲ್ ಆರ್ಭಟ.. ಕಂಗುವ ಟ್ರೈಲರ್‌ಗೆ ಕಳೆದೋದ ಫ್ಯಾನ್ಸ್!
ಶಾರುಖ್​​ನ ಈ ಕಾರ್ಯಕ್ಕೆ ಸರಿ ತಪ್ಪುಗಳ ವ್ಯಾಖ್ಯಾನಗಳು ಎಕ್ಸ್ ಖಾತೆಯಲ್ಲಿ ತೇಲಿ ಬರುತ್ತಿವೆ. ಶಾರುಖ್ ಖಾನ್ ಮಾಡಿದ್ದು ಸರಿ ಅಂತ ಅವರ ಅಭಿಮಾನಿಗಳು ಸಮರ್ಥನೆ ಮಾಡಿಕೊಂಡ್ರೆ ಇನ್ನು ಕೆಲವರು ಶಾರುಖ್​​ಗೆ ನಾಚಿಕೆಯಾಗಬೇಕು. ಹಿರಿಯರ ಜೊತೆ ಹೇಗೆ ನಡೆದುಕೊಳ್ಳಬೇಕು ಅನ್ನೋದು ಅವರಿಗೆ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ