newsfirstkannada.com

×

ರಾಮ್ ಚರಣ್ v/s ಶಾರುಖ್ ಖಾನ್.. ಅಂಬಾನಿ ಮಗನ ಮದುವೆ ಹಬ್ಬದಲ್ಲಿ ನಿಜಕ್ಕೂ ನಡೆದಿದ್ದೇನು?

Share :

Published March 5, 2024 at 7:44pm

    ಸೌಥ್‌ ಸ್ಟಾರ್‌ ರಾಮ್​ ಚರಣ್​ಗೆ ಅವಮಾನ ಮಾಡಿದ್ರಾ ಶಾರುಖ್ ಖಾನ್?

    ರಾಮ್ ಚರಣ್​ಗೆ ಇಡ್ಲಿ ವಡಾ ಅಂತ ಸ್ವಾಗತಿಸಿದ ಬಾಲಿವುಡ್ ಬಾದ್‌ಷಾ

    ಜಾಮ್‌ನಗರದ ವೇದಿಕೆಗೆ ಕರೆದು ರಾಮ್ ಚರಣ್ ಕಾಲೆಳೆದ್ರಾ ಕಿಂಗ್ ಖಾನ್?

ಮೆಗಾಪುತ್ರ ರಾಮ್ ಚರಣ್ ಅಭಿಮಾನಿಗಳು ಬಾಲಿವುಡ್ ನಟ ಶಾರುಖ್ ಖಾನ್ ಮೇಲೆ ಸಿಟ್ಟಿಗೆದ್ದಿದ್ದಾರೆ. ಖಾನ್​ ನಡೆದುಕೊಂಡ ರೀತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಶಾರುಖ್ ಖಾನ್ ಕ್ಷಮೆ ಕೇಳ್ಬೇಕು ಅಂತ ಒತ್ತಾಯ ಮಾಡ್ತಿದ್ದಾರೆ. ಅರೇ, ಮೊನ್ನೆ ಮೊನ್ನೆಯಷ್ಟೇ ಅಂಬಾನಿ ಪುತ್ರನ ಪ್ರಿ ವೆಡ್ಡಿಂಗ್​ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ನಾಟು ನಾಟು ಅಂತ ಡ್ಯಾನ್ಸ್​ ಮಾಡಿದ್ರಲ್ವಾ! ಅಷ್ಟು ಬೇಗ ಏನಾಯ್ತು ಅಂತ ಕೇಳ್ತಿದ್ದೀರಾ ಅಲ್ವಾ! ಅಲ್ಲೇ ಆಗಿರೋದು ಯಡವಟ್ಟು. ಆದ್ರೀದು ತಡವಾಗಿ ಬೆಳಕಿಗೆ ಬಂದಿದೆ.

ಅಂಬಾನಿ ಪುತ್ರನ ಪ್ರಿ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ನಾಟು ನಾಟು ಅಂತ ಇಡೀ ಬಾಲಿವುಡ್​ ಹೆಜ್ಜೆ ಹಾಕಿತ್ತು. ಬಾಲಿವುಡ್​ನ ಖಾನ್​ ತ್ರಯರಾದ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ತುಂಬಾ ದಿನಗಳ ನಂತರ ಒಟ್ಟಿಗೆ ಡ್ಯಾನ್ಸ್​ ಮಾಡಿದ್ರು. ಈ ವಿಡಿಯೋನೂ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಖಾನ್ ಫ್ಯಾನ್ಸ್​ ದಿಲ್ ಖುಷ್ ಆಗಿದ್ದರು. ಆದ್ರೀಗ ಸೀನ್ ಕಟ್ ಮಾಡಿ ನೋಡಿದ್ರೆ ಶಾರೂಖ್ ಖಾನ್ ವಿರುದ್ಧ ತೆಲುಗು ನಟ ರಾಮ್ ಚರಣ್ ಫ್ಯಾನ್ಸ್​ ರೊಚ್ಚಿಗೆದ್ದಿದ್ದಾರೆ. ಬಾಲಿವುಡ್​ ಬಾದ್​ಶಾ ಮೇಲೆ ಸಿಡಿಮಿಡಿಕೊಂಡಿದ್ದಾರೆ. ಮಾರ್ಚ್ 1ರಿಂದ ಮಾರ್ಚ್​ 3ವರೆಗೂ ಗುಜರಾತ್​ನ ಜಾಮ್​ನಗರದಲ್ಲಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಪುತ್ರ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಆಯೋಜನೆಯಾಗಿತ್ತು. ಈ ಕಾರ್ಯಕ್ರಮಕ್ಕೆ ದೇಶ-ವಿದೇಶದಿಂದ ಗಣ್ಯರು ಆಗಮಿಸಿದ್ದರು.

ಬಿಲ್​ ಗೇಟ್ಸ್​, ಇವಾಂಕಾ ಟ್ರಂಪ್, ಮಾರ್ಕ್​ ಜುಕರ್​ಬರ್ಗ್​ ಸೇರಿ ವಿಶ್ವದ ಶ್ರೀಮಂತ ವ್ಯಕ್ತಿಗಳು ಬಂದಿದ್ದರು. ಬಾಲಿವುಡ್​ಗೆ ಬಾಲಿವುಡ್ಡೇ ಜಾಮ್​ನಗರದಲ್ಲಿ ಮೂರು ದಿನ ಠಿಕಾಣಿ ಹೂಡಿತ್ತು. ಈ ಕಡೆ ಸೌತ್​ ಇಂಡಸ್ಟ್ರಿಯಿಂದಲೂ ಒಂದಷ್ಟು ಸ್ಟಾರ್ಸ್​ ಈ ಮದುವೆಗೆ ಹೋಗಿದ್ದರು. ತೆಲುಗು ನಟ ರಾಮ್ ಚರಣ್, ಸೂಪರ್ ಸ್ಟಾರ್ ರಜಿನಿಕಾಂತ್​ ವಿಶೇಷ ಆಹ್ವಾನಿತರಿದ್ದರು. ಡ್ಯಾನ್ಸ್​, ಸಾಂಗ್ಸ್​, ಪರ್ಫಾಮೆನ್ಸ್​ ಅಂತ ಮೂರು ದಿನನೂ ಸಿಕ್ಕಾಪಟ್ಟೆ ಕಾರ್ಯಕ್ರಮಗಳು ನಡೆದಿದ್ದವು. ಎಲ್ಲವೂ ಯಶಸ್ವಿಯಾಗಿ ಮುಗಿದಿದ್ದು ಆಯ್ತು. ಆದ್ರೀಗ ರಾಮ್ ಚರಣ್​ ವಿಷ್ಯದಲ್ಲಿ ಶಾರುಖ್ ಖಾನ್ ನಡೆದುಕೊಂಡು ರೀತಿ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿದೆ.

ಸೌತ್ ನಟ ಅನ್ನೋ ಕಾರಣಕ್ಕೆ ಹೀಯಾಳಿಸಿದ್ರಾ ಶಾರುಖ್?

ಅದೊಂದು ಸಮಯ ಇತ್ತು. ಇಂಡಿಯನ್ ಸಿನಿಮಾ ಅಂದ್ರೆ ಹಿಂದಿ ಸಿನಿಮಾ. ಭಾರತೀಯ ಸಿನಿಮಾ ಅಂದ್ರೆ ಬಾಲಿವುಡ್​ ಸಿನಿಮಾ ಅನ್ನೊಥರಾ. ಆ ಟೈಮ್​ನಲ್ಲಿ ಬಾಲಿವುಡ್​ ಮಂದಿ ದಕ್ಷಿಣದ ಸಿನಿಮಾಗಳನ್ನ, ದಕ್ಷಿಣದ ನಟರನ್ನ ಎಷ್ಟು ಕೇವಲವಾಗಿ ನೋಡಿದ್ದಾರೆ. ಎಷ್ಟು ಕೀಳಾಗಿ ನಡೆಸಿಕೊಂಡಿದ್ದಾರೆ ಅನ್ನೋದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಬಹಿರಂಗವಾಗಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಿದ್ದು ಭಾರಿ ಚರ್ಚೆಗೆ ಕಾರಣವಾಗಿತ್ತು. ಆದ್ರೀಗ ಸಮಯ ಬದಲಾಗಿದೆ. ಕಾಲ ಬದಲಾಗಿದೆ. ಸದ್ಯ ಜಾಗತಿಕ ಮಟ್ಟದಲ್ಲಿ ದಕ್ಷಿಣ ಸಿನಿಮಾಗಳು, ದಕ್ಷಿಣದ ಸ್ಟಾರ್​ಗಳು ಮಿಂಚ್ತಾ ಇದ್ದಾರೆ. ವರ್ಲ್ಡ್​ ಸಿನಿಮಾ ಮೇಕರ್ಸ್​ ಸೌತ್ ಸಿನಿಮಾ ಮೇಕರ್ಸ್​ ಬಗ್ಗೆ ಮಾತಾಡ್ತಿದ್ದಾರೆ. ಸದ್ಯ ಜಾಗತಿಕ ಸಿನಿಮಾರಂಗದಲ್ಲಿ ದಕ್ಷಿಣ ಸಿನಿಮಾ ಹಾಗೂ ಕಲಾವಿದರ ಮಹತ್ವದ ಬೇರೇನೆ ಇದೆ. ಅದರಲ್ಲೂ ತ್ರಿಬಲ್ ಆರ್ ಸಿನಿಮಾದ ಖ್ಯಾತಿ ರಾಮ್ ಚರಣ್​ ಹಾಗೂ ಜ್ಯೂ ಎನ್​ಟಿಆರ್​ಗೆ ಬಹುದೊಡ್ಡ ಇಮೇಜ್ ತಂದುಕೊಟ್ಟಿದೆ. ಸಮಯ, ಸಂದರ್ಭ ಹೀಗಿರುವಾಗ ಶಾರುಖ್ ಖಾನ್ ಮಾತ್ರ ಈಗಲೂ ತಮ್ಮ ಹಳೇ ಛಾಳಿ ಬಿಡ್ತಿಲ್ಲ. ಈಗಲೂ ತಮ್ಮ ಹಳೇಯ ಮನಸ್ಥಿತಿಯಲ್ಲೇ ಇದ್ದಾರೆ.

ರಾಮ್ ಚರಣ್​ಗೆ ಇಡ್ಲಿ ವಡಾ ಅಂತ ಸ್ವಾಗತಿಸಿದ್ದೇಕೆ ಶಾರೂಖ್?

ಅದು ಅಂಬಾನಿ ಪ್ರಿ ವೆಡ್ಡಿಂಗ್​ ಪ್ರೋಗ್ರಾಂ.. ಶಾರುಖ್ ಖಾನ್, ಅಮೀರ್ ಖಾನ್, ಸಲ್ಮಾನ್ ಖಾನ್ ಮೂವರು ವೇದಿಕೆ ಮೇಲೆ ಇರ್ತಾರೆ. ಈ ಮೂರು ಖಾನ್​ಗಳು ಒಟ್ಟಿಗೆ ವೇದಿಕೆ ಮೇಲೆ ಇದ್ದಾರೆ ಅಂದ್ರೆ ಸಂಭ್ರಮ ದೊಡ್ಡದಾಗಿರುತ್ತೆ ಅನ್ನೋದ್ರಲ್ಲಿ ಅನುಮಾನನೂ ಇಲ್ಲ. ಈ ಸಂದರ್ಭದಲ್ಲಿ ನಾಟು ನಾಟು ಸಾಂಗ್​ ಹಾಕ್ತಾರೆ. ನಾಟು ನಾಟು ಹಾಡಿಗೆ ಖಾನ್ ತ್ರಯರು ಸಖತ್ ಆಗಿ ಸ್ಟೆಪ್ ಸಹ ಹಾಕ್ತಾರೆ. ಅಷ್ಟೋತ್ತಿಗೆ ಅದೇ ಕಾರ್ಯಕ್ರಮದಲ್ಲಿ ರಾಮ್ ಚರಣ್ ಇರೋ ವಿಷ್ಯ ಗೊತ್ತಾಗ, ಮುಖೇಶ್ ಅಂಬಾನಿ, ಶಾರುಖ್ ಬಳಿ ರಾಮ್ ಚರಣ್ ಇದ್ದಾರೆ ಕರೀರಿ ಅಂತ ಹೇಳ್ತಾರೆ. ಆಗ ರಾಮ್ ಚರಣ್​ನ ಕೂಗು ಶಾರುಖ್ ಖಾನ್, ಇಡ್ಲಿ ವಡಾ ರಾಮ್ ಚರಣ್ ಎಂದಿದ್ದಾರೆ. ಇದು ಈಗ ಸೌತ್ ಸಿನಿಮಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅದರಲ್ಲೂ ಮೆಗಾಫ್ಯಾನ್ಸ್​ ಕಿಂಗ್ ಖಾನ್​ ವಿರುದ್ಧ ಸಿಡಿದೆದಿದ್ದಾರೆ. ಶಾರುಖ್ ಖಾನ್, ರಾಮ್ ಚರಣ್​ ಅವರನ್ನ ಆಹ್ವಾನ ಮಾಡುವ ಸಂದರ್ಭದಲ್ಲಿ ಇಡ್ಲಿ ವಡಾ ಅಂತ ಹೇಳಿ ಕರೆದಿರೋದನ್ನ ಉಪಾಸನಾ ಅವರ ಮೇಕಪ್ ಆರ್ಟಿಸ್ಟ್​ ಜೆಬ್​ ಹಸೇನ್​ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್​ ಹಾಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾನು ಕೂಡ ಶಾರುಖ್ ಖಾನ್ ಅವರ ಅಭಿಮಾನಿ, ಆದ್ರೆ ಸ್ಟೇಜ್ ಮೇಲೆ ಕರೆಯುವ ಸಂದರ್ಭದಲ್ಲಿ ಶಾರುಖ್ ಈ ರೀತಿ ಹೇಳಬಾರದಿತ್ತು ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಉಪಾಸನ ಅವರ ಮೇಕಪ್ ಆರ್ಟಿಸ್ಟ್​ ಅದ್ಯಾವಾಗ ಈ ಪೋಸ್ಟ್​ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ರೋ ಅಲ್ಲಿಂದ ವಿಷಯ ಗಂಭಿರವಾಯ್ತು. ಶಾರುಖ್ ಖಾನ್ ವಿರುದ್ಧ ಟೀಕೆಗಳು ಶುರುವಾದ್ವು. ಸ್ವತಃ ಬಾಲಿವುಡ್​ ಇಂಡಸ್ಟ್ರಿಯವರೇ ಕಿಂಗ್ ಖಾನ್​ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಸೌತ್ ಇಂಡಸ್ಟ್ರಿಯ ಸಕ್ಸಸ್​ ಸಹಿಸ್ತಿಲ್ವಾ ಶಾರುಖ್ ಖಾನ್?

ಕಳೆದ ಐದಾರು ವರ್ಷಗಳಿಂದ ಬಾಲಿವುಡ್​ ಕಂಪ್ಲೀಟ್​ ಸೈಲೆಂಟ್​ ಆಗಿದೆ. ಹಿಂದಿಯ ಯಾವ ನಟನ ಸಿನಿಮಾಗಳು ದೊಡ್ಡ ಗೆಲುವು ಕಂಡಿರಲಿಲ್ಲ. ಅದೇ ಸಮಯದಲ್ಲಿ ಸೌತ್ ಇಂಡಸ್ಟ್ರಿ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ವು. ಬಾಹುಬಲಿ ಸಿರೀಸ್, ಕೆಜಿಎಫ್ ಸಿರೀಸ್, ತ್ರಿಬಲ್ ಆರ್, ಕಾಂತಾರ, ಪುಷ್ಪ ಹೀಗೆ ದಕ್ಷಿಣದ ಸಿನಿಮಾಗಳ ಗೆಲುವಿನ ಪರ್ವ ಆಗಿತ್ತು. ಈ ಕಡೆ ಖಾನ್​ಗಳ ಸಿನಿಮಾಗಳು ಮಕಾಡೆ ಮಲಗಿದ್ವು. ಬಾಲಿವುಡ್​ ಕಥೆ ಮುಗಿದೇ ಹೋಯ್ತು ಅನ್ನೋವಾಗ ಶಾರುಖ್ ಖಾನ್, ಪಠಾಣ್ ಮತ್ತು ಜವಾನ್ ಚಿತ್ರಗಳು ಬಾಕ್ಸಾಫೀಸ್​ಗೆ ಜೀವ ಕೊಟ್ಟಿದೆ. ಹಾಗಾಗಿ ಸೌತ್ ಸಿನಿಮಾಗಳು ಹಾಗೂ ಸೌತ್ ನಟರ ಬಗ್ಗೆ ಮೇಲ್ಮೇಲೇ ಖುಷಿ ವ್ಯಕ್ತಪಡಿಸಿದರೂ ಒಳಗೊಳೋಗೆ ಅಸೂಯೆ ಇದೆ ಅನಿಸ್ತಿದೆ. ಅದಕ್ಕೆ ಉದಾಹರಣೆ ಎನ್ನುವಂತಿದೆ ಅಂಬಾನಿ ಪುತ್ರನ ಪ್ರಿ ವೆಡ್ಡಿಂಗ್​ ವೇಳೆ ರಾಮ್ ಚರಣ್​ ವಿಷ್ಯದಲ್ಲಿ ಶಾರುಖ್ ನಡೆದುಕೊಂಡ ರೀತಿ. ಶಾರೂಖ್​ ಖಾನ್​ಗೆ ತೆಲುಗು, ತಮಿಳು ಹಾಗೂ ಸೌತ್ ಭಾಷೆಗಳು ಬರಲ್ಲ. ಬರದೇ ಹೋದರು ತಮ್ಮದೇ ಭಾಷೆಯಲ್ಲಿ ಗೌರವಾನ್ವಿತವಾಗಿ ನಡೆದುಕೊಂಡರೇ ಸಾಕು. ಸೌತ್ ಸಂಸ್ಕೃತಿಯ ಊಟವನ್ನ ಪ್ರತಿನಿಧಿಸಿ ವ್ಯಕ್ತಿಯನ್ನ ಗುರುತಿಸುವುದು ಸಮಂಜಸವಲ್ಲ. ಆದ್ರೆ ರಾಮ್ ಚರಣ್​ ವಿಷ್ಯದಲ್ಲಿ ಶಾರುಖ್ ಮಾಡಿದ್ದು ಅದೇ ತಪ್ಪು. ಸೌಕ್ಯಮಾ, ಸಾಪಾಡು ಅನ್ನೋ ಪದ ಬಳಕೆ ಮಾಡಿದ ಶಾರುಖ್, ಇಡ್ಲಿ ವಡಾ ಅಂತೇಳಿ ರಾಮ್ ಚರಣ್​ನ ಸ್ವಾಗತಿಸಿದ್ದರು. ಇದು ಆ ಕ್ಷಣಕ್ಕೆ ಶಾರುಖ್ ಖಾನ್ ತಮಿಳು, ತೆಲುಗು ಮಾತಾಡಿದ್ರು ಅಂತನಿಸಿತ್ತಾದರೂ ಅದರ ಒಳಅರ್ಥವೇ ದಕ್ಷಿಣದ ಕಲಾವಿದರನ್ನ ಕಾಲೆಳೆಯೋದು ಆಗಿತ್ತು ಅನ್ನೋ ಅಭಿಪ್ರಾಯ ಕೇಳಿ ಬರ್ತಿದೆ.

ಅಂದ್ಹಾಗೆ, ಶಾರುಖ್ ಖಾನ್ ಈ ಥರಾ ಮಾತಾಡಿರೋದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೇ ತಮಿಳಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಕಿಂಗ್ ಖಾನ್, ಸೇಮ್ ಟು ಸೇಮ್ ಇದೇ ಡೈಲಾಗ್ ಹೊಡೆದಿದ್ದರು. ಸೌಕ್ಯಮಾ, ಸಾಪಾಡು, ರೆಂಡು ಇಡ್ಲಿ ಅಂದಿದ್ದರು. ಆಗ ಶಾರುಖ್ ಖಾನ್ ನಿಂತಿದ್ದ ವೇದಿಕೆ, ಸಂದರ್ಭಕ್ಕೆ ತಕ್ಕಹಾಗಿತ್ತು. ಆದ್ರೀವತ್ತು ಸಂದರ್ಭ ಹಾಗಿರಲಿಲ್ಲ. ಅದೊಂದು ಗ್ಲೋಬಲ್ ಸ್ಟೇಜ್.. ದೇಶ-ವಿದೇಶದ ಗಣ್ಯರಿದ್ದರು. ಬ್ಯುಸಿನೆಸ್​ಮ್ಯಾನ್​ಗಳು ಇದ್ದರು. ಭಾರತೀಯ ಟಾಪ್ ಮೋಸ್ಟ್​ ಸೆಲೆಬ್ರಿಟಿಗಳು ಇದ್ದರು. ರಾಮ್ ಚರಣ್​ ಅದಾಗಲೇ ಗ್ಲೋಬಲ್ ಸ್ಟಾರ್ ಎನಿಸಿಕೊಂಡಿದ್ದವರು. ಅವರನ್ನ ವೇದಿಕೆ ಮೇಲೆ ಕರೆಯಬೇಕಾದರೇ ಕನಿಷ್ಠ ಗೌರವ ಕೊಡಬೇಕಿತ್ತು ಅನ್ನೋದು ಬಹುತೇಕರ ವಾದ. ಈ ವಿಚಾರದಲ್ಲಿ ಶಾರುಖ್ ಎಡವಿದರು ಎನ್ನಲಾಗ್ತಿದೆ. ಶಾರುಖ್ ಖಾನ್ ಕರೆದಾಗ ರಾಮ್ ಚರಣ್ ತೇಜ ಏನೋ ಖುಷಿ ಖುಷಿಯಾಗಿಯೇ ಹೋದರು. ಆದರೆ ಅವರನ್ನ ಇಷ್ಟಪಡುವ ಜನ ಅದನ್ನ ಒಪ್ಪಿಲ್ಲ. ಹಾಗಾಗಿಯೇ ಮೇಕಪ್ ಆರ್ಟಿಸ್ಟ್​ ಹಾಗೂ ಉಪಾಸನ ಸಹ ಈ ಕಾರ್ಯಕ್ರಮದಿಂದ ಅರ್ಧಕ್ಕೆ ಹೊರನಡೆದರೂ ಎನ್ನಲಾಗಿದೆ. ಹಾಗ್ನೋಡಿದ್ರೆ ಶಾರುಖ್ ಅವರನ್ನ ರಾಮ್ ಚರಣ್​ ತುಂಬಾ ಗೌರವಿಸ್ತಾರೆ ಹಾಗೂ ಅಭಿಮಾನಿಸ್ತಾರೆ. ಇಂಥ ಕಲಾವಿದನ ವಿಷ್ಯದಲ್ಲಿ ಶಾರುಖ್ ಈ ರೀತಿ ವರ್ತಿಸಬಾರದಿತ್ತು ಅನ್ನೋದು ಮೆಗಾ ಅಭಿಮಾನಿಗಳ ಅಭಿಪ್ರಾಯ. ಬಾಲಿವುಡ್​ ಮಂದಿ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳು ಅಂತ ಬಂದಾಗ ಬಹಳಷ್ಟು ಹಿಂದುಳಿದಿದ್ದಾರೆ. ಅದರ ಪರಿಣಾಮ ಇಂಥ ಘಟನೆಗಳು ಮರುಕಳಿಸುತ್ತಿವೆ. ಇನ್ನಾದರೂ ಬಿಟೌನ್​ನ ಬಿಗ್ ಸ್ಟಾರ್​ಗಳು ಎನಿಸಿಕೊಂಡಿರೋರು ವ್ಯಕ್ತಿಗೆ, ವ್ಯಕ್ತಿತ್ವಕ್ಕೆ ಹಾಗೂ ಸಂಸ್ಕೃತಿ, ಆಚಾರ-ವಿಚಾರಗಳನ್ನ ಗೌರವಿಸುವುದು ಕಲಿಯಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ್ ಚರಣ್ v/s ಶಾರುಖ್ ಖಾನ್.. ಅಂಬಾನಿ ಮಗನ ಮದುವೆ ಹಬ್ಬದಲ್ಲಿ ನಿಜಕ್ಕೂ ನಡೆದಿದ್ದೇನು?

https://newsfirstlive.com/wp-content/uploads/2024/03/sharuk-6.jpg

Load More