ಸಿನಿಮಾಗೂ ಮುನ್ನ ಆ ಉದ್ಯಮದಲ್ಲಿ ಗುರುತಿಸಿಕೊಂಡ ಶಾರುಖ್​ ಪುತ್ರ; ವರ್ಲ್ಡ್‌ ಬೆಸ್ಟ್‌ ಬ್ರ್ಯಾಂಡ್ ಅವಾರ್ಡ್‌!

author-image
Gopal Kulkarni
Updated On
ಸಿನಿಮಾಗೂ ಮುನ್ನ ಆ ಉದ್ಯಮದಲ್ಲಿ ಗುರುತಿಸಿಕೊಂಡ ಶಾರುಖ್​ ಪುತ್ರ; ವರ್ಲ್ಡ್‌ ಬೆಸ್ಟ್‌ ಬ್ರ್ಯಾಂಡ್ ಅವಾರ್ಡ್‌!
Advertisment
  • ಪುತ್ರನೊಂದಿಗೆ ಸೇರಿ ಆ ಉದ್ಯಮದಲ್ಲಿ ಶಾರುಖ್ ಸಾಧನೆ
  • ಶಾರುಖ್-ಆರ್ಯನ್​ ಮಾಲೀಕತ್ವದ ಬ್ರ್ಯಾಂಡ್​ಗೆ ಪ್ರಶಸ್ತಿ
  • ನ್ಯೂಯಾರ್ಕ್​ನಲ್ಲಿ ಶಾರುಖ್​-ಆರ್ಯನ್ ಗೆದ್ದ ಪ್ರಶಸ್ತಿ ಯಾವುದು?

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬೆಳ್ಳಿತೆರೆಗೆ ಬರಲಿದ್ದಾರೆ ಅಂತ ಶಾರುಖ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.ಸದ್ಯದಲ್ಲಿಯೆ ನೆಟ್​ಫ್ಲಿಕ್ಸ್​ನಲ್ಲಿ ಅವರದ್ದೊಂದು ಸಿರೀಸ್ ಕೂಡ ಬರುವುದಿತ್ತು.ಆದರೆ ಸದ್ಯಕ್ಕೆ ಲಿಕ್ಕರ್ ಕ್ಷೇತ್ರದಲ್ಲಿ ತಂದೆ ಮಗ ಈಗ ದೊಡ್ಡ ಹವಾ ಸೃಷ್ಟಿಸಿದ್ದಾರೆ. 2022ರಲ್ಲಿ ಆರ್ಯನ್ ಖಾನ್​ ತನ್ನ ತಂದೆಯೊಂದಿಗೆ ಲಿಕ್ಕರ್ ಉದ್ಯಮದಲ್ಲಿ ಕೈ ಜೋಡಿಸುವುದಾಗಿ ಘೋಷಿಸಿದ್ದರು. ತಮ್ಮದೇ ಆದ ಬ್ರ್ಯಾಂಡ್ ಕ್ರಿಯೆಟ್ ಮಾಡುವುದಾಗಿಯೂ ಹೇಳಿದ್ದರು.ಅದರಂತೆ ಈ ಜೋಡಿ ಅಂದುಕೊಂಡಂತೆ ಹೊಸ ವಿಸ್ಕಿ ಬ್ರ್ಯಾಂಡ್​ ಡಿ‘ಯಾವೊಲ್ (D'YAVOL)ಮಾರುಕಟ್ಟೆಗೆ ಕೂಡ ಪರಿಚಯಿಸಿತ್ತು. ಸದ್ಯ ಶಾರುಖ್, ಆರ್ಯನ್ ಕಟ್ಟಿ ಬೆಳೆಸಿದ ಈ ಒಂದು ವಿಸ್ಕಿ ಬ್ರ್ಯಾಂಡ್ ವಿಶ್ವದಲ್ಲಿಯೇ ಅತ್ಯುತ್ತಮ ವಿಸ್ಕಿ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದೆ.

ಶಾರುಖ್​ ಖಾನ್​ರನ್ನ ಬಾಲಿವುಡ್​ನ ಮನರಂಜನಾ ಕ್ಷೇತ್ರದದಲ್ಲಿ ಕಿಂಗ್ ಆಫ್ ಬಾಲಿವುಡ್​ ಎಂದೇ ಕರೆಯುತ್ತಾರೆ. ಕೇವಲ ಮನರಂಜನಾ ಕ್ಷೇತ್ರದಲ್ಲಿ ಮಾತ್ರವಲ್ಲ ಉದ್ಯಮದಲ್ಲಿಯೂ ಕೂಡ ಶಾರುಖ್​ ಖಾನ್ ದೊಡ್ಡ ಹೆಸರು ಗಳಿಸಿದ್ದಾರೆ. ಇತ್ತೀಚೆಗೆ ನ್ಯೂಯಾರ್ಕ್​ನಲ್ಲಿ ನಡೆದ ವರ್ಲ್ಡ್​ ಸ್ಪಿರಿಟ್ ಕಾಂಪಿಟೇಷನ್​ನಲ್ಲಿ ಆರ್ಯನ್ ಹಾಗೂ ಶಾರುಖ್ ಮಾಲೀಕತ್ವದ ಡಿಯಾವೊಲ್​ ವಿಸ್ಕಿ ಬ್ರ್ಯಾಂಡ್ ಅತ್ಯುನ್ನತ ಪ್ರಶಸ್ತಿಯನ್ನು ಪಡೆದಿದೆ. ಈ ಒಂದು ಬ್ರ್ಯಾಂಡ್​ನ್ನು ಅತ್ಯುನ್ನತ ಸ್ಕಾಚ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:ಭಾರತದಲ್ಲಿ ಹೆಚ್ಚಾಯ್ತು ವಿಸ್ಕಿ ಸೇವಿಸುವ ಮಹಿಳೆಯರ ಸಂಖ್ಯೆ! ಅಧ್ಯಯನಗಳು ಏನು ಹೇಳುತ್ತಿವೆ ಗೊತ್ತಾ?

publive-image

ವಿಶ್ವ ಸ್ಪಿರಿಟ್​ ಸ್ಪರ್ಧೆಯಲ್ಲಿ ಹಲವು ಮಾನದಂಡಗಳ ಮೇಲೆ ಶಾರುಖ್ ಆರ್ಯನ್ ಮಾಲೀಕತ್ವದ ವಿಸ್ಕಿಗೆ ಈ ಒಂದು ಅತ್ಯುನ್ನತ ಗೌರವ ಸಿಕ್ಕಿದೆ. ಗುಣಮಟ್ಟ, ಉತ್ಪಾದನೆಯ ರೀತಿ ಹೀಗೆ ಹಲವು ಮಾನದಂಡಗಳ ಮೇಲೆ ಅಳೆದು ತೂಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅಪ್ಪ ಮತ್ತು ಮಗನ ಮಾಲೀಕತ್ವದ ವಿಸ್ಕಿ ಬ್ರ್ಯಾಂಡ್ ಈ ಎಲ್ಲಾ ಪರೀಕ್ಷೆಯಲ್ಲಿಯೂ ಪಾಸಾಗಿ ಜಗತ್ತಿನ ಸರ್ವಶ್ರೇಷ್ಠ ವಿಸ್ಕಿಗಳ ಸಾಲಿನಲ್ಲಿ ಸೇರಿಕೊಂಡಿದೆ.

ಇದನ್ನೂ ಓದಿ: ಇದು ಜಗತ್ತಿನ ಅತ್ಯಂತ ಶ್ರೀಮಂತ ಶ್ವಾನ; ಇದರ ಬಳಿ ಇರುವ ಆಸ್ತಿ ಎಷ್ಟು ಸಾವಿರ ಕೋಟಿ ಗೊತ್ತಾ?

ಇನ್ನು ಶಾರುಖ್ ಹಾಗೂ ಆರ್ಯನ್ ಖಾನ್ ಮಾಲೀಕತ್ವದಲ್ಲಿ ಸಿದ್ಧಗೊಂಡಿರುವ ಈ ವಿಸ್ಕಿ ಬ್ರ್ಯಾಂಡ್​ನ ಬೆಲೆ ಕೇಳಿದ್ರೆ ಎಲ್ಲರೂ ಹೌಹಾರುತ್ತಾರೆ. ಡಿಯಾವೋಲ್ ವಿಸ್ಕಿ ಬ್ರ್ಯಾಂಡ್​ನ ಬೆಲೆ ಮಹಾರಾಷ್ಟ್ರದಲ್ಲಿ 750ಎಂಎಲ್​ ಬಾಟಲಿಗೆ 9800 ರೂಪಾಯಿ ಇದೆ, ಗೋವಾದಲ್ಲಿ 9000 ರೂಪಾಯಿ ಇದ್ರೆ, ಕರ್ನಾಟಕದಲ್ಲಿ 9500 ರೂಪಾಯಿಗೆ ದೊರೆಯುತ್ತದೆ. ಇನ್ನು ಈ ಬ್ರ್ಯಾಂಡ್ ಸದ್ಯದಲ್ಲಿಯೇ ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಹಾಗೂ ತೆಲಂಗಾಣದಲ್ಲಿ ಪ್ರವೇಶ ಪಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment