ಮುಂಬೈ ಆಸ್ಪತ್ರೆಯಿಂದ ಅಮೆರಿಕಾಗೆ ಶಾರುಖ್ ಖಾನ್​​ ದಿಢೀರ್ ಶಿಫ್ಟ್: ಕಿಂಗ್ ​ಖಾನ್​​ಗೆ ಏನಾಯ್ತು..?

author-image
Gopal Kulkarni
Updated On
ಮುಂಬೈ ಆಸ್ಪತ್ರೆಯಿಂದ ಅಮೆರಿಕಾಗೆ ಶಾರುಖ್ ಖಾನ್​​ ದಿಢೀರ್ ಶಿಫ್ಟ್: ಕಿಂಗ್ ​ಖಾನ್​​ಗೆ ಏನಾಯ್ತು..?
Advertisment
  • ಮುಂಬೈ ಆಸ್ಪತ್ರೆಯಲ್ಲಿ ಶಾರುಖ್ ಶಸ್ತ್ರ ಚಿಕಿತ್ಸೆ ವೇಳೆ ವೈದ್ಯರ ಯಡವಟ್ಟು!
  • ದಿಢೀರ್ ಅಂತ ಅಮೆರಿಕಾಗೆ ಹಾರಿದ್ದು ಯಾಕೆ ಬಾಲಿವುಡ್ ಬಾದ್​ಶಾ?
  • ಇತ್ತೀಚೆಗೆ ಕಿಂಗ್​ಖಾನ್ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗ್ತಿರೋದ್ಯಾಕೆ?

ಮುಂಬೈ: ಶಾರುಖ್​ ಖಾನ್ ಅಭಿಮಾನಿಗಳು ಈಗಲೂ ಚಿಂತೆಯಲ್ಲಿದ್ದಾರೆ. ಇತ್ತೀಚೆಗೆ ಶಾರುಖ್ ಆರೋಗ್ಯದಲ್ಲಿ ಹೆಚ್ಚು ಕಡಿಮೆ ಆಗುತ್ತಿದೆ. ಈ ಬಾರಿಯ ಐಪಿಎಲ್ ವೇಳೆ ಶಾರುಖ್​ ಹೀಟ್ ಸ್ಟ್ರೋಕ್​ನಿಂದ ಬಳಲುತ್ತಿರೋದರ ಬಗ್ಗೆ ಸುದ್ದಿಯಾಗಿತ್ತು. ಈಗ ಮತ್ತೊಂದು ವಿಷಯಕ್ಕಾಗಿ ಮುಂಬೈನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಶಾರುಖ್ ಖಾನ್ ಚಿಕಿತ್ಸೆಯಲ್ಲಿ ಹೆಚ್ಚು ಕಡಿಮೆಯಾದ ಕಾರಣಕ್ಕೆ ದಿಢೀರನೇ ಯುಎಸ್​ಗೆ ಚಿಕಿತ್ಸೆಗೆಂದು ಹಾರಿದ್ದಾರೆ.

ಇದನ್ನೂ ಓದಿ: ರಾಕಿ ಭಾಯ್​​​ಗೆ ಸವಾಲೆಸೆದ ಪ್ರಭಾಸ್​! ‘ಟಾಕ್ಸಿಕ್’ ಸಿನಿಮಾಗೆ ‘ದಿ ರಾಜಾಸಾಬ್’ ಫೈಟ್​​

ಮೂಲಗಳ ಪ್ರಕಾರ, ಶಾರುಖ್ ಖಾನ್ ಕಣ್ಣಿನ ಶಸ್ತ್ರ ಚಿಕಿತ್ಸೆಗಾಗಿ ಯುಎಸ್​ಗೆ ಪ್ರಯಾಣ ಬೆಳೆಸಿದ್ದಾರೆ. ಜುಲೈ 28 , 29ರಂದು ಶಾರುಖ್​ ಖಾನ್ ಕಣ್ಣಿನ ಚಿಕಿತ್ಸೆಗಾಗಿಯೇ ಮುಂಬೈನ ಆಸ್ಪತ್ರೆಯೊಂದಕ್ಕೆ ಬಂದಿದ್ದರು. ಆದ್ರೆ ಕಣ್ಣಿನ ಚಿಕಿತ್ಸೆ ಅಂದುಕೊಂಡಂತೆ ಆಗಲಿಲ್ಲ, ಹೀಗಾಗಿ ಚಿಕಿತ್ಸೆ ವೇಳೆ ಆಗಿರುವ ಯಡವಟ್ಟನ್ನು ಸರಿ ಮಾಡಿಕೊಳ್ಳುವುದಕ್ಕಾಗಿ ಶಾರುಖ್ ಯುಎಸ್​ಗೆ ಪ್ರಯಾಣ ಬೆಳೆಸಿದ್ದಾರೆ.

ಬಲ್ಲ ಮೂಲಗಳು ಹೇಳುವ ಪ್ರಕಾರ, ಶಾರುಖ್ ಖಾನ್ ಅನಂತ್ ಅಂಬಾನಿ, ರಾಧಿಕಾ ಮದುವೆಗೆ ಮೊದಲೇ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ರು. ಒಂದು ಕಣ್ಣಿಗೆ ಪೊರೆ ತೆಗೆಸುವ ಸಲುವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು . ಈಗ ಎರಡನೇ ಕಣ್ಣಿನ ಶಸ್ತ್ರ ಚಿಕಿತ್ಸೆಗೆಂದು ಹೋದಾಗ ಮುಂಬೈ ಆಸ್ಪತ್ರೆಯ ವೈದ್ಯರು ಏನೋ ಯಡವಟ್ಟು ಮಾಡಿದ್ದಾರೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಎಂದು ಶಾರುಖ್ ಯುಎಸ್​ಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment