ಮತ್ತೊಂದು ಬಿಗ್ ಬಜೆಟ್​ಗೆ ಕೈ ಹಾಕಿದ್ರಾ ಪುಷ್ಪ ಡೈರೆಕ್ಟರ್​​.. ಶಾರುಖ್​ ಖಾನ್​ ಜತೆ ಸಿನಿಮಾ ಮಾಡ್ತಾರಾ ಸುಕುಮಾರ್?

author-image
Bheemappa
Updated On
ಮತ್ತೊಂದು ಬಿಗ್ ಬಜೆಟ್​ಗೆ ಕೈ ಹಾಕಿದ್ರಾ ಪುಷ್ಪ ಡೈರೆಕ್ಟರ್​​.. ಶಾರುಖ್​ ಖಾನ್​ ಜತೆ ಸಿನಿಮಾ ಮಾಡ್ತಾರಾ ಸುಕುಮಾರ್?
Advertisment
  • ಹೊಸ ಸಿನಿಮಾ ಬಜೆಟ್​ ಕೇಳಿದ್ರೆ ನಿಮ್ಗೆ ಶಾಕ್ ಆಗೋದು ಗ್ಯಾರಂಟಿ!
  • ಮೈತ್ರಿ ಮೂವಿ ಮೇಕರ್ಸ್ ಅಡಿ ಚಿತ್ರ ಮಾಡ್ತಾರಾ ಶಾರುಖ್​ ಖಾನ್?
  • ಸದ್ಯ ಆರ್​ಸಿ- 17 ಸಿನಿಮಾಕ್ಕೆ ತಲೆ ಕೆಡಿಸಿಕೊಂಡಿರುವ ಸುಕುಮಾರ್

ಟಾಲಿವುಡ್​ನ ಸ್ಟಾರ್ ಡೈರೆಕ್ಟರ್​ಗಳಲ್ಲಿ ಒಬ್ಬರಾದ ಸುಕುಮಾರ್ ಅವರು ಸಿನಿಮಾ ಮಾಡಿದರೆ ಯಶಸ್ಸು ಪಕ್ಕಾ. ಪುಷ್ಪ, ಪುಷ್ಪ- 2, ರಂಗಸ್ಥಳಂ, ನಾನಕು ಪ್ರೇಮತೋ, ಆರ್ಯ-2 ಸೇರಿದಂತೆ ಮಾಡಿದ ಮೂವಿಗಳೆಲ್ಲ ಬಿಗ್ ಹಿಟ್​ ಕೊಟ್ಟಿವೆ. ಇದರ ಬೆನ್ನಲ್ಲೇ ಬಾಲಿವುಡ್​ ಬಾದ್​ಶಾ ಶಾರುಖ್​ ಖಾನ್​ ಜೊತೆ ಸುಕುಮಾರ್​ ಸಿನಿಮಾ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ತೆಲುಗು ಸಿನಿಮಾ ಕ್ಷೇತ್ರದಲ್ಲಿ ಖ್ಯಾತ ನಿರ್ದೇಶಕರಾಗಿರುವ ಸುಕುಮಾರ್​ ಜೊತೆ ಕಿಂಗ್ ಖಾನ್ ಶಾರುಖ್ ಅವರ ಸಿನಿಮಾ ಸೆಟ್ಟೇರಲಿದೆ ಎನ್ನುವ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ ಅಡಿ ಪ್ಯಾನ್ ಇಂಡಿಯಾ ಆ್ಯಕ್ಷನ್- ಡ್ರಾಮಾಗೆ ಶಾರುಖ್ ಖಾನ್​ ಹೀರೋ ಆಗ್ತಿದ್ದಾರಂತೆ. ಅಲ್ಲದೇ ಈ ಸಿನಿಮಾದಲ್ಲಿ ರಾಜಕೀಯ ಕಥೆಯನ್ನು ಹೊಂದಿರುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ಭರ್ಜರಿ ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಿದ NIACL.. ಒಟ್ಟು ಎಷ್ಟು ಹುದ್ದೆಗಳು ಇವೆ?

publive-image

ಮೈತ್ರಿ ಮೂವಿ ಮೇಕರ್ಸ್ ಅಡಿ ಪ್ಯಾನ್​ ಇಂಡಿಯಾ ಸಿನಿಮಾ ಮಾಡಲು ದೊಡ್ಡ ಯೋಜನೆ ಇದೆ. ಆದರೆ ಈ ಸಿನಿಮಾ ಬಗ್ಗೆ ಈಗಲೇ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಶಾರುಖ್​ ಖಾನ್ ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಷನ್​ನಲ್ಲಿ ಸಿನಿಮಾ ಬರುವ ನಿರೀಕ್ಷೆಯಂತೂ ಇದೆ. ಸ್ಕ್ರಿಪ್ಟ್​ ಅಂತಿಮಗೊಳ್ಳಲು ಇನ್ನು ಎರಡ್ಮೂರು ತಿಂಗಳಂತೂ ಬೇಕಾಗುತ್ತವೆ. 1000 ಕೋಟಿ ರೂಪಾಯಿ ಬಜೆಟ್​ ಎನ್ನಲಾಗುತ್ತಿದೆ.

ಸಿನಿ ರಂಗದಲ್ಲಿ ಈ ಇಬ್ಬರು ಉನ್ನತ ಸ್ಥಾನದಲ್ಲಿ ಇರುವುದರಿಂದ ಈಗಾಗಲೇ ಸಾಕಷ್ಟು ಬ್ಯುಸಿ ಇದ್ದಾರೆ. ನಿರ್ದೇಶಕ ಸುಕುಮಾರ್ ಅವರು ರಾಮ್​ಚರಣ್​ ಜೊತೆ ಮಾಡುತ್ತಿರುವ ಆರ್​ಸಿ17 ಸಿನಿಮಾದಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತ ಶಾರುಖ್​ಗೂ ಬಿಡುವಿಲ್ಲದ ಸಿನಿಮಾ ಕೆಲಸಗಳಿವೆ. ಆದರೆ ಮೈತ್ರಿ ಮೂವಿ ಮೇಕರ್ಸ್, ಶಾರುಖ್ ಜೊತೆ ಸಂಪರ್ಕದಲ್ಲಿದೆ ಎಂಬ ಸುದ್ದಿ ಅಂತೂ ದಿಟ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment