ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..

author-image
Ganesh
Updated On
ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..
Advertisment
  • ಮಹಾ ಕುಂಭಮೇಳದಲ್ಲಿ ಇವತ್ತು 8 ದೇಶಗಳ ಪ್ರತಿನಿಧಿಗಳು ಭಾಗಿ
  • ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲಿರೋ 21 ಪ್ರತಿನಿಧಿಗಳು
  • ಪಿನ್‌ಲೆಂಡ್‌, ಗಯಾನಾ, ಮಲೇಷ್ಯಾ ನಾಯಕರಿಂದ ಗಂಗಸ್ನಾನ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕೋಟ್ಯಂತರ ಭಕ್ತರು ಚಳಿ ಮತ್ತು ದಟ್ಟವಾದ ಮಂಜಿನ ಮಧ್ಯೆಯೂ ಗಂಗಾ, ಯಮುನಾ ಮತ್ತು ಸರಸ್ವತಿ ಪವಿತ್ರ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನವನ್ನ ಮಾಡ್ತಿದ್ದಾರೆ. ಇನ್ನೂ ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ ಯುಪಿಯಲ್ಲಿ ಭಾರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.

ಮೌನಿ ಅಮವಾಸ್ಯೆಯಂದು 8-10 ಕೋಟಿ ಭಕ್ತರ ನಿರೀಕ್ಷೆ

ಜನವರಿ 13 ರಂದು ಪುಷ್ಯ ಪೂರ್ಣಿಮಾ ಸ್ನಾನ.. ಜನವರಿ 15 ರಂದು ಮಕರ ಸಂಕ್ರಾಂತಿ ಪುಣ್ಯಸ್ನಾನ.. ಇವೆರೆಡು ಮುಗಿದಿದೆ.. ಸದ್ಯಕ್ಕೆ ಮುಂದಿರೋದು ಜನವರಿ 29 ರಂದು ನಡೆಯೋ ಮೌನಿ ಅಮಾವಾಸ್ಯೆ ಪುಣ್ಯಸ್ನಾನ.. ಜನವರಿ 13 ರಂದು 1.75 ಕೋಟಿಯಷ್ಟು ಭಕ್ತರು ಸ್ನಾನ ಮಾಡಿದ್ರು.. ಜನವರಿ 15 ರಂದು 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ರು.. ಜನವರಿ 29 ರಂದು ಸುಮಾರು 8 ರಿಂದ 10 ಕೋಟಿ ಭಕ್ತವೃಂದ ಸೇರೋ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತ ಮಟ್ಟದ ಪರಿಶೀಲನಾ ಸಭೆ ಕರೆದ್ರು. ಭಕ್ತರಿಗೆ ಮಾಡಬೇಕಾದ ವ್ಯವಸ್ಥೆಗಳ ಬಗ್ಗೆ ಕೆಲ ಸೂಚನೆಗಳನ್ನ ನೀಡಿದ್ದಾರೆ.

ಇದನ್ನೂ ಓದಿ:ಮಹಾಕುಂಭ ಸ್ನಾನದ ನಂತರ ಈ ವಸ್ತು ದಾನ ಮಾಡಿದ್ರೆ ಶುಭ.. ಪೂರ್ವಜರ ಆತ್ಮಕ್ಕೂ ಸಂತೋಷ..!

publive-image

ಪಿನ್‌ಲೆಂಡ್‌, ಗಯಾನಾ, ಮಲೇಷ್ಯಾ, ಮಾರಿಷಸ್‌, ಸಿಂಗಪೂರ್, ದಕ್ಷಿಣ ಆಫ್ರಿಕಾ ಸೇರಿ ಸುಮಾರು 10 ದೇಶಗಳ 21 ಪ್ರತಿನಿಧಿಗಳ ನಿಯೋಗ ಪ್ರಯಾಗ್‌ರಾಜ್​ಗೆ ಇವತ್ತು ಭೇಟಿ ನೀಡಲಿದೆ. ಇವತ್ತು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನದಲ್ಲಿ ಈ ನಿಯೋಗ ಪಾಲ್ಗೊಳ್ಳಲಿದೆ. ಮಹಾಕುಂಭಮೇಳದಲ್ಲಿ ರಮೇಶ್ ಕುಮಾರ್ ಮಾಂಝಿ ಅಲಿಯಾಸ್ ಕಾಂತೆ ವಾಲೆ ಬಾಬಾ ಪ್ರತ್ಯಕ್ಷರಾದ್ರು. ಇವರು ಕಳೆದ 40 ವರ್ಷಗಳಿಂದ ಮಲಗೋದಕ್ಕೆ ಮುಳ್ಳಿನ ಗಿಡಗಳನ್ನು ಬಳಸುತ್ತಾರಂತೆ.

publive-image

ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮ ಘಾಟ್‌ನಲ್ಲಿ ಸಂಜೆ ಆರತಿ ನಡೆಸಲಾಗುತ್ತಿದೆ. ನಿನ್ನೆ ಸಂಜೆ ವೇಳೆಯ ಆರತಿಯನ್ನ ನೋಡಲು ಲಕ್ಷಾಂತರ ಭಕ್ತರು ಸೇರಿದ್ದರು. ಈಶಾ ಫೌಂಡೇಷನ್ ಸಂಸ್ಥಾಪಕ.. ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದು, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲಿದ್ದಾರೆ. ಒಟ್ಟಾರೆ, ಪ್ರಯಾಗ್‌ರಾಜ್‌ನಲ್ಲಿ ಐತಿಹಾಸಿಕ ವೈಭವ ಮನೆಮಾಡಿದೆ. ಶಾಹಿಸ್ನಾನದ ಪುಣ್ಯಕ್ಕೆ ಭಕ್ತರು ಪಾತ್ರರಾಗುತ್ತಿದ್ದಾರೆ.

ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರೆಯ ಸ್ಪೆಷಲ್‌ ಮಿರ್ಚಿ ಬಜ್ಜಿ.. ಇದರ ವಿಶೇಷತೆ ಏನು ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment