‘ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತವನ್ನೇ ಮರೆತು ಬಿಡುತ್ತಾರೆ’- ಶಾಹಿದ್‌ ಆಫ್ರಿದಿ ಅಚ್ಚರಿ ಹೇಳಿಕೆ!

author-image
Ganesh Nachikethu
Updated On
‘ಕೊಹ್ಲಿ ಪಾಕಿಸ್ತಾನಕ್ಕೆ ಬಂದ್ರೆ ಭಾರತವನ್ನೇ ಮರೆತು ಬಿಡುತ್ತಾರೆ’- ಶಾಹಿದ್‌ ಆಫ್ರಿದಿ ಅಚ್ಚರಿ ಹೇಳಿಕೆ!
Advertisment
  • ಮುಂದಿನ ವರ್ಷ ನಡೆಯಲಿರೋ ಐಸಿಸಿ ಚಾಂಪಿಯನ್ ಟ್ರೋಫಿ
  • ಐಸಿಸಿ ಚಾಂಪಿಯನ್ ಟ್ರೋಫಿಗೆ ಆತಿಥ್ಯ ವಹಿಸಲಿರೋ ಪಾಕ್​​​​..!
  • ವಿರಾಟ್​​ ಕೊಹ್ಲಿಗೆ ಪಾಕ್​​ಗೆ ಬರುವಂತೆ ಶಾಹಿದ್‌ ಆಫ್ರಿದಿ ಆಹ್ವಾನ

ಮುಂದಿನ ವರ್ಷ ನಡೆಯಲಿರೋ ಐಸಿಸಿ ಚಾಂಪಿಯನ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಈಗಾಗಲೇ ಭದ್ರತಾ ದೃಷ್ಟಿಯಂದ ಟೀಮ್​ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟನೆ ನೀಡಿದೆ. ಜತೆಗೆ ಚಾಂಪಿಯನ್​ ಟ್ರೋಫಿಯನ್ನು ಪಾಕ್​ ಬದಲಿಗೆ ದುಬೈ ಅಥವಾ ಶ್ರೀಲಂಕಾದಲ್ಲಿ ಆಯೋಜನೆ ಮಾಡಿ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಮನವಿ ಮಾಡಿದೆ.

ಇನ್ನು, ಈ ಮಧ್ಯೆ ಟೀಮ್​ ಇಂಡಿಯಾದ ಸ್ಟಾರ್​ ಬ್ಯಾಟರ್​​ ವಿರಾಟ್​ ಕೊಹ್ಲಿಗೆ ಪಾಕ್​​ಗೆ ಬರುವಂತೆ ಮಾಜಿ ಸ್ಟಾರ್​ ಆಲ್​ರೌಂಡರ್​ ಶಾಹಿದ್‌ ಆಫ್ರಿದಿ ಆಹ್ವಾನ ನೀಡಿದ್ದಾರೆ. ಪಾಕ್​ನಲ್ಲಿ ನಡೆಯಲಿರೋ 2025ರ ಚಾಂಪಿಯನ್‌ ಟ್ರೋಫಿಯಲ್ಲಿ ಕೊಹ್ಲಿ ಆಡಬೇಕು ಎಂದಿದ್ದಾರೆ.

publive-image

ವಿರಾಟ್‌ ಕೊಹ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ರೆ ಭಾರತವನ್ನೇ ಮರೆತು ಬಿಡುತ್ತಾರೆ. ಕಾರಣ ಕೊಹ್ಲಿಗೆ ಪಾಕಿಸ್ತಾನದಲ್ಲಿ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಕೊಹ್ಲಿಗಾಗಿ ಇಡೀ ಪಾಕಿಸ್ತಾನ ಕಾಯುತ್ತಿದೆ ಎಂದರು ಶಾಹಿದ್​ ಆಫ್ರಿದಿ.

ಬರೋಬ್ಬರಿ 17 ವರ್ಷಗಳ ನಂತರ ಭಾರತ ತಂಡ ಪಾಕ್​ ಪ್ರವಾಸ ಕೈಗೊಳ್ಳಲಿ ಎಂದು ಪಾಕ್​​​ ಕ್ರಿಕೆಟ್​​​​ ಮಂಡಳಿ ಸಾಕಷ್ಟು ಸರ್ಕಸ್​ ನಡೆಸುತ್ತಿದೆ. ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲೇ ನಡೆಸಲು ಪಾಕ್​​ ತಯಾರಿಗೆ ಮುಂದಾಗಿದೆ.

ಇದನ್ನೂ ಓದಿ:ಕನಿಷ್ಠ ಸೌಜನ್ಯಕ್ಕಾದರೂ ಒಂದು ಮಾತು ಕೇಳಲಿಲ್ಲ.. ಪಾಂಡ್ಯಗೆ ಕೊಟ್ಟ ಕಿಮ್ಮತ್ತು ಕೊಹ್ಲಿಗೆ ಕೊಡಲಿಲ್ಲ BCCI

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment