/newsfirstlive-kannada/media/post_attachments/wp-content/uploads/2025/04/Shah-Rukh-Khan.jpg)
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಭೀಕರ ದಾಳಿಯಲ್ಲಿ ಭಾರತದ ಹಲವು ರಾಜ್ಯದ ಪ್ರವಾಸಿಗರು ಬಲಿಯಾಗಿದ್ದಾರೆ. ಉಗ್ರರ ನರಮೇಧದಲ್ಲಿ ಒಟ್ಟು 26 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಮಂಜುನಾಥ್​ ರಾವ್ ಹಾಗೂ ಭರತ್​ ಭೂಷಣ್​ ಕೂಡ ಉಸಿರು ನಿಲ್ಲಿಸಿದ್ದಾರೆ.
ಇದನ್ನೂ ಓದಿ:ಹಣೆಯ ಬೊಟ್ಟು, ಕೈ ಬಳೆ ನೋಡಿ ಗುಂಡಿಟ್ರು.. ಶಿವಮೊಗ್ಗದಲ್ಲಿ ಕರಾಳತೆ ಬಿಚ್ಚಿಟ್ಟ ಮಂಜುನಾಥ್ ಮಗ ಅಭಿ ಜೈ!
/newsfirstlive-kannada/media/post_attachments/wp-content/uploads/2025/04/Shah-Rukh-Khan1.jpg)
ಇದರ ಮಧ್ಯೆ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಅವರು ನಾನು ಕಾಶ್ಮೀರಕ್ಕೆ ಮಾತ್ರ ಹೋಗಲ್ಲ ಎಂದು ಹೇಳಿರೋ ಮಾತು ಸೋಷಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಹೌದು, ಈ ಹಿಂದೆ ನಟ ಶಾರುಖ್ ಖಾನ್ 2012ರಲ್ಲಿ ‘ಜಬ್​ ತಕ್​ ಹೈ ಜಾನ್​’ ಸಿನಿಮಾದ ಶೂಟಿಂಗ್​ಗಾಗಿ ಕಾಶ್ಮೀರಕ್ಕೆ ಹೋಗಿದ್ದರು. ಅದಾದ ಬಳಿಕ ಬರೋಬ್ಬರಿ 11 ವರ್ಷಗಳ ಬಳಿಕ ‘ಡಂಕಿ’ ಸಿನಿಮಾದ ಶೂಟಿಂಗ್​ ಸಲುವಾಗಿ ಕಾಶ್ಮೀರಕ್ಕೆ ತೆರಳಿದ್ದರು. ಇಷ್ಟು ಬಿಟ್ಟು ಎಂಜಾಯ್​ ಮಾಡಲು ಕುಟುಂಬಸ್ಥರ ಜೊತೆಗೆ ಅವರು ಒಂದು ಬಾರಿಯೂ ಕಾಶ್ಮೀರಕ್ಕೆ ಭೇಟಿ ಕೊಟ್ಟಿಲ್ಲ. ಇದಕ್ಕೆ ಒಂದು ಕಾರಣ ಕೂಡ ಇದೆ.
View this post on Instagram
ಈ ಹಿಂದೆ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ತಮ್ಮ ದಿವಂಗತ ತಂದೆಗೆ ನೀಡಿದ್ದ ಭರವಸೆಯಿಂದಾಗಿ ಕಾಶ್ಮೀರಕ್ಕೆ ಭೇಟಿ ನೀಡಿಲ್ಲ ಎಂದು ಹೇಳಿದ್ದರು. ತನ್ನ ತಂದೆಯೊಂದಿಗೆ ಮಾತಾಡಿದ್ದನ್ನು ನೆನಪಿಸಿಕೊಳ್ಳುತ್ತಾ, ನನ್ನ ತಂದೆಯ ತಾಯಿ ಕಾಶ್ಮೀರಿ. ಜೀವನದಲ್ಲಿ ಈ ಮೂರು ಪ್ರದೇಶಗಳಿಗೆ ಹೋಗಲೇಬೇಕು. ಒಂದು ಇಸ್ತಾನ್‌ಬುಲ್, ಇಟಲಿ ರೋಮ್ ಮತ್ತು ಕಾಶ್ಮೀರಕ್ಕೆ ಒಮ್ಮೆಯಾದರೂ ಭೇಟಿ ನೀಡಬೇಕು. ಇಸ್ತಾನ್‌ಬುಲ್, ಇಟಲಿ ರೋಮ್ ಬಿಟ್ಟರು ಪರವಾಗಿಲ್ಲ. ಆದ್ರೆ ಕಾಶ್ಮೀರ ಅನ್ನು ನೋಡಲೇಬೇಕು ಅಂದಿದ್ದರು. ಆದ್ರೆ ನನ್ನ ತಂದೆ ಬಹಳ ಬೇಗ ನಿಧನರಾದರು. ನಾನು ಇಡೀ ಜಗತ್ತನ್ನು ಸೂತ್ತಾಡಿದ್ದೇನೆ. ಆದರೆ ಕಾಶ್ಮೀರಕ್ಕೆ ಎಂದಿಗೂ ಹೋಗಿಲ್ಲ. ನನಗೆ ಅನೇಕ ಅವಕಾಶಗಳು ಇದ್ದವು. ಸ್ನೇಹಿತರು ನನ್ನನ್ನು ಆಹ್ವಾನಿಸಿದರು. ಕುಟುಂಬ ರಜೆಗೆ ಹೋದರು. ಆದರೆ ನಾನು ಎಂದಿಗೂ ಹೋಗಲಿಲ್ಲ. ಏಕೆಂದರೆ ನನ್ನ ತಂದೆ ಹೇಳಿದ್ದರು ನಾನು ಇಲ್ಲದೇ ಕಾಶ್ಮೀರವನ್ನು ನೋಡಬೇಡ, ಅದನ್ನು ನನಗೆ ನಾನು ತೋರಿಸುತ್ತೇನೆ ಎಂದಿದ್ದರು. ಹೀಗಾಗಿ ತಂದೆಗೆ ಕೊಟ್ಟ ಮಾತಿನಿಂದ ಸ್ಟಾರ್​ ನಟ ಇನ್ನೂ ಸಹ ಸರಿಯಾಗಿ ಕಾಶ್ಮೀರವನ್ನು ನೋಡಲು ಆಗಲಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us