newsfirstkannada.com

ಸಿನಿಮಾದಷ್ಟೇ ರೋಚಕ ಈ ಲವ್ ಸ್ಟೋರಿ.. ಹೆಂಡ್ತಿಗಾಗಿ ಪ್ರಾಣ ಬೇಕಾದ್ರೂ ಕೊಡ್ತಾರೆ ಸ್ಟಾರ್​ ಕ್ರಿಕೆಟರ್​​

Share :

Published January 11, 2024 at 8:26pm

    ಕೌಂಟಿಗೆ ಹೋಗಿದ್ದ ಶಕೀಬ್​ಗೆ ಸಿಕ್ಕಿದ್ದು ಶಿಶಿರ್!

    ಶಿಶಿರ್ ಪ್ರೇಮ ಪಾಶದಲ್ಲಿ ಸಿಲುಕಿದ್ದೇಗೆ ಶಕೀಬ್..?

    ಮೊದಲ ನೋಟದಲ್ಲೇ ಇಬ್ಬರಿಗೂ ಪ್ರೇಮಾಂಕುರ

ಕ್ರಿಕೆಟ್​ ಲೋಕದಲ್ಲಿ ಮತ್ತೆ ಕಿರಿಕ್ ಮ್ಯಾನ್​​​​​​ ಶಕೀಬ್​ ಅಲ್​ ಹಸನ್​ ಟ್ರೆಂಡಿಂಗ್​ನಲ್ಲಿದ್ದಾರೆ. ಕೋಪ ಬಂದ್ರೆ ಶಕೀಬ್​ ಆಲ್​ ಹಸನ್​​ ಅಭಿಮಾನಿಗಳನ್ನೂ ಬಿಡಲ್ಲ. ಯಾವುದೇ ಸ್ಥಳ ಇರಲಿ ಹೊಡೆದಾಟಕ್ಕೆ ಮುಂದಾಗ್ತಾರೆ. ಇಂತಾ ಕೋಪಿಷ್ಟ ಶಕೀಬ್​, ಆ ಲೇಡಿ ಮುಂದೆ ಮಾತ್ರ ಥಂಡಾ ಹೋಡಿತಾರೆ.

ಶಕೀಬ್ ಅಲ್ ಹಸನ್.. ಮಾಡ್ರನ್ ಡೇ ಕ್ರಿಕೆಟ್​ನ ಶ್ರೇಷ್ಠ ಆಲ್​ರೌಂಡರ್​. ಬಾಂಗ್ಲಾದ ದಿಗ್ಗಜ ಆಟಗಾರ.. ಬಾಂಗ್ಲಾದ ಅದೆಷ್ಟೋ ಯುವ ಪ್ರತಿಭೆಗಳ ಪಾಲಿನ ರೋಲ್ ಮಾಡೆಲ್. ಒರೋಬ್ಬರಿ 2 ದಶಕಗಳಿಂದ ವಿಶ್ವ ಕ್ರಿಕೆಟ್​ನಲ್ಲಿ ತನ್ನದೇ ಛಾಪೂ ಮೂಡಿಸಿರುವ ಶಕೀಬ್​​ಗೆ ತನ್ನ ಕೆಟ್ಟ ಕೋಪವೇ ವಿಲನ್ ಆಗಿದೆ..

ಹೌದು! ಸಣ್ಣ ಸಣ್ಣ ವಿಚಾರಕ್ಕೂ ವೈಲೆಂಟ್ ಆಗೋ ಶಕೀಬ್, ಆನ್​​ ಫೀಲ್ಡ್​ನಲ್ಲಿ ಅಲ್ಲ.. ಆಫ್​ ದಿ ಫೀಲ್ಡ್​ನಲ್ಲೂ ತನ್ನ ಸಿಟ್ಟಿ ಕೈಗೆ ಬುದ್ದಿ ಕೊಟ್ಟು ಟೀಕೆಗೆ ಗುರಿಯಾಗಿದ್ದೆ ಹೆಚ್ಚು. ಮೊನ್ನೆ ಎಲೆಕ್ಷನ್​ನಲ್ಲಿ ಗೆದ್ದ ಖುಷಿಯಲ್ಲಿದ್ದಾಗ್ಲೂ ಫ್ಯಾನ್​ ಮೇಲೆ ಕೈ ಎತ್ತಿ ಸುದ್ದಿಯಾಗಿದ್ರು. ಇಂತಾ ವೈಲೆಂಟ್​ ಶಕೀಬ್​​, ಆಕೆಯ ಮುಂದೆ ಮಾತ್ರ ಫುಲ್ ಸೈಲೆಂಟ್.! ಅಂದ್ಹಾಗೆ ಆಕೆ ಬೇಱರು ಅಲ್ಲ.. ಉಮ್ಮಿ ಅಹ್ಮದ್ ಶಿಶಿರ್.. ಶಕೀಬ್​​ರ ಪತ್ನಿ ಈಕೆ.

ಉಮ್ಮಿ ಅಹ್ಮದ್ ಶಿಶಿರ್, ಶಕೀಬ್ ಅಲ್​ ಹಸನ್​​ರ ಮಡದಿ. ಇವರಿಬ್ಬರು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟು 12 ವರುಷಗಳೇ ಕಳೆದಿವೆ. ಮೂವರು ಮಕ್ಕಳೂ ಇದ್ದಾರೆ. ಸಾವರ್ಜನಿಕ ಜೀವನದಲ್ಲಿ ಕೋಪ ತಾಪ ಪ್ರದರ್ಶನ ಮಾಡೋ ಶಕೀಬ್​ ಆಲ್​ ಹಸನ್​ ಪತ್ನಿ ಮುಂದೆ ಮಾತ್ರ ಸೈಲೆಂಟ್​ ಆದ್ಮಿ. ಅಂದ್ಹಾಗೆ ಈ ಉಮ್ಮಿ ಅಹ್ಮದ್ ಶಿಶಿರ್ ಹಾಗೂ ಶಕೀಬ್ ಆಲ್​ ಹಸನ್ ಲವ್ ಸ್ಟೋರಿ ಮಾತ್ರ ಸಖತ್ ಇಂಟ್ರೆಸ್ಟಿಂಗ್ ಆಗಿದೆ.

ಕೌಂಟಿಗೆ ಆಡಲು ಹೋಗಿದ್ದ ಶಕೀಬ್​ಗೆ ಆಗಿದ್ದು ಲವ್​​.!
ಶಿಶಿರ್ ಪ್ರೇಮ ಪಾಶದಲ್ಲಿ ಸಿಲುಕಿದ ಆಲ್​​ರೌಂಡರ್​.!

ಶಕೀಬ್ ಅಲ್ ಹಸನ್, ಉಮ್ಮಿ ಅಹ್ಮದ್ ಶಿಶಿರ್ ಲವ್ ಸ್ಟೋರಿ ಶುರುವಾಗಿದ್ದೇ ಆಕಸ್ಮಿಕವಾಗಿದೆ. ಆಗಷ್ಟೇ ಕ್ರಿಕೆಟ್​ ಲೋಕದಲ್ಲಿ ಮಿಂಚಲು ಆರಂಭಿಸಿದ್ದ ಶಕೀಬ್ ಆಲ್​ ಹಸನ್​​​​​​​​​​​​​, 2010ರಲ್ಲಿ ಕೌಂಟಿ ಕ್ರಿಕೆಟ್​​ನಲ್ಲಿ ಆಡಿದ್ರು. ಆಗ ವೋರ್ಸೆಸ್ಟರ್‌ಶೈರ್ ತಂಡವನ್ನ ಪ್ರತಿನಿಧಿಸಿದ್ದ ಶಕೀಬ್, ಪ್ರತಿಷ್ಠಿತ ಹೋಟೆಲ್​ವೊಂದರಲ್ಲಿ ತಂಗಿದ್ದರು.. ಇದೇ ಹೋಟೆಲ್​​ನಲ್ಲಿ ಕಾಣಿಸಿಕೊಂಡ ಅಂದದ ಗೊಬೆಯೇ ಈ ಉಮ್ಮಿ ಅಹ್ಮದ್ ಶಿಶಿರ್.!

ಮೊದಲ ನೋಟದಲ್ಲೇ ಶಕೀಬ್​, ಉಮ್ಮಿ ಅಹ್ಮದ್ ಶಿಶಿರ್​ಗೆ ಕ್ಲೀನ್​ಬೋಲ್ಡ್​ ಆಗಿ ಬಿಟ್ರು. ನೋಡಿದ ಕೂಡಲೇ ಪ್ರೇಮ ಪಾಶದಲ್ಲಿ ಸಿಲುಕಿದ್ದ ಶಕೀಬ್​, ಅದೇ ಹೋಟೆಲ್​ನಲ್ಲಿ ಬೇಟಿ ಮಾಡೆ ಬಿಟ್ರು. ಮೊದಲ ಮಾತುಕತೆಯೇ ಸ್ನೇಹಕ್ಕೆ ಸೇತುವೆಯಾಯ್ತು,. ದಿನ ಕಳೆದಂತೆ ಸ್ನೇಹವೂ ಪ್ರೀತಿಯಾಗಿ ಬದಲಾಗಿಬಿಡ್ತು.

ಬಾಂಗ್ಲಾ ಟು ಅಮೆರಿಕಾ.. ಅಮೆರಿಕಾ ಟು ಇಂಗ್ಲೆಂಡ್
ಯಾರು ಈ ಚೆಂದನದ ಗೊಂಬೆ ಉಮ್ಮಿ ಅಹ್ಮದ್..?

ಉಮ್ಮಿ ಅಹ್ಮದ್ ಶಿಶಿರ್, ಮೂಲತಃ ಬಾಂಗ್ಲಾದೇಶದವರು. ಆದ್ರೆ, ಈಕೆ 10 ವರ್ಷ ವಯಸ್ಸಿನಲ್ಲಿದ್ದಾಗ್ಲೇ, ಕುಟುಂಬ ಅಮೆರಿಕಾಗೆ ಶಿಫ್ಟ್​ ಆಗಿತ್ತು. ನಂತರ ಇಂಗ್ಲೆಂಡ್​​​​ನಲ್ಲಿ ಉನ್ನತ ವಿದ್ಯಾಭಾಸ ಮುಗಿಸಿದ್ದ ಶಿಶಿರ್, ಅಲ್ಲೇ ಸಾಫ್ಟ್​​ವೇರ್ ಇಂಜಿಯರ್ ಆಗಿದ್ರು. ಇದ್ರ ಜೊತೆಗೆ ಮಾಡೆಲ್ ಆಗಿಯೂ ಶಿಶಿರ್ ಗುರುತಿಸಿಕೊಂಡಿದ್ರು.

ಜಾಹೀರಾತಿನಲ್ಲಿ ಜೊತೆಯಾಗಿ ಮಿಂಚಿಂಗ್..!

ಮಾಡೆಲ್ ಆಗಿದ್ದ ಉಮ್ಮಿ ಅಹ್ಮದ್​​ ಶಿಶಿರ್​​​​ ಹಾಗೂ ಶಕೀಬ್​​, ನಂತರ ಜಾಹೀರಾತಿನಲ್ಲೂ ಕಾಣಿಸಿಕೊಂಡರು. ಮೊದಲ ಜಾಹೀರಾತು ಹಿಟ್​ ಆಗಿದ್ದೇ ತಡ. ಈ ಜೋಡಿಗೆ ಒಂದಷ್ಟು ಜಾಹೀರಾತು ಆಫರ್​ಗಳು ಹರಿದು ಬಂದ್ವು. ಜೊತೆಯಾಗಿ ಇವ್ರು ಹೆಚ್ಚು ಹೆಚ್ಚು ಕಾಣಿಸಿಕೊಂಡ ಮೇಲೆ ಡೇಟಿಂಗ್​ ಗಾಸಿಪ್​ ಹೊರಬೀಳಲು ಹೆಚ್ಚು ದಿನಗಳೇನು ಹಿಡಿಯಲಿಲ್ಲ. ಬರೋಬ್ಬರಿ 3 ವರ್ಷಗಳ ಕಾಲ ಕೈ ಕೈಹಿಡಿದು ತಿರುಗಾಡಿದ್ದ ಈ ಜೋಡಿ, 2012ರಲ್ಲಿ ವಿವಾಹವಾದ್ರು.

ಶಕೀಬ್​ ಅಷ್ಟೇ ಫೇಮಸ್​ ಉಮ್ಮಿ ಅಹ್ಮದ್..​!

ಮಾಡೆಲ್ ಆಗಿರೋ ಉಮ್ಮಿ ಅಹ್ಮದ್​​​​​​​​​​​​​ ಶಿಶಿರ್, ಪತಿ ಶಕೀಬ್ ಅಲ್​ ಹಸನ್​ರಷ್ಟೇ ಫೇಮಸ್. ಇನ್​ಸ್ಟಾದಲ್ಲಿ ಬರೋಬ್ಬರಿ 2.3 ಮಿಲಿಯನ್ ಫಾಲೋವರ್​​ಗಳನ್ನ ಹೊಂದಿರುವ ಉಮ್ಮಿ ಅಹ್ಮದ್​ಗೆ ಹಲ ಫ್ಯಾನ್ಸ್​ ಫೇಜ್​​ಗಳೂ ಇವೆ. ಈಕೆಯ ಫೋಟೋ, ವಿಡಿಯೋಗಳು ಸದಾ ಟ್ರೆಂಡಿಂಗ್​ನಲ್ಲಿ ಇರುತ್ವೆ. ಈಗಲೂ ಈ ಕ್ಯೂಟ್ ಜೋಡಿಯ ಜಾಹೀರಾತಿಗಾಗಿ, ಕಂಪನಿಗಳು ಕ್ಯೂ ನಿಲ್ತಾವೆ. ಜೊತೆ ಜೊತೆಯಾಗಿಯೇ ಜಾಹೀರಾತುಗಳಲ್ಲಿ ಮಿಂಚುತ್ತಿದ್ದಾರೆ.

ಈಕೆಯ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಶಕೀಬ್!

ಅದು 2014.. ಟೀಮ್ ಇಂಡಿಯಾ, ಬಾಂಗ್ಲಾ ಪ್ರವಾಸ ಕೈಗೊಂಡಿತು. ಮೀರ್​ಪುರ್​ನಲ್ಲಿ ನಡೆದ ಪಂದ್ಯ ವೀಕ್ಷಿಸಲು ಶಕೀಬ್​ ಪತ್ನಿ, ಸ್ಟೇಡಿಯಂಗೆ ಆಗಮಿಸಿದ್ರು. ಇದೇ ವೇಳೆ ಗ್ಯಾಲರಿಯಲ್ಲಿದ್ದ ಫೇಮಸ್ ಬ್ಯುಸಿನೆಸ್​ಮೆನ್ ಒಬ್ಬ, ಶಕೀಬ್​ ಪತ್ನಿ ಶಿಶಿರ್ ಜೊತೆ ಮಿಸ್ ಬಿಹೇವ್ ಮಾಡಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ಗ್ಯಾಲರಿಗೆ ಎಂಟ್ರಿ ನೀಡಿದ ಶಕೀಬ್, ಹಿಗ್ಗಾಮುಗ್ಗಾ ಥಳಿಸಿದ್ರು.

ಒಟ್ನಲ್ಲಿ, ಸಖತ್​​ ಶಾರ್ಟ್​ ಟೆಂಪರ್​ ಆಗಿರೋ ಶಕೀಬ್​ ಆಲ್​ ಹಸನ್​, ಪತ್ನಿ ಮುಂದೆ ಮಾತ್ರ ಸೈಲೆಂಟ್​ ಆಗಿರ್ತಾರೆ. ಹಾಗಂತ ಪತ್ನಿ ತಂಟೆಗೆ ಹೋದ್ರೆ ಮತ್ತೆ ವೈಲೆಂಟ್​ ಆಗ್ತಾರೆ. ಅದೇನೆ ಇರಲಿ, ಈ ಕೋಪ ತಾಪದ ಹೊರತಾಗಿ ಇವರಿಬ್ಬರ ಜೀವನದ ಇನ್ನಿಂಗ್ಸ್​ ಚನ್ನಾಗಿರಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಿನಿಮಾದಷ್ಟೇ ರೋಚಕ ಈ ಲವ್ ಸ್ಟೋರಿ.. ಹೆಂಡ್ತಿಗಾಗಿ ಪ್ರಾಣ ಬೇಕಾದ್ರೂ ಕೊಡ್ತಾರೆ ಸ್ಟಾರ್​ ಕ್ರಿಕೆಟರ್​​

https://newsfirstlive.com/wp-content/uploads/2024/01/Shakin-Al-Hasan.jpg

Load More