newsfirstkannada.com

Video: ಮಹಿಳೆಯರ ‘ಶಕ್ತಿ’ಗೆ ಸುಸ್ತಾದ ಕಂಡೆಕ್ಟರ್​​! ಟಿಕೆಟ್​ ನೀಡಲು ಸೀಟು ಏರಿ ಕುಳಿತೇ ಬಿಟ್ರು ನೋಡಿ

Share :

14-06-2023

    ಯಾರ್ರಿ ಟಿಕೆಟ್,​ ಟಿಕೆಟ್​ ಎಂದು ಸುಸ್ತಾದ ಕಂಡಕ್ಟರ್​

    ಇದು ಸರ್ಕಾರ ನೀಡಿದ ಶಕ್ತಿ ಯೋಜನೆಯ ಎಫೆಕ್ಟ್​

    ಸೀಟು ಏರಿದ ಕಂಡೆಕ್ಟರ್​ ವಿಡಿಯೋ ವೈರಲ್​

ವಿಜಯಪುರ: ಶಕ್ತಿ ಯೋಜನೆ ಜಾರಿಯಾಗಿದ್ದೇ ತಡ ಮಹಿಳೆಯರು ಈ ಅವಕಾಶವನ್ನು ಪೂರ್ತಿಯಾಗಿ ಬಳಸುತ್ತಿದ್ದಾರೆ. ಅದರಲ್ಲೂ ಬಸ್​ ಪೂರ್ತಿ ತುಂಬುವಂತೆ ಮಹಿಳೆಯರು ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಮಹಿಳೆಯರ ಪ್ರಯಾಣದಿಂದ ಬಸ್​ ಚಾಲಕ ಮತ್ತು ಕಂಡಕ್ಟರ್​ ಹೈರಾಣಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬ ಇಲ್ಲೊಬ್ಬ ತುಂಬಿದ ಬಸ್​ ಒಳಗೆ ಕಂಡಕ್ಟರ್​ ಟಿಕೆಟ್​ ಕೊಡಲು ಹರಸಾಹಸಪಡುತ್ತಿದ್ದು, ಕೊನೆಗೆ ಸೀಟ್​ ಮೇಲೆ ಹತ್ತಿ ಕುಳಿತ ಘಟನೆ ಬೆಳಕಿಗೆ ಬಂದಿದೆ.

ಬಸ್​ ಸೀಟಿನ ಮೇಲೆ ಕಂಡಕ್ಟರ್​ ಏರಿ ಕುಳಿತ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಸ್ ನಲ್ಲಿ ಮಹಿಳೆಯರೇ ತುಂಬಿ ತುಳುಕಿದ್ದ ಕಾರಣ ನಿರ್ವಾಹಕ ಪರದಾಡಿದ್ದಾನೆ.

ಅಫಜಲಫುರದಿಂದ ದೇವರ ಹಿಪ್ಪರಗಿ, ಭೈರವಾಡಗಿ, ಹೂವಿನ ಹಿಪ್ಪರಗಿ, ಮುದ್ದೇಬಿಹಾಳ ಮಾರ್ಗವಾಗಿ ಹಾವೇರಿ ಜಿಲ್ಲೆಯ ಮೂಲಕ ಬ್ಯಾಡಗಿಗೆ ತೆರಳುವ ಬಸ್​ನಲ್ಲಿ ಈ ದೃಶ್ಯ ಕಂಡುಬಂದಿದೆ. ನಿನ್ನೆ ಬೆಳಗ್ಗೆ ನಡೆದ ಘಟನೆ ಇದಾಗಿದೆ. ಬಸ್ ಹತ್ತಿದವರಿಗೆ ಟಿಕೆಟ್ ಕೊಡುವ ಸಲುವಾಗಿ ನಿರ್ವಾಹಕ ಸೀಟ್ ಮೇಲೆ ಹತ್ತಿ ಕುಳಿತಿದ್ದಾನೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಮಹಿಳೆಯರ ‘ಶಕ್ತಿ’ಗೆ ಸುಸ್ತಾದ ಕಂಡೆಕ್ಟರ್​​! ಟಿಕೆಟ್​ ನೀಡಲು ಸೀಟು ಏರಿ ಕುಳಿತೇ ಬಿಟ್ರು ನೋಡಿ

https://newsfirstlive.com/wp-content/uploads/2023/06/Bus-Conductor.jpg

Load More