ಬಿಲಿಯನೇರ್ ಲೇಡಿ ಶಾಲಿನಿ ಪಸ್ಸಿ ಲೈಫ್​ ಹೇಗಿದೆ ಗೊತ್ತಾ? ಒಂದು ಸಾರಿ ಧರಿಸಿದ ಬಟ್ಟೆ ತಿರುಗಿ ಕೂಡ ನೋಡಿಲ್ಲ ಈಕೆ!

author-image
Veena Gangani
Updated On
ಬಿಲಿಯನೇರ್ ಲೇಡಿ ಶಾಲಿನಿ ಪಸ್ಸಿ ಲೈಫ್​ ಹೇಗಿದೆ ಗೊತ್ತಾ? ಒಂದು ಸಾರಿ ಧರಿಸಿದ ಬಟ್ಟೆ ತಿರುಗಿ ಕೂಡ ನೋಡಿಲ್ಲ ಈಕೆ!
Advertisment
  • ಶಾಲಿನಿ ಪಸ್ಸಿ ಲೈಫ್​​ಸ್ಟೈಲ್​ ಬಗ್ಗೆ ತಲೆ ಕೆಡಿಸಿಕೊಂಡಿರೋ ನೆಟ್ಟಿಗರು
  • ಫ್ಯಾಬಲಸ್​ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್ ಮೂಲಕ ಫೇಮಸ್​
  • ದೆಹಲಿಯ ಬಿಲಿಯನೇರ್​ನನ್ನು ಮದುವೆಯಾದ ಸ್ಟಾರ್ ಶಾಲಿನಿ ಪಸ್ಸಿ

ನೆಟ್‌ಫ್ಲಿಕ್ಸ್‌ನ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್‌ನಲ್ಲಿ ಕಾಣಿಸಿಕೊಂಡಾಗಿನಿಂದ ಶಾಲಿನಿ ಪಸ್ಸಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ತುಂಬಾನೇ ಌಕ್ಟೀವ್​ ಆಗಿದ್ದಾರೆ ಶಾಲಿನಿ ಪಸ್ಸಿ. ದೆಹಲಿಯ ಬಿಲಿಯನೇರ್ ಸಂಜಯ್ ಪಸ್ಸಿ ಪತ್ನಿ ಶಾಲಿನಿ ಪಸ್ಸಿ ಅವರ ಲೈಫ್​​ಸ್ಟೈಲ್​ ಬಗ್ಗೆ ಸಾಕಷ್ಟು ಮಂದಿ ತಲೆ ಕೆಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ಹಸೆಮಣೆ ಏರಲು ಸಜ್ಜಾದ ಲಕ್ಷ್ಮೀ ನಿವಾಸ ಸೀರಿಯಲ್ ನಟಿ ಚಂದನಾ ಅನಂತಕೃಷ್ಣ; ಹುಡುಗ ಯಾರು?

publive-image

ಫ್ಯಾಬಲಸ್​ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್​ನಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ಶ್ಯಾಲಿನಿ ಪಸ್ಸಿ ಅವರು ಮಾಡುವ ಡಯಟ್ ಬಗ್ಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಚಿತ್ರ ಕಲೆಗಳನ್ನು ಸಂಗ್ರಹಿಸುವ, ಪರೋಪಕಾರಿ ಅಂತ ಗುರುತಿಸಿಕೊಂಡಿರುವ, ಸಮಾಜವಾದಿ ಎಂದು ಕರೆಯಲ್ಪಡುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್​ ಮಾಡಿರೋ ಶಾಲಿನಿ ಪಸ್ಸಿ ಅವರು ತಮ್ಮ 49ರ ಹರೆಯದಲ್ಲೂ ಯೌವನದ ಕಾಂತಿಯನ್ನು ಹೇಗೆ ಹಿಡಿದಿಟ್ಟುಕೊಂಡಿದ್ದಾರೆ ಅಂತ ನೆಟ್ಟಿಗರು ಅಚ್ಚರಿ ಪಟ್ಟಿದ್ದಾರೆ.

ಇನ್ನು, ಮೊಟ್ಟ ಮೊದಲ ಬಾರಿಗೆ ಶಾಲಿನಿ ಪಸ್ಸಿ ಫ್ಯಾಬಲಸ್​ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್ ಶೋಗೆ ಬಂದ ಮೇಲೆ ಅವರ ಪತಿ ಕೂಡ ಫೇಮಸ್​ ಆಗಿದ್ದಾರೆ. ಮೊದಲಿಗೆ, ಸಂಜಯ್ ಒಬ್ಬ ಮೆಚ್ಚುಗೆ ಪಡೆದ ಉದ್ಯಮಿಯಾಗಿದ್ದಾರೆ. ಸಂಜಯ್ ಪಾಸ್ಸಿ ಪಾಸ್ಕೋ ಗ್ರೂಪ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಆಟೋಮೊಬೈಲ್ ಕಂಪನಿಯಲ್ಲಿ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

publive-image

ಮಾಹಿತಿ ಪ್ರಕಾರ, ಸಂಜಯ್ ಅವರು ತನ್ನ ಡೀಲರ್‌ಶಿಪ್ ವ್ಯವಹಾರವನ್ನು ತೆಗೆದುಕೊಂಡು ಅದನ್ನು ಇಂದಿನ ಬೃಹತ್ ವ್ಯವಹಾರವಾಗಿ ವಿಸ್ತರಿಸಿದ್ದಾರಂತೆ. ದೆಹಲಿ ವಿಶ್ವವಿದ್ಯಾನಿಲಯದ ಹಂಸರಾಜ್ ಕಾಲೇಜಿನಲ್ಲಿ ಬಿ.ಕಾಂ ಮುಗಿಸಿದ ನಂತರ ಚಂಡೀಗಢದಲ್ಲಿ ತಮ್ಮ ಕುಟುಂಬದ ಟಾಟಾ ಮೋಟಾರ್ಸ್ ಡೀಲರ್‌ಶಿಪ್ ಅನ್ನು ವಹಿಸಿಕೊಳ್ಳುವ ಮೂಲಕ ಅವರು ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ಸಂಜಯ್ ತಮ್ಮ ವ್ಯವಹಾರವನ್ನು ಉತ್ತರ ಭಾರತದಲ್ಲಿ ಪ್ರಮುಖ ಹೆಸರಾಗಿ ನಿರ್ಮಿಸಿದ್ದಾರೆ, ಇದರ ಮೌಲ್ಯ ₹2,690 ಕೋಟಿಗಳು.

ದಂಪತಿಗಳು 1990ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಂಪತಿಗೆ 27 ವರ್ಷದ ರಾಬಿನ್ ಎಂಬ ಮಗ ಇದ್ದಾನೆ. ಕುಟುಂಬವು ನವದೆಹಲಿಯ ಗಾಲ್ಫ್ ಲಿಂಕ್ಸ್‌ನಲ್ಲಿ 20,000 ಚದರ ಅಡಿಯ ಬೃಹತ್ ಮನೆಯಲ್ಲಿ ವಾಸಿಸುತ್ತಿದ್ದಾರೆ. ವಿವಾಹದ ನಂತರ, ಶಾಲಿನಿ ರಾಜಧಾನಿಯಲ್ಲಿ ಕಲಾ ಸಂಗ್ರಾಹಕ ಮತ್ತು ಫ್ಯಾಷನ್​ನಲ್ಲಿ ಆಸಕ್ತಿ ಹೊಂಡಿದ್ದರು. ಅಲ್ಲದೇ ಅನೇಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!

publive-image

ಇದರ ಜೊತೆಗೆ ಹಲವು ವರ್ಷಗಳಿಂದ ಖೋಜ್ ಸಲಹಾ ಮಂಡಳಿಯ ಸದಸ್ಯರಾಗಿದ್ದಾರೆ. ದೆಹಲಿಯಲ್ಲಿ ಹಿಂದುಳಿದ ಮಕ್ಕಳಿಗೆ ಸಹಾಯ ಮಾಡುವ ಹಲವಾರು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಮೊದಲ ಶೋಯಿಂದಲೇ ಇಷ್ಟೋಂದು ಖ್ಯಾತಿ ಪಡೆದುಕೊಂಡಿರೋ ಅದರಲ್ಲೂ ಸೋಷಿಯಲ್​ ಮೀಡಿಯಾ ಹಾಟ್​ ಟಾಪಿಕ್​ ಆಗಿರೋ ಶಾಲಿನಿ ಪಸ್ಸಿ ಶೇರ್ ಮಾಡಿಕೊಳ್ಳುವ ಒಂದೊಂದು ಪೋಸ್ಟ್​ನಲ್ಲೂ ಪ್ರೇರಣೆಯ ಅಂಶ ಅಡಗಿರುತ್ತದೆ. ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶಾಲಿನಿ ಪಸ್ಸಿ ಬರೋಬ್ಬರಿ 1.2 ಮಿಲಿಯನ್​ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment