/newsfirstlive-kannada/media/post_attachments/wp-content/uploads/2024/11/SHALINI-PASSI-1.jpg)
ಇತ್ತೀಚೆಗಂತೂ ಸೋಷಿಯಲ್​ ಮೀಡಿಯಾದಲ್ಲಿ ಈ ಸುಂದರಿ ಬಗ್ಗೆ ಜೋರು ಮಾತುಕತೆ. ಶಾಲಿನಿ ಪಸ್ಸಿ ನಿಜಕ್ಕೂ ಸದ್ಯ ಸೋಷಿಯಲ್​ ಮೀಡಿಯಾ ಸೆನ್ಸೇಷನ್​. ತಮ್ಮ 49ನೇ ವಯಸ್ಸಿನಲ್ಲೂ ಹೀಗಿದ್ದಾರೆ ಅಂದ್ರೆ ಸುಮ್ಮನೇ ಮಾತಲ್ಲ. ಈ ವಯಸ್ಸಿಗೆ ಬಹುಪಾಲು ಮಂದಿ ವೃದ್ಧರೇ ಆಗಿಬಿಡ್ತಾರೆ. ಆದರೇ, ತಮ್ಮ 27 ವರ್ಷದ ಮಗನಿಗಿಂತಲೂ ಸಣ್ಣವರಂತೆ ಕಾಣುತ್ತಾರೆ. ಇದೇ ವಿಚಾರವಾಗಿ ದೇಶದಲ್ಲಿ ಅತಿ ಹೆಚ್ಚು ಮಂದಿ ಶಾಲಿನಿ ಪಸ್ಸಿ ಬಗ್ಗೆ ಗೂಗಲ್ ಮಾಡ್ತಾರೆ ಅನ್ನೋ ಹೆಗ್ಗಳಿಕೆಯೂ ಇದೆ.
/newsfirstlive-kannada/media/post_attachments/wp-content/uploads/2024/11/shalini2.jpg)
ಶಾಲಿನಿ ಪಸ್ಸಿ ನಿಜಕ್ಕೂ ಸದ್ಯ ಸೋಷಿಯಲ್​ ಮೀಡಿಯಾ ಸೆನ್ಸೇಷನ್​. ತಮ್ಮ 49ನೇ ವಯಸ್ಸಿನಲ್ಲೂ ಹೀಗಿದ್ದಾರೆ ಅಂದ್ರೆ ಸುಮ್ಮನೇ ಮಾತಲ್ಲ. ಈ ವಯಸ್ಸಿಗೆ ಬಹುಪಾಲು ಮಂದಿ ವೃದ್ಧರೇ ಆಗಿಬಿಡ್ತಾರೆ. ಆದರೆ ತಮ್ಮ 27 ವರ್ಷದ ಮಗನಿಗಿಂತಲೂ ಸಣ್ಣವರಂತೆ ಶಾಲಿನಿ ಕಾಣುತ್ತಾರೆ. ಇದೇ ವಿಚಾರವಾಗಿ ದೇಶದಲ್ಲಿ ಅತಿ ಹೆಚ್ಚು ಮಂದಿ ಗೂಗಲ್ ಮಾಡ್ತಾರೆ ಅನ್ನೋ ಹೆಗ್ಗಳಿಕೆಯೂ ಇದೆ. 49ರ ಹರೆಯದಲ್ಲೂ ಬಾಲಿವುಡ್​​ ಬ್ಯೂಟಿಗಳ ನಿದ್ದೆಗೆಡೆಸ್ತಿರೋ ಅಪ್ಸರೆ. ದಿನಕ್ಕೆ ಲಕ್ಷಗಳಲ್ಲೇ ಖರ್ಚು ಮಾಡೋ ಲಗ್ಸುರಿ ಲಕ್ಷ್ಮಿ.
/newsfirstlive-kannada/media/post_attachments/wp-content/uploads/2024/11/SHALINI-PASSI-3.jpg)
ನೆಟ್​ಫ್ಲಿಕ್ಸ್​ನಲ್ಲಿ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ಅನ್ನೋ ಶೋ ನಡೀತಿದೆ. ಈ ವಯ್ಯಾರಿಯ ಶೋನಲ್ಲಿ ಸೆಂಟರ್​ ಆಫ್ ಅಟ್ರ್ಯಾಕ್ಷನ್ ಆಗಿರೋದು ಇದೇ ಶಾಲಿನಿ ಪಸ್ಸಿ. ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸುತ್ತಿರೋ ಶಾಲಿನಿ ದೆಹಲಿಯ ಬಿಲಿಯನೇರ್, ಶ್ರೀಮಂತ ಉದ್ಯಮಿ ಸಂಜಯ್ ಪಸ್ಸಿ ಪತ್ನಿ. ಇದೇ ಶಾಲಿನಿಯ ಕಲರ್​ಫುಲ್ ಲೈಫ್​​ ಸ್ಟೈಲ್ ನೋಡಿದವರೆಲ್ಲಾ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಅದರಲ್ಲೂ ಬಾಲಿವುಡ್​​ನ ಅದೆಷ್ಟೋ ಹಾಟ್​​ ಬೆಡಗಿಯರು ಶಾಲಿನಿ ಅಂದಕ್ಕೆ ಸೋತು ಶರಣಾಗುತ್ತಿದ್ದಾರೆ. ಅಷ್ಟರಮಟ್ಟಿಗೆ ಶಾಲಿನಿ ಹವಾ ಕ್ರಿಯೇಟ್​ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/11/SHALINI-PASSI-4.jpg)
ಇನ್ನು, ಶಾಲಿನಿ ಅವರು ಇತ್ತೀಚೆಗೆ ಸಂದರ್ಶನದಲ್ಲಿ ತಮ್ಮ ಉದ್ದನೆಯ ಕೂದಲಿನ ಬಗ್ಗೆ ಶಾಕಿಂಗ್​ ವಿಚಾರದ ಬಹಿರಂಗ ಪಡಿಸಿದ್ದಾರೆ. ತಮ್ಮ ಕೂದಲನ್ನು ಹಲವು ಬಾರಿ ಬೋಳಿಸಿಕೊಂಡಿದ್ದಾರೆ ಎಂದು ಅಚ್ಚರಿ ವಿಚಾರ ಬಿಚ್ಚಿಟ್ಟಿದ್ದಾರೆ. ತಿರುಪತಿಯಲ್ಲಿ ನಾಲ್ಕು ಬಾರಿ ಕೂದಲು ಬೋಳಿಸಿಕೊಂಡಿದ್ದೇನೆ ಎಂದು ಶಾಲಿನಿ ಹೇಳಿದ್ದಾರೆ. ನನಗೆ ಕೂಡ ನಾನು ತಿರುಪತಿಯಲ್ಲಿ ನನ್ನ ಕೂದಲನ್ನು ಬೋಳಿಸಿಕೊಂಡಾಗ, ನಾನು ಅದನ್ನು ನಾಲ್ಕು ಬಾರಿ ಬೋಳಿಸಿಕೊಂಡಿದ್ದೇನೆ. ನನ್ನ ಕೂದಲನ್ನು ಹೆಚ್ಚು ಸ್ಟೈಲ್ ಮಾಡಲು ನಾನು ಬಯಸುವುದಿಲ್ಲ. ಏಕೆಂದರೆ ಅಂತಿಮವಾಗಿ ನಾನು ಕೂದಲನ್ನು ದಾನ ಮಾಡುತ್ತೇನೆ. ಶಾಲಿನಿ ಅವರು ಕೊನೆಯ ಬಾರಿಗೆ 2018ರಲ್ಲಿ ತಮ್ಮ ಕೂದಲನ್ನು ಬೋಳಿಸಿಕೊಂಡಿದ್ದರಂತೆ. 2021ರಲ್ಲಿ, ಶಾಲಿನಿ ಪಾಸ್ಸಿ ಮತ್ತು ಅವರ ಪತಿ ಸಂಜಯ್ ಪಾಸಿ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ 10 ಕೋಟಿ ರೂಪಾಯಿ ಕೊಟ್ಟಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us