ದಂತ, ಕೇಶ, ಚರ್ಮಕಾಂತಿಗಾಗಿ ಶಾಲಿನಿ ಪಸ್ಸಿ ಮಾಡುವುದೇನು? 49ರ ಹರೆಯದ ಟಿವಿ ಸ್ಟಾರ್​ ಡಯಟ್​ ಹೇಗಿದೆ?

author-image
Gopal Kulkarni
Updated On
ಸುಂದರವಾಗಿ ಕಾಣೋ ಬಿಲಿಯನೇರ್ ಲೇಡಿ ಕೇಶದ ಸೀಕ್ರೆಟ್ ಏನು? ಶಾಕಿಂಗ್​ ವಿಚಾರ ಬಿಚ್ಚಿಟ್ಟ ಶಾಲಿನಿ ಪಸ್ಸಿ..
Advertisment
  • 49ರ ಹರೆಯದಲ್ಲೂ ಬಳುಕುವ ಬಳ್ಳಿಯಂತಿರುವುದು ಹೇಗೆ ಶಾಲಿನಿ ಪಸ್ಸಿ
  • ನಿತ್ಯ ಬೆಳಗ್ಗೆ ತುಪ್ಪ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ?
  • ಶಾಲಿನಿ ಪಸ್ಸಿ ದಿನವೂ ತಪ್ಪಿಸದಂತೆ ಮೇಕೆಯ ಮೊಸರು ಸೇವಿಸುವುದೇಕೆ?

ಸೆಲರಿ ಸೊಪ್ಪಿನ ಜ್ಯೂಸ್, ಬೀಟ್​ರೂಟ್ ಜ್ಯೂಸ್, ಮೇಕೆಯ ಮೊಸರು ಒಂದಿಷ್ಟು ತುಪ್ಪ ಇವು ನಿಮ್ಮ ದಂತಕಾಂತಿಯನ್ನ, ಕೇಶಕಾಂತಿಯನ್ನ ಹಾಗೂ ಚರ್ಮಕಾಂತಿಯನ್ನ ಪಳಪಳ ಹೊಳೆಯುವಂತೆ ಮಾಡುತ್ತವೆ. ಅದಕ್ಕ ದೊಡ್ಡ ನಿದರ್ಶನವಾಗಿ ನಿಂತವರು ಅಂದ್ರೆ ಶಾಲಿನಿ ಪಸ್ಸಿ.

ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರವಾಗುವ ಫ್ಯಾಬಲಸ್​ ಲೈವ್ಸ್ ವರ್ಸಸ್ ಬಾಲಿವುಡ್ ವೈವ್ಸ್​ ನಿಂದ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವ ಶ್ಯಾಲಿನಿ ಪಸ್ಸಿ ತಮ್ಮ ಡಯಟ್ ಬಗ್ಗೆ ಪ್ರಮುಖ ವಿಷಯಗಳನ್ನು ಹೇಳಿದ್ದಾರೆ. ಚಿತ್ರ ಕಲೆಗಳನ್ನು ಸಂಗ್ರಹಿಸುವ, ಪರೋಪಕಾರಿ ಅಂತ ಗುರುತಿಸಿಕೊಂಡಿರುವ, ಸಮಾಜವಾದಿ ಎಂದು ಕರೆಯಲ್ಪಡುವ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸೆನ್​ಸೇಷನಲ್ ಸೃಷ್ಟಿಸಿರುವ ಶಾಲಿನಿ ಪಸ್ಸಿ 49ರ ಹರೆಯದಲ್ಲೂ ಯೌವನದ ಕಾಂತಿಯನ್ನು ತಮ್ಮಿಂದ ಮಾಸಲು ಬಿಟ್ಟಿಲ್ಲ. ಅವರ ಆಡಂಬರದ ವ್ಯಕ್ತಿತ್ವವೇ ಹಲವು ಬಾರಿ ಚರ್ಚೆಗೆ ಒಳಗಾಗಿದೆ. ಸ್ವಯಂ ಪ್ರೀತಿಯನ್ನು ಒಂದಿಷ್ಟು ಬಿಟ್ಟುಕೊಡದ ಶಾಲಿನ ತಮ್ಮನ್ನು ತಾವು ಪ್ರೀತಿಸುವುದ ಹೇಗೆ ಎಂಬುದಕ್ಕೂ ಕೂಡ ನಿದರ್ಶನವಾಗಿದ್ದಾರೆ. ಇವರ ಆರೋಗ್ಯದ ಗುಟ್ಟೇನು ಅಂತ ಕೇಳಿದಾಗ ಅವರು ಒಂದು ಸಂದರ್ಶನದಲ್ಲಿ ಹೇಳಿದ್ದು ಇಷ್ಟೇ.

ಇದನ್ನೂ ಓದಿ:ಅನಂತ್ ಅಂಬಾನಿ ಮದುವೆಯಲ್ಲಿ 120 ಬಗೆಯ ಚಹಾ ರೆಡಿ ಮಾಡಿದ್ದ ಈ ಲಕ್ಷ್ಮಣ ಯಾರು?

ನಾನು ದಿನವನ್ನು ಶುರು ಮಾಡುವುದೇ ತುಪ್ಪವನ್ನು ತಿನ್ನುವುದರಿಂದ ಎಂದು ಹೇಳಿದ್ದಾರೆ. ನಾನು ನಿತ್ಯ ಮಿತ ಪ್ರಮಾಣದಲ್ಲಿ ತುಪ್ಪವನ್ನು ಕುಡಿಯುತ್ತೇನೆ. ಬಳಿಕ ಬಾದಾಮಿ ಹಾಗೂ ವಾಲ್​ನಟ್​ಗಳನ್ನ ಸೇವಿಸುತ್ತೇನೆ ಎಂದು ಹೇಳಿದ್ದಾರೆ. ನಾನು ವಿಶೇಷವಾಗಿ ಸೆಲರಿ ಸೊಪ್ಪಿನ ಜ್ಯೂಸ್, ಬೀಟ್​ರೂಟ್ ಜ್ಯೂಸ್ ಕುಡಿಯುತ್ತೇನೆ ಎಂದು ಹೇಳಿದ್ದಾರೆ. ಅದರ ಜೊತೆಗೆ ಜೋಳ ಇಲ್ಲವೇ ರಾಗಿ ರೊಟ್ಟಿಯನ್ನು ತಿನ್ನುವುದು ಕೂಡ ನನಗೆ ರೂಢಿಯಿದೆ ಎಂದು ಹೇಳಿದ್ದಾರೆ.

publive-image

ಶಾಲಿನಿ ಪಸ್ಸಿ, ದಿನ ಸಂಜೆ 4 ರಿಂದ 6 ಗಂಟೆಯವರೆಗೆ ವರ್ಕೌಟ್ ಮಾಡುತ್ತಾರೆ. ವರ್ಕೌಟ್​ಗೂ ಮೊದಲು ಫ್ರೆಶ್​ ಫ್ರೂಟ್​ ಜ್ಯೂಸ್ ಕುಡಿಯುತ್ತಾರೆ. ವರ್ಕೌಟ್ ಮುಗಿದ ಬಳಿಕ ಒಂದು ಗಂಟೆ ಕಾಲ ಡಾನ್ಸ್​ನಲ್ಲಿ ತೊಡಗುತ್ತಾರೆ. ನಾನು ನಿತ್ಯ ಸೇವಿಸುವ ತರಕಾರಿಗಳನ್ನೇ ಪದೇ ಪದೇ ಸೇವಿಸುತ್ತೇನೆ ಆದ್ರೆ ಅದು ಕೂಡ ಸೂಪ್ ರೂಪದಲ್ಲಿ. ಬೆಂಡೆಕಾಯಿ, ಟೊಮ್ಯಾಟೋ, ಕ್ಯಾಪ್ಸಿಕಮ್ ಇವೆಲ್ಲವನ್ನೂ ಸೂಪ್​ ರೂಪದಲ್ಲಿಯೇ ಸೇವಿಸುತ್ತೇನೆ ಎಂದು ಶಾಲಿನಿ ಹೇಳಿದ್ದಾರೆ. ನಿತ್ಯ ಬೆಳಗ್ಗೆ 9 ಗಂಟೆಗೆ ದೇವಸ್ಥಾನಕ್ಕೆ ಹೋಗುವ ರೂಢಿ ಇಟ್ಟುಕೊಂಡಿರುವ ಈ ನಟಿ ದೇವಸ್ಥಾನಕ್ಕೆ ಹೋಗಲಾರದ ದಿನ ಮಾತ್ರ ಮೊಟ್ಟೆ ಹಾಗೂ ಚಿಕನ್ ಸೇವಿಸುತ್ತಾರೆ ಪ್ರೊಟೀನ್​ಗಾಗಿ. ಇನ್ನು ಇವರ ಡಯಟ್​​ನಲ್ಲಿ ಇರುವ ಇನ್ನೊಂದು ವಿಶೇಷ ಅಂದ್ರೆ ಅದು ಮೇಕೆಯ ಮೊಸರು.

publive-image

ಇದನ್ನೂ ಓದಿ:ಸೋಮವಾರದಿಂದ ರವಿವಾರದವರೆಗೂ ಈ ಡಯಟ್​ ಪಾಲಿಸಿ; ತಿಂಗಳಲ್ಲಿ 7 ಕೆಜಿ ತೂಕ ಕಳೆದುಕೊಳ್ಳಿ

ಮೇಕೆಯ ಮೊಸರನ್ನು ಶಾಲಿನಿ ನಿತ್ಯವೂ ತಪ್ಪಿಸದೇ ಸೇವಿಸುತ್ತಾರೆ. ಒಂದು ವೇಳೆ ಪ್ರಯಾಣದಲ್ಲಿ ಅವರಿದ್ದರು ಕೂಡ ತಮ್ಮೊಂದಿಗೆ ಮೇಕೆಯ ಮೊಸರನ್ನು ತೆಗೆದುಕೊಂಡೇ ಹೋಗುತ್ತಾರೆ ಕಾರಣ ನಾನು ನನ್ನ ಎಲುಬು ಹಾಗೂ ಹಲ್ಲುಗಳನ್ನು ಬಲಿಷ್ಠವಾಗಿಟ್ಟುಕೊಳ್ಳಲು ಬಯಸುತ್ತೇನೆ ಹೀಗಾಗಿ ನಿತ್ಯ ತಪ್ಪದೇ ಆಡಿನ( ಮೇಕೆಯ) ಮೊಸರನ್ನು ತಿನ್ನುತ್ತೇನೆ ಎಂದು ಹೇಳುತ್ತಾರೆ ಶಾಲಿನಿ. ಇನ್ನು ಬಿಟ್​ರೂಟ್ ಜ್ಯೂಸ್ ಸದಾ ಕುಡಿಯುವುದರಿಂದ ಹಲ್ಲಿನ ಮೇಲೆ ಕಲೆಗಳು ಕೂಡಲು ಆರಂಭವಾಗಿದ್ದರಿಂದ ಆಗಾಗ ನಾನು ಪಾನ್ ತಿನ್ನುತ್ತೇನೆ ಎನ್ನುತ್ತಾರೆ ಪಸ್ಸಿ, ಇನ್ನೂ ಡ್ರಿಂಕ್ಸ್ ವಿಚಾರಕ್ಕೆ ಬಂದ್ರೆ ನಾನು ಯಾವತ್ತೂ ಆಲ್ಕೋಹಾಲ್ ಸೇವಿಸುವುದಿಲ್ಲ, ಒಂದು ವೇಳೆ ಪಾರ್ಟಿಗಳು ಇದ್ದಾಗ ಒಂದು ಗ್ಲಾಸ್ ಶಾಂಪೇನ್ ಕುಡಿಯುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment