/newsfirstlive-kannada/media/post_attachments/wp-content/uploads/2025/05/shamanth.jpg)
ಕನ್ನಡ ಬಿಗ್ಬಾಸ್ ಸೀಸನ್ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್ ಖ್ಯಾತಿಯ ಶಮಂತ್ ಬ್ರೋ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಒಂದು ಕಡೆ ನಟ ಶಮಂತ್ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚುವುದರಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ವೀಕ್ಷಕರಿಗೆ ಬಿಗ್ ಶಾಕ್.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!
ಆದ್ರೆ ಇತ್ತ, ನಟ ಶಮಂತ್ ಭಾವಿ ಪತ್ನಿ ತಮ್ಮ ಬ್ಯಾಚುಲರ್ ಪಾರ್ಟಿ ಮಾಡಿದ್ದಾರೆ. ಹೌದು, ನಟ ಶಮಂತ್ ಹಾಗೂ ಮೇಘನಾ ಎಂಬುವವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೀಗಾಗಿ ಇಬ್ಬರ ಮನೆಯಲ್ಲಿ ಮದುವೆ ಸಂಭ್ರಮ ಮೊಳಗಿದೆ.
ಇನ್ನು, ಮೇಘನಾ ಅವರ ಸ್ನೇಹಿತರು ಬ್ಯಾಚುಲರ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ರೆಸಾರ್ಟ್ವೊಂದಲ್ಲಿ ಮೇಘನಾ ಗೆಳತಿಯರು ಬ್ಯಾಚುಲರ್ ಪಾರ್ಟಿ ಹಮ್ಮಿಕೊಂಡಿದ್ದರು. ಈ ಪಾರ್ಟಿಯಲ್ಲಿ ಮೇಘನಾ ಅವರು ಮಸ್ತ್ ಎಂಜಾಯ್ ಮಾಡಿದ್ದಾರೆ.
ಅಲ್ಲದೇ ನೀಲಿ ಬಣ್ಣದ ಸಿಂಗಲ್ ಪೀಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಈ ಫೋಟೋಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಶಮಂತ್ ಬ್ರೋ ಗೌಡ ಪ್ರೀತಿಸಿದ ಹುಡುಗಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು.
View this post on Instagram
ಮೇಘನಾ, ಶಮಂತ್ ಬ್ರೊ ಗೌಡಗೆ ಪರಿಚಯ ಆಗಿ ಆರು ವರ್ಷಗಳಿಗೂ ಅಧಿಕ ಕಾಲ ಆಗಿದೆಯಂತೆ. ಶಮಂತ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 8 ಶೋ ಹೋಗುವ ಮುನ್ನವೇ ಮೇಘನಾರಿಗೆ ಪರಿಚಯ ಆಗಿ ಮೂರು ವರ್ಷಗಳ ಮೇಲಾಗಿತ್ತು. ಸದ್ಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಮದುವೆಯಾಗೋದಕ್ಕೆ ಸಜ್ಜಾಗಿದ್ದಾರೆ ಶಮಂತ್ ಹಾಗೂ ಮೇಘನಾ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ