/newsfirstlive-kannada/media/post_attachments/wp-content/uploads/2025/03/SHAMI_SISTER.jpg)
ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪೇಸ್ ಬೌಲರ್. ಐಪಿಎಲ್ನಲ್ಲಿ 10 ಕೋಟಿ ರೂಪಾಯಿ ಪಡೆದ ಸ್ಟಾರ್ ಬೌಲರ್ ಆಗಿದ್ದಾರೆ. ಪಂದ್ಯದಲ್ಲಿ ಬಾಲ್ ಕೈಗೆತ್ತಿಕೊಂಡರೆ ವಿಕೆಟ್ ಉರುಳಿಸೋದು ಗ್ಯಾರಂಟಿ. ಅಲ್ಲದೇ ಇವರ ಜೀವನಶೈಲಿ ಕೂಡ ವೈಭೋಗದಿಂದ ಇದೆ. ಐಷಾರಾಮಿ ನಿವಾಸ, ಕಾರು, ಬಂಗಲೆ ಸೇರಿದಂತೆ ಸಿರಿತನಕ್ಕೆ ಏನು ಕಡಿಮೆ ಇಲ್ಲ. ಆದ್ರೆ ಶಮಿ ಅವರ ಸಹೋದರಿ, ಆಕೆಯ ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.
ಭಾರತ ತಂಡದ ಸ್ಟಾರ್ ಕ್ರಿಕೆಟರ್ ಆಗಿರುವ ಮೊಹಮ್ಮದ್ ಶಮಿ ಅವರ ಸಹೋದರಿ ಶಬಿನಾ ಹಾಗೂ ಅಕೆಯ ಪತಿ ಸರ್ಕಾರದಡಿ ಕೂಲಿ ಕೆಲಸ ಮಾಡುತ್ತಿದ್ದಾರೆ. MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ) ಯೋಜನೆ ಅಡಿ ಕೆಲಸ ಮಾಡಿ ಹಣ ಕೂಡ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: KKR vs RR ಈ ಎರಡರಲ್ಲೂ ಗೆಲುವು ಯಾರಿಗೆ, ಊಹಿಸುವುದೇ ಕಷ್ಟ.. ಯಾಕೆ ಗೊತ್ತಾ?
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಶಮಿ ಸಹೋದರಿ ಶಬಿನಾ, ಪತಿ ಇಬ್ಬರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಈ ಕುರಿತು 2021 ರಿಂದ 2024 ರವರೆಗೆ ಹಣ ಕೂಡ ಪಡೆದಿರುವ ದಾಖಲೆಗಳು ಇವೆ ಎನ್ನಲಾಗಿದೆ.
ಭಾರತ ತಂಡದ ಶ್ರೇಷ್ಠ ಬೌಲರ್ ಆಗಿರುವ ಶಮಿ ಅವರ ಸಹೋದರಿ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ಮಾಡಿದ್ದಾರಾ? ಎಂದು ಎಲ್ಲರೂ ತುಟಿ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಆದರೆ ಇದುವರೆಗೆ ಈ ಕುರಿತು ಮೊಹಮ್ಮದ್ ಶಮಿ ಆಗಲಿ ಅಥವಾ ಅವರ ಕುಟುಂಬದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ