newsfirstkannada.com

ಹಮಾಸ್‌ ಉಗ್ರರು ಯುವತಿ ನಗ್ನ ಮೆರವಣಿಗೆ ಮಾಡಿದ್ದ ಫೋಟೋಗೆ ಪ್ರಶಸ್ತಿ; ಇಸ್ರೇಲಿಗರ ಭಾರೀ ಆಕ್ರೋಶ

Share :

Published March 30, 2024 at 6:15am

Update March 30, 2024 at 8:21am

    ಅಕ್ಟೋಬರ್ 7ರಂದು ಇಸ್ರೇಲ್‌ ಮೇಲೆ ಹಮಾಸ್ ಉಗ್ರರಿಂದ ದಾಳಿ

    ಶಾನಿ ಲೌಕ್ ಅರೆಬೆತ್ತಲೆ ಮಾಡಿ ಜೀಪ್​ನಲ್ಲಿ ಮೆರವಣಿಗೆ ಮಾಡಿದ್ರು

    ನಗ್ನವಾಗಿ ಮೆರವಣಿಗೆ ಮಾಡಿರೋ ಚಿತ್ರಕ್ಕೆ ಬಹುಮಾನ, ಆಕ್ರೋಶ

ಗಾಜಾ: ಇಸ್ರೇಲ್‌ ಮೇಲೆ ದಾಳಿ ಮಾಡಿದ ಹಮಾಸ್‌ ಉಗ್ರರ ರಕ್ತದಾಹ ಅದೇಷ್ಟೋ ಭಯಾನಕವಾಗಿತ್ತು. ಕಳೆದ ಅಕ್ಟೋಬರ್ 7ರಂದು ಇಸ್ರೇಲ್‌ನ ಮೇಲೆ ಹಮಾಸ್ ಉಗ್ರರು ಏಕಾಏಕಿ ದಾಳಿ ಮಾಡಿದ್ದರು. ಆಗ ಶಾನಿ ಲೌಕ್ ಎಂಬ ಮಹಿಳೆಯನ್ನು ಅರೆಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದರು. ಇದೀಗ ನಗ್ನವಾಗಿ ಮೆರವಣಿಗೆ ಮಾಡಿರೋ ಚಿತ್ರಕ್ಕೆ ಫೋಟೋ-ಆಫ್-ದಿ-ಇಯರ್ ಬಹುಮಾನ ನೀಡಲಾಗಿದ್ದು, ಇದೇ ವಿಚಾರ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: WATCH: ವೈದ್ಯರು, ನರ್ಸ್‌ಗಳ ವೇಷದಲ್ಲಿ ನುಗ್ಗಿದ ಇಸ್ರೇಲ್ ಸೇನೆ; ಹಮಾಸ್ ಉಗ್ರರ ಟಾಪ್‌ ಕಮಾಂಡರ್‌ ಫಿನೀಶ್‌!

ಹೌದು, ಗಾಜಾ ಗಡಿಯಲ್ಲಿ ಜರ್ಮನಿ-ಇಸ್ರೇಲಿಗರ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರ ಮೇಲೆ ಹಮಾಸ್ ಉಗ್ರರು ಮನಬಂದಂತೆ ಗುಂಡಿನ ದಾಳಿ ಮಾಡಿ ಮಹಿಳೆಯರಿಗೆ ಚಿತ್ರಹಿಂಸೆ ಕೊಟ್ಟಿದ್ದರು. ಜರ್ಮನಿ-ಇಸ್ರೇಲಿಗರ ಪಾರ್ಟಿಗೆ ನುಗ್ಗಿದ ಹಮಾಸ್ ಉಗ್ರರು ಶಾನಿ ಲೌಕ್ ಎಂಬ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪ್ ಜೊತೆಗೆ ಆಕೆಯನ್ನ ಅರೆಬೆತ್ತಲೆ ಸ್ಥಿತಿಯಲ್ಲಿ ಉಗ್ರರು ಟ್ರಕ್‌ನಲ್ಲಿ ಕರೆದೊಯ್ದಿದ್ದರು. ಹಮಾಸ್ ಉಗ್ರರ ಈ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಜರ್ಮನ್ ಮೂಲದ ಮಹಿಳೆಯ ಅರೆಬೆತ್ತಲೆಯ ಮೆರವಣಿಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಹಮಾಸ್‌ ಒತ್ತೆಯಾಳಾಗಿದ್ದ ಇಸ್ರೇಲಿ ಮಹಿಳೆಯನ್ನು ನಗ್ನವಾಗಿ ಮೆರವಣಿಗೆ ಮಾಡಿರೋ ಚಿತ್ರ ‘ಪಿಕ್ಚರ್ಸ್ ಆಫ್ ದಿ ಇಯರ್ ಇಂಟರ್ನ್ಯಾಷನಲ್’ ಪ್ರಶಸ್ತಿ ವಿಭಾಗದಲ್ಲಿ ಇದು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಈ ಪ್ರಶಸ್ತಿ ಘೋಷಣೆಯಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಎದುರಾಗಿದೆ. ಈ ಚಿತ್ರವನ್ನು ತೆಗೆದ ಅಸೋಸಿಯೇಟೆಡ್ ಪ್ರೆಸ್ ಹಮಾಸ್ ಫೋಟೋಗ್ರಾಫರ್ ಪ್ರತಿಷ್ಠಿತ ಫೋಟೋಗ್ರಾಫರ್ ಈ ಪ್ರಶಸ್ತಿಯನ್ನು ಗೆದ್ದಿದ್ದಾನೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಮಾಸ್‌ ಉಗ್ರರು ಯುವತಿ ನಗ್ನ ಮೆರವಣಿಗೆ ಮಾಡಿದ್ದ ಫೋಟೋಗೆ ಪ್ರಶಸ್ತಿ; ಇಸ್ರೇಲಿಗರ ಭಾರೀ ಆಕ್ರೋಶ

https://newsfirstlive.com/wp-content/uploads/2024/03/hamas.jpg

Load More