newsfirstkannada.com

ಅರೆಬೆತ್ತಲೆಯ ಮೆರವಣಿಗೆ.. ಹಮಾಸ್ ಉಗ್ರರ ವಶದಲ್ಲಿದ್ದ ಶಾನಿ ಲೌಕ್ ಹತ್ಯೆ ಹೇಗಾಯ್ತು? ಇಸ್ರೇಲ್ ಹೇಳಿದ್ದೇನು?

Share :

Published October 31, 2023 at 5:56am

    ಅಕ್ಟೋಬರ್ 7 ರಂದು ಇಸ್ರೇಲ್‌ನ ಮೇಲೆ ಹಮಾಸ್ ಉಗ್ರರಿಂದ ದಾಳಿ

    ಅಂದು ಗಾಜಾ ಗಡಿಯಲ್ಲಿ ಜರ್ಮನಿ-ಇಸ್ರೇಲಿಗರ ಪಾರ್ಟಿ ನಡೆದಿತ್ತು

    ಸಿಕ್ಕ, ಸಿಕ್ಕವರನ್ನು ಕೊಲ್ಲುತ್ತಿದ್ದ ರಾಕ್ಷಸರಿಂದ ಶಾನಿ ಲೌಕ್ ಅಪಹರಣ

ಇಸ್ರೇಲ್‌ ಮೇಲೆ ದಾಳಿ ಮಾಡಿದ ಹಮಾಸ್‌ ಉಗ್ರರ ರಕ್ತದಾಹ ಭಯಾನಕವಾದದ್ದು. ಅವರ ಗುಂಡಿನ ದಾಳಿಗಿಂತಲೂ ಅವರು ಇಸ್ರೇಲ್‌ನಲ್ಲಿ ಮಹಿಳೆಯರು, ಮಕ್ಕಳನ್ನು ಅಪಹರಿಸಿ ಕೊಟ್ಟ ಚಿತ್ರಹಿಂಸೆ ಬೆಚ್ಚಿ ಬೀಳಿಸುವಂತಿದೆ. ಇಸ್ರೇಲ್, ಪ್ಯಾಲೆಸ್ತೇನ್ ಮಧ್ಯೆ ಯುದ್ಧ ಸತತ 23 ದಿನಗಳಿಂದ ನಡೆಯುತ್ತಿರುವಾಗಲೇ ಮತ್ತೊಂದು ಕರಾಳ ಸಾವಿನ ಸತ್ಯ ಬಯಲಾಗಿದೆ.

ಕಳೆದ ಅಕ್ಟೋಬರ್ 7 ರಂದು ಇಸ್ರೇಲ್‌ನ ಮೇಲೆ ಹಮಾಸ್ ಉಗ್ರರು ಏಕಾಏಕಿ ದಾಳಿ ಮಾಡಿದ್ದರು. ಅಂದು ಗಾಜಾ ಗಡಿಯಲ್ಲಿ ಜರ್ಮನಿ-ಇಸ್ರೇಲಿಗರ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರ ಮೇಲೆ ಹಮಾಸ್ ಉಗ್ರರು ಮನಬಂದಂತೆ ಗುಂಡಿನ ದಾಳಿ ಮಾಡಿದ್ದರು. ಪಾರ್ಟಿಯ ಗ್ರೌಂಡ್ ನೋಡ, ನೋಡುತ್ತಿದ್ದಂತೆ ನರಕವಾಗಿ ಹೋಯ್ತು. ಸಿಕ್ಕ, ಸಿಕ್ಕವರನ್ನು ಕೊಲ್ಲುತ್ತಿದ್ದ ರಾಕ್ಷಸರು, ಮಹಿಳೆಯರಿಗೆ ಚಿತ್ರಹಿಂಸೆ ಕೊಟ್ಟರು.

ಜರ್ಮನಿ-ಇಸ್ರೇಲಿಗರ ಪಾರ್ಟಿಗೆ ನುಗ್ಗಿದ ಹಮಾಸ್ ಉಗ್ರರು ಶಾನಿ ಲೌಕ್ ಅನ್ನೋ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪ್ ಜೊತೆಗೆ ಆಕೆಯನ್ನ ಅರೆಬೆತ್ತಲೆ ಸ್ಥಿತಿಯಲ್ಲಿ ಉಗ್ರರು ಟ್ರಕ್‌ನಲ್ಲಿ ಕರೆದೊಯ್ದಿದ್ದರು. ಹಮಾಸ್ ಉಗ್ರರ ಈ ಭಯಾನಕ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಜರ್ಮನ್ ಮೂಲದ ಮಹಿಳೆಯ ಅರೆಬೆತ್ತಲೆಯ ಮೆರವಣಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಘಟನೆ ನಡೆದ ಕೆಲವು ದಿನಗಳ ಬಳಿಕ ಶಾನಿ ಲೌಕ್ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ಆದರೆ ಶಾನಿ ಲೌಕ್ ತಾಯಿ ಅದನ್ನು ನಿರಾಕರಿಸಿದ್ದರು. ತಮ್ಮ ಮಗಳು ಹತ್ಯೆಯಾಗಿಲ್ಲ, ಕಿಡ್ನ್ಯಾಪ್ ಆಗಿದ್ದಾಳೆ ಎಂದು ತಾಯಿ ಹೇಳಿದ್ದರು. ಆದರೀಗ ಶಾನಿ ಲೌಕ್ ಹತ್ಯೆಯಾಗಿದೆ ಎಂದ ಶಾನಿ ಲೌಕ್ ಅವರ ತಾಯಿ ಹಾಗೂ ಇಸ್ರೇಲ್ ಸೇನೆ ದೃಢಪಡಿಸಿದೆ.

ಮ್ಯೂಸಿಕಲ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಿದ್ದ ಶಾನಿ ಲೌಕ್‌ಗೆ ಉಗ್ರರು ಚಿತ್ರಹಿಂಸೆ ನೀಡಿದ್ದಾರೆ. ಕಿಡ್ನ್ಯಾಪ್ ಮಾಡಿದ್ದ ವೇಳೆ ಆಕೆಯ ಕಾಲುಗಳನ್ನೇ ಮುರಿಯಲಾಗಿತ್ತು. ಚಿತ್ರಹಿಂಸೆ ಕೊಟ್ಟು ಆಕೆಯನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್‌ ಸೇನೆ ಖಚಿತಪಡಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶಾನಿ ಲೌಕ್‌ ಹತ್ಯೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರೆಬೆತ್ತಲೆಯ ಮೆರವಣಿಗೆ.. ಹಮಾಸ್ ಉಗ್ರರ ವಶದಲ್ಲಿದ್ದ ಶಾನಿ ಲೌಕ್ ಹತ್ಯೆ ಹೇಗಾಯ್ತು? ಇಸ್ರೇಲ್ ಹೇಳಿದ್ದೇನು?

https://newsfirstlive.com/wp-content/uploads/2023/10/Shani-lauk.jpg

Load More