/newsfirstlive-kannada/media/post_attachments/wp-content/uploads/2025/01/harsha-richhariya-1.jpg)
ಪ್ರಯಾಗರಾಜ್‌ನಲ್ಲಿ ಶುರುವಾಗಿರೋ ಮಹಾಕುಂಭಮೇಳಕ್ಕೆ ಕೋಟ್ಯಾಂತರು ಭಕ್ತರು ಹರಿದು ಬರ್ತಿದ್ದಾರೆ. ಗಂಗಾ ತೀರದಲ್ಲಿ ಅನೇಕ ಋಷಿಗಳು, ಸಂತರು ಮತ್ತು ಮಹಾತ್ಮರು ಕಾಣಿಸಿಕೊಳ್ತಿದ್ದಾರೆ. ಹೀಗೆ ಕಾಣಿಸಿಕೊಂಡ ಋಷಿಗಳ, ಸಂತರ ಜೀವನಶೈಲಿ ಹೇಗಿರುತ್ತೆ ಅನ್ನೋದ್ರ ಬಗ್ಗೆ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಯುವ ಸಾಧ್ವಿಯೊಬ್ಬರ ವಿಡಿಯೋ ವೈರಲ್ ಆಗಿತ್ತು.
ಅವರೇ ಮಾಡೆಲ್! ಹೆಸರು ಹರ್ಷ ರಿಚರಿಯಾ. ಯೂಟ್ಯೂಬರ್, ಌಂಕರ್ ಆಗಿರುವ ಇವರು, ಉತ್ತರಾಖಂಡ ನಿವಾಸಿ. ದೇವರ, ಆಧ್ಯಾತ್ಮ, ಸನಾತನ ಧರ್ಮದ ಮೇಲೆ ಇವರಿಗೆ ಎಲ್ಲಿಲ್ಲದ ಆಸಕ್ತಿ. ಅಪಾರವಾದ ಭಕ್ತಿ, ತುಂಡು ಬಟ್ಟೆ ಧರಿಸಿ ರೀಲ್ಸ್ ಮಾಡಿ ಟ್ರೆಂಡ್ ಆಗುತ್ತಿದ್ದ ಬ್ಲೂ ಐಸ್ ಸುಂದರಿ, ಸದ್ಯ ಆಧ್ಯಾತ್ಮ ಜಗತ್ತಿನ ಕಡೆ ಮುಖ ಮಾಡಿದ್ದಾರೆ. ಹಲವಾರು ಕಡೆಗೆ ಪ್ರಯಾಣ ಮಾಡಿ ವಿಡಿಯೋಗಳನ್ನ ಮಾಡುತ್ತಿದ್ದ ಈಕೆ, ಮಹಾಕುಂಭಮೇಳದಲ್ಲಿ ಸಾಧುಗಳ ಜೊತೆ ಪ್ರತ್ಯಕ್ಷವಾಗಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: 2ನೇ ದಿನ ದಾಖಲೆ ಬರೆದ ಮಹಾ ಕುಂಭಮೇಳ: 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ
ಹರ್ಷ ರಿಚರಿಯಾ ನಡೆಯನ್ನು ಜ್ಯೋತಿರ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಖಂಡಿಸಿದ್ದಾರೆ. ಹರ್ಷ ರಿಚರಿಯಾರನ್ನು ಮಹಾಮಂಡಲೇಶ್ವರನ ರಾಜ ರಥದ ಮೇಲೆ ಕೂರಿಸಿರೋದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಾಕುಂಭದಲ್ಲಿ ಇಂತಹ ಸಂಪ್ರದಾಯ ಆರಂಭಿಸಿರುವುದು ತಪ್ಪು. ಇದು ವಿಕೃತ ಮನಸ್ಥಿತಿಯ ಪರಿಣಾಮ. ಮಹಾಕುಂಭದಲ್ಲಿ ಮುಖದ ಸೊಬಗಲ್ಲ ಹೃದಯದ ಸೊಬಗು ಕಾಣಬೇಕಿತ್ತು ಎಂದು ಪ್ರತಿಪಾದಿಸಿದ್ದಾರೆ.
ಸನ್ಯಾಸ ದೀಕ್ಷೆ ತೆಗೆದುಕೊಳ್ಳಬೇಕೋ, ಮದುವೆಯಾಗಬೇಕೋ ಎಂದು ಇನ್ನೂ ನಿರ್ಧರಿಸದವರಿಗೆ ಸಂತ ಮಹಾತ್ಮರ ರಾಜ ರಥದಲ್ಲಿ ಸ್ಥಾನ ನೀಡುವುದು ಸೂಕ್ತವಲ್ಲ. ಭಕ್ತನಾಗಿ ಪಾಲ್ಗೊಂಡಿದ್ದರೆ ಚೆನ್ನಾಗಿತ್ತು, ಆದರೆ ಕೇಸರಿ ಬಟ್ಟೆಯಲ್ಲಿ ರಾಜ ರಥದ ಮೇಲೆ ಕುಳಿತುಕೊಳ್ಳುವುದು ಸಂಪೂರ್ಣ ತಪ್ಪು. ಸನಾತನದ ಕಡೆಗೆ ಸಮರ್ಪಣಾಭಾವ ಹೊಂದಬೇಕು. ಮಹಾಕುಂಭದಲ್ಲಿ ಮುಖದ ಸೊಬಗಲ್ಲ, ಮನದ ಸೊಬಗು ಕಾಣಬೇಕಿತ್ತು ಎಂದಿದ್ದಾರೆ.
ಇದನ್ನೂ ಓದಿ: ಮಹಾಕುಂಭ ಮೇಳದಲ್ಲಿ ಸ್ಟೀವ್ ಜಾಬ್ಸ್ ಪತ್ನಿ ಅಸ್ವಸ್ಥ.. ಪುಣ್ಯ ಸ್ನಾನಕ್ಕೆ ಬಂದಾಗ ಏನಾಯ್ತು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ