newsfirstkannada.com

PUCಯಲ್ಲಿ 2 ಬಾರಿ ಫೇಲ್​.. ಕನ್ನಡದಲ್ಲೇ UPSC ಪಾಸ್ ಮಾಡಿ ಸಾಧನೆ ಮಾಡಿದ ಶಾಂತಪ್ಪ ಜಡೆಮ್ಮನವರ್

Share :

Published April 16, 2024 at 9:28pm

Update April 16, 2024 at 9:37pm

    ಕನ್ನಡದಲ್ಲೇ UPSC ಪರೀಕ್ಷೆ ಬರೆದ ಬಳ್ಳಾರಿಯ ಶಾಂತಪ್ಪ ಜಡೆಮ್ಮನವರ್

    644 ಱಕಿಂಗ್​ ಪಡೆದುಕೊಂಡು ಯುವ ಪೀಳಿಗೆಗೆ ಮಾದರಿಯಾದ ಶಾಂತಪ್ಪ

    ವಿಧಾನಸೌಧ ಭದ್ರತಾ ವಿಭಾಗದಲ್ಲಿ PSI ಆಗಿ ಕರ್ತವ್ಯ ನಿರ್ವಹಿಸುತ್ತಿರೋ ಶಾಂತಪ್ಪ

ಬಳ್ಳಾರಿ: ಇಂದು ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಒಟ್ಟು 1,016 ಅಭ್ಯರ್ಥಿಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಇದರಲ್ಲಿ ಬಳ್ಳಾರಿಯ ಶಾಂತಪ್ಪ ಜಡೆಮ್ಮನವರ್ ಎಂಬುವವರು ಕನ್ನಡದಲ್ಲೇ UPSC ಪರೀಕ್ಷೆ ಬರೆದು 644 ಱಕಿಂಗ್​ ಪಡೆದುಕೊಂಡಿದ್ದಾರೆ

ಇದನ್ನೂ ಓದಿ: UPSC ಫಲಿತಾಂಶ ಪ್ರಕಟ: ಕೋಚಿಂಗ್​ ಸೆಂಟರ್​ಗೆ ಹೋಗದೇ ಪಾಸ್​ ಆದ ಕನ್ನಡತಿ ಸೌಭಾಗ್ಯ ಬೀಳಗಿಮಠ

ಹೌದು, ಬಳ್ಳಾರಿ ಮೂಲಕ ಶಾಂತಪ್ಪ ಅವರು ಪಿಯುಸಿಯಲ್ಲಿ ಎರಡು ಬಾರಿ ಫೇಲ್ ಆಗಿದ್ದವರು. ಆದರೂ ತಮ್ಮ ಛಲ ಕೈ ಬಿಡದೆ ಪ್ರಯತ್ನ ಪಟ್ಟ ಶಾಂತಪ್ಪನರು ಯುಪಿಎಸ್​ಸಿ ಪರೀಕ್ಷೆಯಲ್ಲೂ ಸಹ ಪಾಸಾಗಿದ್ದಾರೆ. ಸದ್ಯ ಇವರು ವಿಧಾನಸೌಧ ಭದ್ರತಾ ವಿಭಾಗದಲ್ಲಿ ಪಿಎಸ್‌ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನು, ಇದೇ ವಿಚಾರವಾಗಿ ನ್ಯೂಸ್​​ಫಸ್ಟ್​ನೊಂದಿಗೆ ಮಾತಾಡಿದ ಶಾಂತಪ್ಪ ಜಡೇಮ್ಮನವರ್, ತುಂಬಾ ಖುಷಿ ಅನಿಸತ್ತೆ. ಪಿಯುಸಿಯಲ್ಲಿ ಫೇಲ್ ಆಗಿದ್ದವನು ನಾನು. ನಮ್ಮಂಥವರಿಗೆ UPSC ಪರೀಕ್ಷೆ ಗಗನ ಕುಸುಮದಂತಿತ್ತು. ಬದುಕು ಒಂದು ಸುವರ್ಣಾವಕಾಶ ಈಸಬೇಕು ಇದ್ದು ಜಯಿಸಬೇಕು. ಪಿಯುಸಿಯಲ್ಲಿ ಫೇಲಾದವನೇ UPSCಯಲ್ಲಿ ಪಾಸಾಗಿರುವಾಗ ನೀವೆಲ್ಲರೂ ಯಾಕೆ ಮಾಡಲಿಕ್ಕಾಗಲ್ಲ. ಸಾಧನೆಯೆಂಬುದು ಸಾಧಕನ ಸ್ವತ್ತೆ ವಿನಹ ಸೋಮಾರಿಯ ಸ್ವತ್ತಲ್ಲ. ಬಸವ ತತ್ವದಲ್ಲಿ ನಂಬಿಕೆ ಇಟ್ಟವನು ನಾನು. ಕೆಲಸದ ಮಧ್ಯೆ ಬಿಡುವು ಸಿಕ್ಕಾಗ ಓದಿಕೊಳ್ತಿದ್ದೆ. ಮೂರನೇ ಇಂಟರ್ ವ್ಯೂ 8ನೇ ಪ್ರಯತ್ನದಲ್ಲಿ ಪಾಸ್ ಆಗಿದ್ದೀನಿ. ನಮ್ಮದೇ ಆಚಾರ್ಯ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದೇನೆ. ಕೇವಲ ಪರಿಕಲ್ಪನೆ ಜ್ಞಾನ ಮಾತ್ರ UPSC ನಲ್ಲಿ ಕೆಲಸ ಮಾಡುತ್ತೆ. ಅಧಿಕಾರ ಸಂಬಂಧಕ್ಕಿಂತ ಮಾನವೀಯ ಸಂಬಂಧ ನಮಗೆ ತುಂಬಾ ಮುಖ್ಯ. ನಮ್ಮನ್ನು ನಿದ್ರೆ ಮಾಡಲು ಬಿಡದಂತ ಕನಸು ಕಾಣಬೇಕು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PUCಯಲ್ಲಿ 2 ಬಾರಿ ಫೇಲ್​.. ಕನ್ನಡದಲ್ಲೇ UPSC ಪಾಸ್ ಮಾಡಿ ಸಾಧನೆ ಮಾಡಿದ ಶಾಂತಪ್ಪ ಜಡೆಮ್ಮನವರ್

https://newsfirstlive.com/wp-content/uploads/2024/04/ias.jpg

Load More