newsfirstkannada.com

ಮಾವ, ಸೋದರಳಿಯನ ಕದನಕ್ಕೆ ಮೆಗಾ ಟ್ವಿಸ್ಟ್‌.. ಈಗ ಗಡಿಯಾರದ ಆಟ ನಡೆಯುತ್ತಾ?

Share :

Published March 19, 2024 at 8:59pm

  ಪಕ್ಷ ಇಬ್ಭಾಗ ಮಾಡಿದಕ್ಕೆ ಬುದ್ಧಿ ಕಲಿಸುವ ಉತ್ಸಾಹದಲ್ಲಿ ಶರದ್ ಪವಾರ್

  ಎರಡು ಶಿವಸೇನೆ, ಎರಡು NCP ಪಕ್ಷದ ಯುದ್ಧದಲ್ಲಿ ಲೋಕಸಭಾ ಚುನಾವಣೆ

  2024ರಲ್ಲೇ ಮಹಾರಾಷ್ಟ್ರದಲ್ಲಿ ವಿಧಾನಸಭೆಗೂ ಎಲೆಕ್ಷನ್ ಕೂಡ ರಣರೋಚಕ

ಮಹಾರಾಷ್ಟ್ರದಲ್ಲಿ ಜಿದ್ದಾಜಿದ್ದಿನ ರಾಜಕೀಯ ಕದನ ರಂಗೇರಿದೆ. ಲೋಕಸಭಾ ಚುನಾವಣೆಯ ಜೊತೆಗೆ 2024ರಲ್ಲೇ ಮಹಾರಾಷ್ಟ್ರದಲ್ಲಿ ವಿಧಾನಸಭೆಗೂ ಎಲೆಕ್ಷನ್ ನಡೆಯಲಿದೆ. ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷಗಳು ಈಗ ಎರಡು ಅಗ್ನಿಪರೀಕ್ಷೆ ಎದುರಿಸಲು ಸಜ್ಜಾಗುತ್ತಿವೆ.

ಮಹಾರಾಷ್ಟ್ರದಲ್ಲಿ ಸದ್ಯ ಶಿವಸೇನೆ, ಬಿಜೆಪಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ನೇತೃತ್ವದ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಏಕನಾಥ್ ಶಿಂಧೆ ಅವರು ಶಿವಸೇನೆಯನ್ನ ಎರಡು ಭಾಗ ಮಾಡಿ ಉದ್ಧವ್ ಠಾಕ್ರೆ ಬಣಕ್ಕೆ ಸೆಡ್ಡು ಹೊಡೆದಿದ್ದಾರೆ. ಇದೀಗ ಶಿಂಧೆ ಹಾದಿಯಲ್ಲೇ ರಾಜಕೀಯ ಕ್ಷಿಪ್ರ ಕ್ರಾಂತಿ ನಡೆಸಿದ ಅಜಿತ್ ಪವಾರ್ ಕೂಡ ಶರದ್ ಪವಾರ್ ಅವರು NCPಗೆ ಸೆಡ್ಡು ಹೊಡೆದು ಚುನಾವಣೆ ಎದುರಿಸಲು ಮುಂದಾಗಿದ್ದಾರೆ.

ಶರದ್ ಪವಾರ್ ನೇತೃತ್ವದ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಬಹುಮತದ ಆಧಾರದಲ್ಲಿ ಅಜಿತ್ ಪವಾರ್ ಬಣಕ್ಕೆ ಸೇರಿದೆ. ಆದರೆ NCP ಪಕ್ಷದ ಹೆಸರು, ಚಿಹ್ನೆ ವಿಚಾರಕ್ಕೆ ಗೊಂದಲ ಏರ್ಪಟ್ಟಿತ್ತು. ಮಾವ, ಸೋದರಳಿಯನ ಈ ಮಹಾ ಕದನ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಎನ್‌ಸಿಪಿ ಪಕ್ಷದ ಬಹುಮುಖ್ಯ ಗೊಂದಲಕ್ಕೆ ತೆರೆ ಎಳೆಯಲಾಗಿದೆ.

NCP ಪಕ್ಷದ ಹೆಸರು, ಚಿಹ್ನೆ ವಿಚಾರದ ಗೊಂದಲಕ್ಕೆ ಇಂದು ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ. ಅಜಿತ್ ಪವಾರ್ ಅವರ ಬಣಕ್ಕೆ ಅಧಿಕೃತ NCP ಪಕ್ಷ ಸೇರಿದೆ. ಶರದ್ ಪವಾರ್ ಅವರ ಪಕ್ಷಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಶರದ್‌ಚಂದ್ರ ಪವಾರ್ ಪಾರ್ಟಿ ಅನ್ನೋದು ಅಂತಿಮವಾಗಿದೆ. ಗಡಿಯಾರ ಚಿಹ್ನೆ ಕೂಡ ಅಜಿತ್ ಪವಾರ್ ಅವರಿಗೆ ಒಲಿದಿದ್ದು, ಶರದ್ ಪವಾರ್ ಬಣಕ್ಕೆ ಕಹಳೆ ಊದುವ ವ್ಯಕ್ತಿಯ ಗುರುತನ್ನು ಚಿಹ್ನೆಯಾಗಿ ಬಳಸಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ಶರದ್ ಪವಾರ್ ಪಕ್ಷದ ಚಿಹ್ನೆಯನ್ನು ಬೇರೆಯವರು ಬಳಸದಂತೆ ಸೂಚಿಸಬೇಕು ಎಂದಿದೆ.

ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆಯಿಂದ ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಪಕ್ಷದ ಗೊಂದಲವೇನೋ ಬಗೆಹರಿದಿದೆ. ಆದರೆ, ಶರದ್ ಪವಾರ್ ಹಾಗೂ ಅಜಿತ್ ಪವಾರ್ ಅವರ ಮಧ್ಯೆ ಅಸಲಿ ರಾಜಕೀಯದ ಯುದ್ಧ ಈಗ ಶುರುವಾಗುತ್ತಿದೆ. NCP ಪಕ್ಷವನ್ನು ಇಬ್ಭಾಗ ಮಾಡಿದಕ್ಕೆ ಬುದ್ಧಿ ಕಲಿಸುವ ಉತ್ಸಾಹ ಶರದ್ ಪವಾರ್ ಅವರಿಗಿದೆ. ಅಜಿತ್ ಪವಾರ್ ಅವರಿಗೆ ಶರದ್ ಪವಾರ್ ಬಣಕ್ಕೆ ಟಕ್ಕರ್ ಕೊಡುವ ಆಸೆ ಇದೆ.

ಇದನ್ನೂ ಓದಿ: BREAKING: ಮಹಾರಾಷ್ಟ್ರದಲ್ಲಿ ಸಂಡೇ ಸಖತ್ ಪವರ್ ಪ್ಲೇ; NCPಗೆ ಕೈ ಕೊಟ್ಟ ಶರದ್ ಪವಾರ್‌ ಅಳಿಯ ಅಜಿತ್ ಪವಾರ್

ಶಿವಸೇನೆಯ ಏಕನಾಥ್ ಶಿಂಧೆ ಹಾಗೂ ಉದ್ಧವ್ ಠಾಕ್ರೆ ಬಣದ ಬಡಿದಾಟವೂ NCP ಪಕ್ಷಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಎರಡು ಶಿವಸೇನೆ, ಎರಡು NCP ಪಕ್ಷದ ಯುದ್ಧದಲ್ಲಿ ಚುನಾವಣೆ ರಣರೋಚಕವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಯಾರು ಎಷ್ಟು ಗೆಲ್ತಾರೆ ಅನ್ನೋ ಕುತೂಹಲದ ಮಧ್ಯೆ ಹಿಂದುತ್ವದ ಅಜೆಂಡಾವೇ ನಿರ್ಣಾಯಕವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾವ, ಸೋದರಳಿಯನ ಕದನಕ್ಕೆ ಮೆಗಾ ಟ್ವಿಸ್ಟ್‌.. ಈಗ ಗಡಿಯಾರದ ಆಟ ನಡೆಯುತ್ತಾ?

https://newsfirstlive.com/wp-content/uploads/2024/03/NCP-Politics.jpg

Load More