/newsfirstlive-kannada/media/post_attachments/wp-content/uploads/2024/02/MH_FISH_ATTACK.jpg)
ಮುಂಬೈ: ನದಿಗೆ ಹೊಂದಿಕೊಂಡ ತೊರೆಯಲ್ಲಿ ಮೀನು ಹಿಡಿಯಲು ಹೋದಾಗ ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿ, ಕಾಲನ್ನು ಕಿತ್ತುಕೊಂಡ 200 ಕೆಜಿಯ ಶಾರ್ಕ್ವೊಂದು ಬಳಿಕ ಸಾವನ್ನಪ್ಪಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ನದಿಗೆ ಸಂಪರ್ಕವಿರುವ ತೊರೆಯಲ್ಲಿ ಈ ಘಟನೆ ನಡೆದಿದೆ.
ಮೀನುಗಾರ ವಿಕ್ಕಿ ಸುರೇಶ್ ಗೊವಾರಿ (32) ಶಾರ್ಕ್ನಿಂದ ಕಾಲನ್ನು ಕಳೆದುಕೊಂಡ ವ್ಯಕ್ತಿ. ವಿಕ್ಕಿ ಸೇರಿ ಕೆಲ ಮೀನುಗಾರರು ರಾತ್ರಿ ಸಮಯದಲ್ಲಿ ಮೀನುಗಳನ್ನು ಹಿಡಿಯಲೆಂದು ತೊರೆಯ ನೀರಿಗೆ ಇಳಿದಿದ್ದಾರೆ. ಈ ವೇಳೆ ಶಾರ್ಕ್ವೊಂದು ವ್ಯಕ್ತಿ ಮೇಲೆ ಡೆಡ್ಲಿ ಅಟ್ಯಾಕ್ ಮಾಡಿದ್ದು ಆತನ ಕಾಲನ್ನು ಕಿತ್ತುಕೊಂಡಿದೆ. ಆದರೆ ನಂತರ ಶಾರ್ಕ್ ಸಾವನ್ನಪ್ಪಿರುವುದು ಅಲ್ಲಿನ ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಇನ್ನು ಶಾರ್ಕ್ ಅಟ್ಯಾಕ್ನಿಂದ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಸ್ಥಿತಿ ತೀವ್ರ ಗಂಭೀರವಾಗಿದೆ. ಅಲ್ಲದೇ ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರೆಲ್ಲ ರಾತ್ರಿಯಲ್ಲೇ ಶಾರ್ಕ್ ನೋಡಲು ದಡದ ಮೇಲೆ ಜಮಾಯಿಸಿದ್ದರು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ