newsfirstkannada.com

ಆಂಧ್ರದಲ್ಲಿ ಅಣ್ಣನ ಸರ್ಕಾರದ ವಿರುದ್ಧವೇ ರೊಚ್ಚಿಗೆದ್ದ ಶರ್ಮಿಳಾ ರೆಡ್ಡಿ; ಹೋರಾಟಕ್ಕೆ ಪೊಲೀಸ್ ಅಡ್ಡಿ!

Share :

Published February 22, 2024 at 1:05pm

Update February 22, 2024 at 1:10pm

  ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ಶರ್ಮಿಳಾ ಹೋರಾಟ

  ಸೆಕ್ರೆಟೇರಿಯೇಟ್ ಚಲೋ ಪ್ರತಿಭಟನಾ ಮೆರವಣಿಗೆಗೆ ಅಡ್ಡಿ

  ಕಾಂಗ್ರೆಸ್ ಕಚೇರಿಯಲ್ಲಿ ಮಲಗಿ ರಾತ್ರಿ ಕಳೆದ ಶರ್ಮಿಳಾ ರೆಡ್ಡಿ

ವಿಜಯವಾಡ: ಆಂಧ್ರಪ್ರದೇಶದಲ್ಲಿ ಅಣ್ಣನ ಸರ್ಕಾರದ ವಿರುದ್ಧವೇ ತಂಗಿ ಸಮರ ಸಾರಿದ್ದಾರೆ. ಸಿಎಂ ವೈ.ಎಸ್ ಜಗನ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವೈ.ಎಸ್ ಶರ್ಮಿಳಾ ರೆಡ್ಡಿ ಧರಣಿಗೆ ಕುಳಿತಿದ್ದಾರೆ. ವಿಜಯವಾಡ ಕಾಂಗ್ರೆಸ್ ರತ್ನ ಭವನದ ಎದುರು ಪ್ರತಿಭಟನೆ ನಡೆಸುತ್ತಿರುವ ಶರ್ಮಿಳಾ ರೆಡ್ಡಿ ಹಾಗೂ ಕಾಂಗ್ರೆಸ್ ನಾಯಕರು ಧಿಕ್ಕಾರ ಕೂಗಿದ್ದಾರೆ.

ಲೋಕಸಭಾ ಎಲೆಕ್ಷನ್ ಜೊತೆಗೆ ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಹೀಗಾಗಿ ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷೆಯಾಗಿರುವ ವೈ.ಎಸ್‌ ಶರ್ಮಿಳಾ ಅವರು ಇಂದು ಸೆಕ್ರೆಟೇರಿಯೇಟ್ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ಚಲೋ ಸೆಕ್ರೆಟೇರಿಯೇಟ್ ನಡೆಸಲು ಹೊರಟ ಹಲವು ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಚಲೋ ಸೆಕ್ರೆಟೇರಿಯೇಟ್ ನಡೆಸಲು ಹೊರಟರೆ ಶರ್ಮಿಳಾ ಅವರನ್ನು ಕೂಡ ಬಂಧಿಸುವ ಸಾಧ್ಯತೆ ಇದೆ. ಚಲೋ ಸೆಕ್ರೆಟೇರಿಯೇಟ್‌ಗೂ ಮುನ್ನ ಶರ್ಮಿಳಾ ರೆಡ್ಡಿ ಅವರು ವಿಜಯವಾಡ ಕಾಂಗ್ರೆಸ್ ಕಚೇರಿ ಎದುರು ಧರಣಿ ನಡೆಸಿದ್ದಾರೆ.

ಆಂಧ್ರ ಸರ್ಕಾರದ ವಿರುದ್ಧ ವೈ.ಎಸ್ ಶರ್ಮಿಳಾ ಅವರ ಹೋರಾಟಕ್ಕೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಸೆಕ್ರೆಟೇರಿಯೇಟ್ ಚಲೋ ಕಾರ್ಯಕ್ರಮಕ್ಕೆ ಬ್ರೇಕ್ ಹಾಕಲು ನಿನ್ನೆಯೇ ಆಂಧ್ರ ಸರ್ಕಾರದಿಂದ ಶರ್ಮಿಳಾಗೆ ಗೃಹ ಬಂಧನಕ್ಕೆ ಪ್ಲ್ಯಾನ್ ಮಾಡಲಾಗಿತ್ತು. ಈ ವಿಚಾರ ತಿಳಿದ ಶರ್ಮಿಳಾ ಅವರು ವಿಜಯವಾಡದ ಕಾಂಗ್ರೆಸ್ ಕಚೇರಿಯಲ್ಲಿ ಮಲಗಿ ರಾತ್ರಿ ಕಳೆದಿದ್ದರು. ಇಂದು ಕಾಂಗ್ರೆಸ್ ಕಚೇರಿ ಎದುರು ಸೆಕ್ರೆಟೇರಿಯೇಟ್ ಚಲೋ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: VIDEO: ಕಾಂಡೋಮ್​ ಮೇಲೆ ಜಗನ್​​-ಟಿಡಿಪಿ ಪಕ್ಷಗಳ ಚಿಹ್ನೆ; ಚುನಾವಣೆಗಾಗಿ ಕೀಳುಮಟ್ಟದ ಪ್ರಚಾರಕ್ಕೆ ಇಳಿಯಿತೇ?

ಇದೇ ಏಪ್ರಿಲ್, ಮೇ ತಿಂಗಳಲ್ಲಿ ಆಂಧ್ರ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಅಣ್ಣ ಜಗನ್ ಮೋಹನ್ ರೆಡ್ಡಿ ಸರ್ಕಾರದ ವಿರುದ್ಧ ತಂಗಿ ಶರ್ಮಿಳಾ ರೆಡ್ಡಿ ಉಗ್ರ ಹೋರಾಟಕ್ಕೆ ಮುಂದಾಗಿದ್ದಾರೆ. ಅಣ್ಣ ವರ್ಸಸ್ ತಂಗಿ ರಾಜಕೀಯ ಮುಂದಿನ ದಿನಗಳಲ್ಲಿ ಮತ್ತಷ್ಟು ಜೋರಾಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಂಧ್ರದಲ್ಲಿ ಅಣ್ಣನ ಸರ್ಕಾರದ ವಿರುದ್ಧವೇ ರೊಚ್ಚಿಗೆದ್ದ ಶರ್ಮಿಳಾ ರೆಡ್ಡಿ; ಹೋರಾಟಕ್ಕೆ ಪೊಲೀಸ್ ಅಡ್ಡಿ!

https://newsfirstlive.com/wp-content/uploads/2024/02/Andhra-YS-Sharmila.jpg

Load More