/newsfirstlive-kannada/media/post_attachments/wp-content/uploads/2025/03/NOOR-JAHAN.jpg)
ಮೊಘಲ ಸಾಮ್ರಾಜ್ಯ ಅಂದ್ರೇ ಅದು ರೋಚಕತೆಗಳ, ಕ್ರೌರ್ಯದ, ಪ್ರೇಮ ಪರಾಕಾಷ್ಠೆಗಳ, ಸಾಮ್ರಾಜ್ಯ ವಿಸ್ತರಣೆ ಹಪಾಹಪಿಯಗಳಿಂದ ತುಂಬಿದ ಮಹಾರೋಚಕತೆಯ ಯುಗ. ಇಲ್ಲಿ ಒಂದು ಹೆಣ್ಣಿಗಾಗಿ, ಪ್ರತಿಷ್ಠೆಗಾಗಿ, ಧರ್ಮ ಪಸರಿಸುವುದಕ್ಕಾಗಿ, ಇಡೀ ಭಾರತದಲ್ಲಿ ಇಸ್ಲಾಂ ಸ್ಥಾಪನೆಗಾಗಿ ಹೀಗೆ ಹಲವಾರು ಉದ್ದೇಶಗಳಿಗಾಗಿ ಯುದ್ಧಗಳು ನಡೆದಿವೆ. ಈ ಸಾಮ್ರಾಜ್ಯದಲ್ಲಿ ಪರಾಕ್ರಮಿಗಳ ಜೊತೆ ಮಹಾಕ್ರೂರಿಗಳು ಸಿಗುತ್ತಾರೆ. ಅದೇ ರೀತಿ ಹೆಣ್ಣಿಗೆ ಮರುಳಾಗಿ, ಅವಳಿಗಾಗಿ ವಿಶ್ವದಲ್ಲಿಯೇ ಅದ್ಭುತ ಎನಿಸುವಂತಹ ಸ್ಮಾರಕಗಳನ್ನು ಕಟ್ಟಿದವರು ಸಿಗುತ್ತಾರೆ. ಹೀಗೆ ಮೊಘಲ್ ಸಾಮ್ರಾಜ್ಯದಲ್ಲಿ ಸಂದರತೆಯನ್ನೇ ಮೈವೆತ್ತುಕೊಂಡು ಬಂದಂತೆ ಇದ್ದ ಯುವತಿಯೊಬ್ಬಳು ಕೈದಿಯಾಗಿ ಬಂದು ನಂತರ ಇಡೀ ಮೊಘಲ ಸಾಮ್ರಾಜ್ಯದ ಚುಕ್ಕಾಣಿಯನ್ನೇ ತನ್ನ ಬೆರಳಿನ ಸಂಜ್ಞೆಯಲ್ಲಿ ಆಡಿಸಿದವಳ ಒಂದು ಕಥೆ ಇಲ್ಲಿದೆ.
ಮೊಘಲ ಸಾಮ್ರಾಜ್ಯದ ದೊರೆಗಳಲ್ಲಿ ಕೇಳಿ ಬರುವ ಪ್ರಸಿದ್ಧ ರಾಜರ ಹೆಸರುಗಳಲ್ಲಿ ಶಹಜಹಾನ್ನ ಹೆಸರು ಕೂಡ ಒಂದು. ಆತನ ಕೊನೆಯ ಪತ್ನಿ ನೂರಜಹಾನ್ ಬಗ್ಗೆ ಭಾರತೀಯ ಇತಿಹಾಸದ ಪುಟಗಳಲ್ಲಿ ರೂಚಕತೆಯ ಅಧ್ಯಾಯಗಳು ತುಂಬಿರುವ ಒಂದು ಭಾಗವೇ ಹೌದು. ನೂರಜಹಾನ್ ಒಂದು ಕಾಲದಲ್ಲಿ ಅರಮನೆಯ ಪರದೆಯ ಹಿಂದೆ ಕುಳಿತುಕೊಂಡೇ ಇಡೀ ಮೊಘಲ ಸಾಮ್ರಾಜ್ಯವನ್ನು ತನ್ನ ಬೆರಳಂಚಲ್ಲಿ ಚಲಾಯಿಸುತ್ತಿದ್ದಳು ಎಂಬ ಐತಿಹಾಸಿಕ ಉಲ್ಲೇಖಗಳು ನಮಗೆ ಕಾಣಸಿಗುತ್ತವೆ. ನೂರಜಹಾನ್ ಈ ಹಿಂದೆ ಮೊಘಲ ಸಂಸ್ಥಾನ ಎಂದೂ ಕಾಣದ ಅತ್ಯಂತ ಶಕ್ತಿಶಾಲಿ ರಾಣಿಯರಲ್ಲಿ ಒಬ್ಬಳು ಎಂಬುದು ಕೂಡ ಹೇಳಲಾಗುತ್ತದೆ.
ನೂರಜಹಾನ್ಳ ಅಸಲಿ ಕಥೆಯನ್ನು ಬೆನ್ನಟ್ಟಿ ಹೋದಾಗ ನಮಗೆ ಸಿಗುವ ಮಾಹಿತಿಗಳು, ಅವಳ ಮೂಲ ಹೆಸರು ಮೆಹರುನ್ನಿಸ್ಸಾ ಎಂದು. ತನ್ನ 17ನೇ ವಯಸ್ಸಿನಯಲ್ಲಯೇ ಆಕೆ ಅಲಿಕುಲಿ ಎಂಬ ಒಬ್ಬ ಇರಾನಿ ಯುವಕನನ್ನು ಮದುವೆಯಾಗಿದ್ದಳು. ಮೊಘಲ ಸಾಮ್ರಾಜ್ಯಕ್ಕೆ ಆತ ದ್ರೋಹ ಮಾಡಿದ ಎಂಬ ಕಾರಣಕ್ಕೆ ಆತನನ್ನು ಕೊಂದು ಹಾಕಲಾಯ್ತು ಮತ್ತು ಮೆಹರುನ್ನಿಸ್ಸಾಳನ್ನು ದಿಲ್ಲಿಗೆ ಕರೆದುಕೊಂಡು ಬಂದು. ಬಾದ್ಷಾ ಅಕ್ಬರ್ನ ಶಾಹಿ ಹರಾಮ್ನಲ್ಲಿ ಇಡಲಾಯಿತು.
ಇದನ್ನೂ ಓದಿ:ಶಿವಾಜಿ ಸಮಾಧಿ ಪಕ್ಕ ನಾಯಿಯ ಸ್ಮಾರಕ ಯಾಕೆ ಕಟ್ಟಲಾಗಿತ್ತು? ಮುಧೋಳ ಶ್ವಾನಕ್ಕೂ ಛತ್ರಪತಿಯ ಸೇನೆಗೂ ಇತ್ತಾ ನಂಟು?
ಮೆಹರುನ್ನಿಸ್ಸಾಳ ಸೌಂದರ್ಯಕ್ಕೆ ಮತ್ತೊಂದು ಹೆಸರಿನಂತೆ. ಸುಂದರತೆಯೇ ಒಂದು ಮೂರ್ತ ರೂಪ ಪಡೆದು ಬಂದಂತಿದ್ದಳು.ನೌರೋಜ್ ಉತ್ಸವದಲ್ಲಿ ಮೊದಲ ಬಾರಿ ಮೆಹರನ್ನಿಸ್ಸಾಳನ್ನು ಜಹಾಂಗಿರನಿಗೆ ತೋರಿಸಲಾಗಿತ್ತು. ಆಕೆಯ ಸೌಂದರ್ಯಕ್ಕೆ ಮರುಳಾದ ಜಹಾಂಗೀರ್ 1611ರಲ್ಲಿ ಮೆಹರನ್ನಿಸ್ಸಾಳನ್ನು ಮದುವೆಯಾದ. ಜಹಾಂಗೀರನ ಜೊತೆ ವಿವಾಹವಾದ ಬಳಿಕ ಮೆಹರುನ್ನಿಸ್ಸಾಳ ಹೆಸರು ನೂರಜಹಾನ್ ಎಂದು ಬದಲಾಯ್ತು.
ಅಸಾಧಾರಣ ಸುಂದರಿಯಾಗಿದ್ದ ನೂರಜಹಾನ್ ಅಷ್ಟೇ ಬುದ್ಧಿವಂತೆಯೂ ಕೂಡ ಆಗಿದ್ದಳು. ಅಷ್ಟು ಮಾತ್ರವಲ್ಲ ಶಸ್ತ್ರ ವಿದ್ಯೆಯನ್ನು, ಯುದ್ಧ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡ ಹೆಣ್ಣಾಗಿದ್ದಳು. ಇತಿಹಾಸ ಹೇಳುವ ಪ್ರಕಾರ ನೂರಜಹಾನ್ ಅನೇಕ ಬಾರಿ ಜಹಾಂಗೀರನ ಜೀವವನ್ನು ಉಳಿಸದ್ದಾಳಂತೆ. ಆಕೆಯ ಸೌಂದರ್ಯ ಹಾಗೂ ಇಂತಹ ನೂರಾರು ಗುಣಗಳಿಂದಾಗಿ ಜಹಾಂಗೀರ ಆಕೆಗೆ ಸಂಪೂರ್ಣವಾಗಿ ಭಾವಪರವಶನಾಗಿ ಅವಳಲ್ಲಿಯೇ ಕಳೆದು ಹೋಗಿದ್ದ. ಅದು ಅವಳ ತನ್ನ ಅಧಿಪತ್ಯವನ್ನು ಮೊಘಲ ಸಾಮ್ರಾಜ್ಯದಲ್ಲಿ ವಿಸ್ತರಿಸಲು ಅನುಕೂಲವಾಯ್ತು. ಅರಮನೆಯ ಪರದೆಯ ಹಿಂದೆ ಕುಳಿತುಕೊಂಡೇ ಇಡಈ ಮೊಘಲ ಸಾಮ್ರಾಜ್ಯವನ್ನು ತನ್ನ ಕಣ್ಣ ಇಶಾರೆಯ ಮೇಲೆ ನಡೆಸತೊಡಗಿದಳು.
ಇದನ್ನೂ ಓದಿ:ಮಾತಾಹರಿಯಿಂದ ಮಾಧುರಿ ಗುಪ್ತಾವರೆಗೂ.. ಜಗತ್ತಿನಲ್ಲಿ ಹನಿಟ್ರ್ಯಾಪ್ಗೆ ಫೇಮಸ್ ಆದ ಮೋಹಿನಿಯರು ಇವರೇ!
ಮೊಘಲ ಸಾಮ್ರಾಜ್ಯದಲ್ಲಿ ಮೊದಲ ಬಾರಿ ರಾಣಿಯೊಬ್ಬಳ ಚಿತ್ರ ಅಂದಿನ ಕಾಲದ ನಾಣ್ಯಗಳ ಮೇಲೆ ಮೂಡತೊಡಗಿದವು. ಮೊಘಲ ಸಾಮ್ರಾಜ್ಯದಲ್ಲಿ ನೂರಜಹಾನ್ಳ ಆಜ್ಞೆಗಳು ಪ್ರತಿಧ್ವನಿಸತೊಡಗಿದವು. ನೂರಜಹಾನಗಳಿಂದ ಜಹಾಂಗೀರನಿಗೆ ಯಾವುದೇ ಸಂತಾನ ಪ್ರಾಪ್ತಿಯಾಗಲಿಲ್ಲ. ಕೊನೆಗೆ ನೂರಜಹಾನ್ ತನ್ನ ಮೊದಲ ಪತಿಯ ಮಗಳನ್ನು ಜಹಾಂಗೀರನ ಅತ್ಯಂತ ಕಿರಿಪುತ್ರ ಶಹರಯಾರನೊಂದಿಗೆ ಮದುವೆ ಮಾಡಿಸಿದಳು
ಇಲ್ಲಿಗೆ ಮುಗಿಯದ ಆಕೆಯ ಸಾಮ್ರಾಜ್ಯದ ಮೇಲಿನ ಹಿಡಿತ. ಮುಂದೆ ತನ್ನ ಸೊಸೆಯ ವಿವಾಹವನ್ನು ಜಹಾಂಗೀರನ ಮಗ ಶಾಜಹಾನ್ನೊಂದಿಗೆ ಮಾಡಿಸಿದಳು, ನೂರಜಹಾನಳ ಈ ಸೊಸೆಯ ಹೆಸರೇ ಮುಮ್ತಾಜ್, ಇವಳ ನೆನಪಿಗಾಗಿಯೇ ಆಗ್ರಾದಲ್ಲಿ ಶಾಜಹಾನ್ ತಾಜ್ಮಹಲ್ನ್ನು ನಿರ್ಮಿಸಿದನನು. ನೂರಜಹಾನ್ ಹಾಗೂ ಶಾಜಹಾನ್ ನಡುವೆ ಸಂಬಂಧ ಅಷ್ಟು ಸರಿಯಾಗಿ ಇರಲಿಲ್ಲ. ಹೀಗಾಗಿ ಆಕೆ ಜಹಾಂಗೀರನ ನಂತರ ಶಹರಾಯರ್ ಮೊಘಲರ ದೊರೆಯಾಗಬೇಕು ಎಂದು ಬಯಸಿದ್ದಳು. ಆದರೆ ಇದು ಶಾಜಹಾನ್ಗೆ ಗೊತ್ತಾಗಿ ಅವನು ಇದು ನಡೆಯದಂತೆ ಸರಿಯಾದ ಷಡ್ಯಂತ್ರ ಹೆಣೆದು ಯಶಸ್ವಿಯಾದ
ಇದನ್ನೂ ಓದಿ: 65 ವರ್ಷದ ಹಳೇ ಸಿನಿಮಾ.. ಒಂದು ಹಾಡನ್ನು 105 ಬಾರಿ ಬರೆಯಲಾಯ್ತು; ಶೂಟಿಂಗ್ ಮಾಡಲು ತೆಗೆದುಕೊಂಡಿದ್ದು 2 ವರ್ಷ!
1627ರಲ್ಲಿ ಜಹಾಂಗೀರನ ಮರಣದ ನಂತರ ಮೊಘಲ ಸಾಮ್ರಾಜ್ಯದ ಮೇಲಿನ ನೂರಜಹಾನ್ಳ ಹಿಡಿತ ಕಡಿಮೆಯಾಗುತ್ತಾ ಸಾಗಿತು. ಕೊನೆಗೆ 1645ರಲ್ಲಿ ನೂರಜಹಾನ್ ಕೂಡ ನಿಧನವಾದಳು. ತನ್ನ ಕೊನೆಯ ದಿನಗಳನ್ನು ನೂರಜಹಾನ್ ಇಂದಿನ ಪಾಕಿಸ್ತಾನದಲ್ಲಿರುವ ಲಾಹೋರ್ನಲ್ಲಿ ಕಳೆದಳು ಎಂದು ತಿಳಿದು ಬರುತ್ತದೆ. ಕೇವಲ ಒಬ್ಬ ಕೈದಿಯಾಗಿ ಅಕ್ಬರ್ನ ಸಾಮ್ರಾಜ್ಯಕ್ಕೆ ಬಂದ ನೂರಜಹಾನ್ ಮೊಘಲ್ ಸಾಮ್ರಾಜ್ಯವನ್ನು ತನ್ನ ಕಣ್ಣ ಇಶಾರೆಯಲ್ಲಿಯೇ ಆಳಿ ಹೋದ ಬಲು ಅಪರೂಪದ ಮಹಾರಾಣಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ