/newsfirstlive-kannada/media/post_attachments/wp-content/uploads/2024/12/REVATHI-DIED.jpg)
ಪುಷ್ಪಾ 2 ಸಿನಿಮಾ ನೋಡಲು ಹೋದವರು ಒಟ್ಟು 3 ಜನ ಮೃತಪಟ್ಟ ಸುದ್ದಿ ಕಳೆದ ಒಂದು ದಿನದಿಂದ ಭಾರೀ ಸುದ್ದಿಯಾಗುತ್ತಿದೆ. ಈ ಮೂವರಲ್ಲಿ ಹೈದ್ರಾಬಾದ್ ಸಂಧ್ಯಾ ಥಿಯೇಟರ್​ನಲ್ಲಿ ಅಭಿಮಾನಿಗಳ ಕಾಲ್ತುಳಿತಕ್ಕೆ ಸಿಕ್ಕು ಅಸುನೀಗಿದ 32 ವರ್ಷದ ಯುವತಿ ರೇವತಿ ಕೂಡ ಒಬ್ಬರು. ರೇವತಿ ಈಗ ತನ್ನ ಪತಿ 9 ವರ್ಷದ ಮಗ ಹಾಗೂ ಮಗಳನ್ನು ಬಿಟ್ಟು ತಮ್ಮ ಜೀವನದ ಸಿನಿಮಾವನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದಾರೆ. ಕಾಲ್ತುಳಿತಕ್ಕೆ ಸಿಕ್ಕು, ಉಸಿರುಗಟ್ಟಿ ಮೃತಪಟ್ಟ ರೇವತಿಯ ಕುಟುಂಬದಲ್ಲಿ ಇದು ಮೊದಲ ದುರಂತವೇನಲ್ಲ. ಇದಕ್ಕಿಂತ ದೊಡ್ಡ ದುರಂತಗಳನ್ನು ಈ ಕುಟುಂಬ ನೋಡಿದೆ. ಅವಳು ತನ್ನ ಲೀವರ್​ನ್ನೆ ನನಗೆ ನೀಡಿ ಅರ್ಧ ದಾರಿಯಲ್ಲಿ ಬಿಟ್ಟು ಹೋದಳು ಎಂದು ರೇವತಿ ಪತಿ ಕಣ್ಣೀರಿಡುತ್ತಾರೆ. ಪತಿಗಾಗಿ ತನ್ನ ಲೀವರ್​ನ್ನೇ ನೀಡಿದ ತ್ಯಾಗಮಯಿ ಪತ್ನಿ ರೇವತಿ
ಹೌದು, ಇಂತಹದೊಂದು ಘಟನೆ ಅವರ ಈ ಕುಟುಂಬದ ಜೀವನದಲ್ಲಿ ನಡೆದಿದೆ. ರೇವತಿ 2023ರಲ್ಲಿ ತನ್ನ ಪತಿಗೆ ಲೀವರ್ ಸಮಸ್ಯೆಯಾದಾಗ ತಮ್ಮ ಲೀವರ್ ದಾನ ನೀಡಿ ಯಮನನ್ನು ಸೋಲಿಸಿದ್ದರು. ಆದ್ರೆ ಈಗ ತಮ್ಮನ್ನು ಹಾಗೂ ತಮ್ಮ ಮಗನನ್ನು ಉಳಿಸಿಕೊಳ್ಳುವ ಯುದ್ಧದಲ್ಲಿ ಮಗನನ್ನು ಉಳಿಸುವಲ್ಲಿ ಗೆದ್ದ ರೇವತಿ ತಮ್ಮನ್ನು ಉಳಿಸಿಕೊಳ್ಳುವಲ್ಲಿ ಯಮನೊಂದಿಗೆ ಸೋತಿದ್ದಾರೆ. ಈ ಮಾತನ್ನು ಖುದ್ದು ರೇವತಿ ಪತಿಯೇ ಹೇಳಿದ್ದಾರೆ.
ಇದನ್ನೂ ಓದಿ:ಪುಷ್ಪ ಸಿನಿಮಾಗೂ ತಿರುಪತಿಯ ಗಂಗಮ್ಮ ದೇವರಿಗೂ ಇದೆ ಲಿಂಕ್.. ಚಿತ್ರದ ಹಿಂದಿನ ಸ್ವಾರಸ್ಯಕರ ಕಥೆ..!
ಶ್ರೀತೇಜ ಹಾಗೂ ಆತನ ತಂಗಿ ಸಾನ್ವಿಯನ್ನು ಕರೆದುಕೊಂಡು ಇಬ್ಬರು ಡಿಸೆಂಬರ್ 5ರಂದು ಪುಷ್ಪಾ 2 ಸಿನಿಮಾ ನೋಡಲು ಹೈದ್ರಾಬಾದ್​ನ ಸಂಧ್ಯಾ ಥಿಯೇಟರ್​ಗೆ ಹೋಗಿದ್ದರು. ರೇವತಿ ಶ್ರೀಜಿತ್ ಜೊತೆ ಇದ್ದರು. ಇದೇ ವೇಳೆ ಪ್ರಿಮಿಯರ್ ಶೋ ನೋಡಲು ಅಲ್ಲು ಅರ್ಜುನ್ ಅಲ್ಲಿಗೆ ಬಂದಾಗ ಕೂಡಲೇ ನೂಕು ನುಗ್ಗಲು ಉಂಟಾಗುತ್ತದೆ. ಈ ನೂಕು ನುಗ್ಗಲಲ್ಲಿ ಶ್ರೀತೇಜ ಹಾಗೂ ರೇವತಿ ಇಬ್ಬರು ನೆಲಕ್ಕೆ ಬಿದ್ದು ಅಭಿಮಾನಿಗಳ ಸಾವಿರಾರು ಕಾಲುಗಳನ್ನು ಅವರನ್ನು ತುಳಿದುಕೊಂಡೇ ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬೀಳುತ್ತಾರೆ.
ಇದನ್ನೂ ಓದಿ:ಅಭಿಮಾನಿಗಳ ಅತಿರೇಕದ ಪರಮಾವಧಿ; ಪುಷ್ಪ-2 ನೋಡಲು ಹೋಗಿದ್ದ ಮೂವರು ಜೀವವನ್ನೇ ಬಿಟ್ಟರು!
ಅವರ ಪತಿ ಭಾಸ್ಕರ್,ಈ ನೂಕುನುಗ್ಗಲು ಕಂಡು ಸಾನ್ವಿ ಅಳಲು ಶುರು ಮಾಡಿದಳು ಅಂತ ಆ ನೂಕುನುಗ್ಗಲಿನಿಂದ ದೂರ ಉಳಿಯುತ್ತಾರೆ. ನಾನು ನನ್ನ ಮಗಳನ್ನು ಥಿಯೇಟರ್ ಪಕ್ಕದಲ್ಲಿಯೇ ಇರುವ ನಮ್ಮ ಸಂಬಂಧಿಕರ ಮನೆಗೆ ಬಿಟ್ಟು ಬರಲು ನಿರ್ಧರಿಸಿದೆ. ಆವಾಗ ನಾನು ನನ್ನ ಪತ್ನಿ ಹಾಗೂ ಮಗ ಇದ್ದ ಕಡೆ ಬಂದಿದೆ. ನಾನು ಅವಳನ್ನು ಕೂಗಿದಾಗಲೇ ಗೊತ್ತಾಗಿದ್ದು ಅವಳು ಥಿಯೇಟರ್ ಒಳಗೆ ಇದ್ದಾಳೆ ಎಂದು ಅದೇ ಕೊನೆಯದಾಗಿ ಅವಳ ಮಾತನ್ನು ನಾನು ಕೇಳಿದ್ದು. ಮಗನನ್ನು ರಕ್ಷಿಸಲು ಹೋಗಿ ಆಕೆ ತೀವ್ರವಾಗಿ ಕಾಲ್ತುಳಿತಕ್ಕೆ ಒಳಗಾಗಿದ್ದಾಳೆ ಅಂತ ನನಗೆ ಅನಿಸುತ್ತದೆ ಎಂದು ಆಕೆಯ ಪತಿ ಭಾಸ್ಕರ್ ಹೇಳಿದ್ದಾರೆ.
ನನಗೆ ಸುಮಾರು 2.30ರ ವರೆಗೂ ಆಕೆಗೆ ಹೇಗಿದ್ದಾಳೆ ಏನಾಗಿದ್ದಾಳೆ ಎಂಬುದೇ ಗೊತ್ತಿರಲಿಲ್ಲ. ಕೆಲವು ಪೊಲೀಸರು ಬಂದು ಮಾಹಿತಿಯನ್ನು ನೀಡಿದಾಗ ನನಗೆ ನನ್ನ ಪ್ರಪಂಚವೇ ಒಡೆದು ಹೋದ ಹಾಗೆ ಆಯ್ತು. ವರ್ಷದ ಹಿಂದೆ ಅವಳು ತನ್ನ ಲೀವರ್​ನ್ನು ನನಗೆ ನೀಡಿ ನನ್ನನ್ನು ಬದುಕಿಸಿದ್ದಳು. ಈಗ ಅರ್ಧ ದಾರಿಯಲ್ಲಿ ನನ್ನನ್ನು ಬಿಟ್ಟು ಹೋಗಿದ್ದಾಳೆ. ಇದನ್ನು ಕಲ್ಪಿಸಿಕೊಳ್ಳಲು ಕೂಡ ನನಗೆ ಆಗುತ್ತಿಲ್ಲ ಎಂದು ಪತಿ ಭಾಸ್ಕರ್ ಕಣ್ಣೀರು ಇಡುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ