/newsfirstlive-kannada/media/post_attachments/wp-content/uploads/2024/10/Irom-Charu-Sharmila.jpg)
ರಾಷ್ಟ್ರಪಿತ ಮಹಾತ್ಮ ಗಾಂಧಿಯವರು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಉಪವಾಸ ಸತ್ಯಾಗ್ರಹವನ್ನು ಮಾಡಿರುವ ಸಂಗತಿ ಗೊತ್ತೇ ಇದೆ. ಸ್ವಾತಂತ್ರ್ಯ ಚಳುವಳಿ ಕಾಲದಲ್ಲಿ ಸುಮಾರು 18 ಉಪವಾಸಗಳನ್ನು ಮಾಡಿದ್ದರು. 21 ದಿನಗಳ ಕಾಲ ಉಪವಾಸ ಕೈಗೊಂಡಿದ್ದರು. ಆ ಮೂಲಕ ಅಹಿಂಸೆ ಮತ್ತು ಸತ್ಯಾಗ್ರಹವನ್ನು ಸಾರಿ ಹೇಳಿದ್ದರು. ಆದರೆ ಅವರಿಗಿಂತ ದೀರ್ಘ ಉಪವಾಸ ಸತ್ಯಾಗ್ರಹ ಮಾಡಿ ವಿಶ್ವದಾಖಲೆಯನ್ನೇ ಬರೆದ ಮಹಿಳೆ ಭಾರತದಲ್ಲಿದ್ದಾರೆ. ಅವರು ಮತ್ತ್ಯಾರು ಅಲ್ಲ ಇರೋಮ್ ಚಾನು ಶರ್ಮಿಳಾ.
ಇರೋಮ್ ಚಾನು ಶರ್ಮಿಳಾ. ಇವರನ್ನು ‘ಮಣಿಪುರದ ಐರನ್ ಲೇಡಿ’, ‘ಮೆಂಗೌಬಿ’ ಎಂದು ಕರೆಯಲಾಗುತ್ತದೆ. ಅಂದಹಾಗೆಯೇ ಇವರು ಮಣಿಪುರ ರಾಜ್ಯದ ನಾಗರಿಕ ಹಕ್ಕುಗಳ ಕಾರ್ಯಕರ್ತೆ, ಮತ್ತು ಕವಿಯಾಗಿ ಗುರುತಿಸಿಕೊಂಡಿದ್ದಾರೆ.
ಹೋರಾಟದ ಹಾದಿ
52 ವರ್ಷದ ಇರೋಮ್ 14 ಮಾರ್ಚ್ 1972ರಲ್ಲಿ ಜನಿಸಿದರು. ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡಿದ ನಂದಾ ಮತ್ತು ಸಖಿ ದಂಪತಿಗೆ ಜನಿಸಿದ 9ನೇ ಮಗಳಾಗಿದ್ದಾರೆ. 1991ರಲ್ಲಿ ಪೌಢಶಾಲಾ ಅಧ್ಯಯನ ಪೂರ್ಣಗೊಳಿಸಿದ ಅವರು, ಬಳಿಕ ಟೈಪಿಂಗ್, ಟೈಲರಿಂಗ್, ಪತ್ರಿಕೋದ್ಯಮ ಕೋರ್ಸ್ಗಳನ್ನು ಮಾಡಿದರು. ಮಾನವ ಹಕ್ಕುಗಳ ಆಸಕ್ತರಾಗಿದ್ದ ಈಕೆ ತನ್ನ ಜೀವನದಲ್ಲಿ ಹೋರಾಟದ ಹಾದಿಗೆ ಇಳಿದರು.
16 ವರ್ಷಗಳ ಕಾಲ ಉಪವಾಸ
ಇರೋಮ್ ಚಾನು ಶರ್ಮಿಳಾ 16 ವರ್ಷಗಳ ಕಾಲ ಉಪವಾಸ ಮಾಡಿದ್ದಾರೆ. ಅಚ್ಚರಿ ಸಂಗತಿ ಎಂದರೆ ಮೂಗಿನಲ್ಲೇ ಆಹಾರ ಸೇವಿಸಿ ದೀರ್ಘ ಉಪವಾಸ ಮಾಡಿದ ಮಹಿಳೆ ಎಂದು ಗುರುತಿಸಿಕೊಂಡಿದ್ದಾರೆ. ಅಂದಹಾಗೆಯೇ ಇವರು 2000ನೇ ಇಸವಿ ನವೆಂಬರ್ ತಿಂಗಳಿನಲ್ಲಿ ಸಶಸ್ತ್ರ ಪಡೆಗಳ ಕಾಯಿದೆ ಮತ್ತು 1958ರ ನಿರ್ಮೂಲನೆಗಾಗಿ ಉಪವಾಸ ಪ್ರಾರಂಭಿಸಿದರು. ಬಳಿಕ 2016ರಲ್ಲಿ ತಮ್ಮ ಉಪವಾಸವನ್ನು ಕೊನೆಗೊಳಿಸಿದರು.
ಮೊದಲೇ ಹೇಳಿದಂತೆ ಇರೋಮ್ ಮಾಹಿತಿ ಕಾರ್ಯಗಾರದಲ್ಲಿ ಭಾಗವಹಿಸುತ್ತಿದ್ದರು. ಮಾನವ ಹಕ್ಕುಗಳ ಕುರಿತಾದ ಅಂತರರಾಷ್ಟ್ರೀಯ ಪ್ರೋಟೋಕಾಲ್ ಮತ್ತು ಸಮಾವೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಹೀಗೆ ಕಾರ್ಯಗಾರದಲ್ಲಿ ಭಾಗವಹಿಸುತ್ತಿದ್ದ ಇರೋಮ್ ಭಾರತದ ಬದ್ಧತೆ ಮತ್ತು ಮಣಿಪುರದ ಮಾನವ ಹಕ್ಕುಗಳ ದುರುಪಯೋಗಗಳನ್ನು ದಾಖಲಿಸಲು ಮುಂದಾದರು. ಹೀಗೆ ಹೋರಾಟದ ಹಾದಿಯಲ್ಲಿ ಮುಂದುವರೆದ ಅವರು ಸಶತ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ, ನಾಗರಿಕ ವಿಚಾರಣೆಗಾಗಿ ಹೆಚ್ಆರ್ಎ ಪೂರ್ವ ಸಿದ್ಧತೆಯ ಸಮಿತಿಯ ಭಾಗವಾದರು. ನಂತರ ಬಾಂಬೆ ಹೈಕೋರ್ಟ್ನ ಮಾಜಿ ನ್ಯಾಯಾಧೀಶ ಹೊಸಬೆಟ್ ಸುರೇಶ್ ಅವರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಯಿತು.
ಇರೋಮ್ ಚಾನು ಶರ್ಮಿಳಾ ಅಂದಿನ ಸಮಯದಲ್ಲಿ ಸಾಮೂಹಿಕ ಅತ್ಯಾಚಾರದಿಂದ ಬದುಕುಳಿದವರು ಮತ್ತು ಭಾರತೀಯ ಸಶಸ್ತ್ರ ಮತ್ತು ಅರೆಸೇನಾ ಪಡೆಗಳಿಂದ ಹತನಾದ ಜನರು ಮತ್ತು ಅವರ ಮಕ್ಕಳೊಂದಿಗೆ ಮಾತನಾಡಿದರು. ಬಳಿಕ ವಿಶೇಷ ಅಧಿಕಾರ ಕಾಯಿದೆ ಮೂಲಕ ಕಾನೂನು ಕ್ರಮದ ವಿರುದ್ಧ ರಕ್ಷಣೆಗಾಗಿ ಹೋರಾಡಿದರು.
2000ನೇ ಇಸವಿಯಲ್ಲಿ ಉಪವಾಸ ಪ್ರಾರಂಭ
ಮಾಲೋಮ್ ಹತ್ಯಾಕಾಂಡವು ಇರೋಮ್ ಚಾನು ಶರ್ಮಿಳಾ ಅವರನ್ನು ಉಪವಾಸ ಸತ್ಯಾಗ್ರಹದತ್ತ ಕೊಂಡೊಯ್ಯಿತು. 28 ವರ್ಷದಲ್ಲಿ ಪ್ರತಿಭಟನೆ ಹಾದಿಗೆ ಇಳಿದರು. ನವೆಂಬರ್ 5, 2000ರಲ್ಲಿ ಮಲೋಮ್ನಲ್ಲಿ ಉಪವಾಸ ಪ್ರಾರಂಭಿಸಿದರು. ಸಶತ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಗಾಗಿ ಆಹಾರ ತಿನ್ನುವುದಿಲ್ಲ, ಕುಡಿಯುವುದಿಲ್ಲ, ಕೂದಲು ಬಾಚುವುದಿಲ್ಲ, ಕನ್ನಡಿ ನೋಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಆತ್ಮಹತ್ಯೆ ಯತ್ನ ಆರೋಪ
ಉಪವಾಸ ಸತ್ಯಾಗ್ರಹ ಪ್ರಾರಂಭಿಸಿ ಮೂರು ದಿನಗಳ ಬಳಿಕ ಪೊಲೀಸರು ಇರೋಮ್ ಚಾನು ಶರ್ಮಿಳಾ ಅವರನ್ನು ಬಂಧಿಸಿದರು. ಅವರ ಮೇಲೆ ಆತ್ಮಹತ್ಯೆಯ ಯತ್ನ ಆರೋಪವನ್ನು ಹೊರಿಸಲಾಯಿತು. ಇದೇ ವಿಚಾರವಾಗಿ ನ್ಯಾಯಾಂಗ ಬಂಧನಕ್ಕೂ ಒಳಗಾದರು.
2011ರಲ್ಲಿ ಅಣ್ಣಾ ಹಜಾರೆಯನ್ನು ಮಣಿಪುರಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೂ ಮುಂದಾದರು. ಬಳಿಕ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಇರೋಮ್ ಚಾನು ಶರ್ಮಿಳಾ ಅವರಿಗೆ ಬೆಂಬಲ ಸೂಚಿಸಿತು. ಮಮತಾ ಬ್ಯಾನರ್ಜಿಗೆ ಅವರ ಬಳಿಕ ಸಶತ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ ರದ್ದುಗೊಳಿಸುವಂತೆ ಒತ್ತಾಯಿಸಲಾಯಿತು. ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಕೂಡ ಇದೇ ವಿಚಾರವಾಗಿ ಭೇಟಿ ಮಾಡಿದರು. ಈ ವೇಳೆಯೂ 24 ಗಂಟೆಗಳ ಉಪವಾಸ ಮಾಡಿದ್ದರು.
ಮತ್ತೆ ಬಂಧನ
2016ರಲ್ಲಿ ಇಂಫಾಲ್ನ ಸ್ಥಳೀಯ ನ್ಯಾಯಾಲಯ ಆಕೆಯ ವಿರುದ್ಧ ಇದ್ದ ಆರೋಪವನ್ನು ತಿರಸ್ಕರಿಸಿತು. ಬಳಿಕ ಬಿಡುಗಡೆಗೊಂಡ ಶರ್ಮಿಳಾರವರು ಸಶತ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಗಾಗಿ ರದ್ದಾಗುವವರೆಗೂ ಮನೆಗೆ ಹೋಗಲ್ಲ. ತಾಯಿಯನ್ನು ಭೇಟಿಯಾಗಲ್ಲ ಎಂದು ಪ್ರತಿಜ್ಞೆ ಮಾಡಿದರು. ಮತ್ತೆ ಉಪವಾಸ ಮುಂದುವರೆಸಿದರು. ಮತ್ತೆ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ವಿಚಾರವಾಗಿ ಪೊಲೀಸರು ಬಂಧಿಸಿದರು.
ಕೊನೆಗೆ ಆಗಸ್ಟ್ 9, 2017ರಲ್ಲಿ ಉಪವಾಸವನ್ನು ಕೊನೆಗೊಳಿಸುವುದಾಗಿ ಘೋಷಿಸಿದರು. ಬಳಿಕ ಮಣಿಪುರದಲ್ಲಿ ಮುಂದಿನ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದರು. ಸಶತ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು ತೆಗೆದು ಹಾಕಲು ರಾಜಕೀಯ ಸೇರುತ್ತೇನೆ ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ