ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!

author-image
Veena Gangani
Updated On
‘ಶೆಫಾಲಿ ದಿಢೀರ್​ ಸಾವಾಗುತ್ತದೆ’.. ಅಂದೇ ಭವಿಷ್ಯ ನುಡಿದಿದ್ದ ಯೂಟ್ಯೂಬರ್! VIDEO
Advertisment
  • ಬದುಕಿನ ಸಿನಿಮಾ ಮುಗಿಸಿದ ಹುಡುಗರ ‘ಪಂಕಜಾ’
  • ಪಡ್ಡೆಗಳ ನಿದ್ದೆ ಕದ್ದ ಬೆಡಗಿ 42ರ ಹರೆಯಕ್ಕೆ ವಿದಾಯ!
  • ತಡರಾತ್ರಿ ಬಾಲಿವುಡ್​ ನಟಿ ಶೆಫಾಲಿ ಜರಿವಾಲಾ ನಿಧನ

ಬಾಲಿವುಡ್​ಗೆ ಇವತ್ತು ಮತ್ತೊಂದು ಬರಸಿಡಿಲು ಬಂದು ಬಡಿದಿದೆ.  ಸಿದ್ಧಾಥ್​ ಶುಕ್ಲಾ ಬೆನ್ನಲ್ಲೇ ಇವತ್ತು ನಟಿಯೊಬ್ಬರು ಕಾರ್ಡಿಯಾಕ್​ ಅರೆಸ್ಟ್​ಗೆ ಬಲಿಯಾಗಿದ್ದಾರೆ. ಕಾಂಟಾ ಲಗಾ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್​ಫ್ರೆಂಡ್.. ಬಿಗ್​ಬಾಸ್​ ವಿನ್ನರ್​ ಕೂಡ​ ಈ ಹಿಂದೆ ಹೃದಯಾಘಾತದಿಂದ ನಿಧನ!

publive-image

‘ಕಾಂಟಾ ಲಗಾ’ ಅಂತ 2002ರಲ್ಲಿ ಮೈಬಳುಕಿಸಿದ್ದ ಈ ಬಳುಕೋ ಬಳ್ಳಿ ಪಡ್ಡೆ ಹುಡುಗರ ನಿದ್ದೆಗೆಡೆಸಿದ್ಲು. ಬಳಿಕ ಬೋರ್ಡ್​ ಇರದ ಬಸ್​ ಹತ್ತಿ ಕನ್ನಡಕ್ಕೆ ಬಂದಿದ್ದ ಈ ಪಂಕಜಾ ಇಂದು ಯಾರಿಗೂ ಹೇಳದೆಯೇ ಹೃದಯ ಬಡಿತ ನಿಲ್ಲಿಸಿಬಿಟ್ಟಿದ್ದಾಳೆ. ಕಾಂಟಾ ಲಗಾ, ಪಂಕಜಾ ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಬಾಲಿವುಡ್​ ನಟಿ ಶೆಫಾಲಿ ಜರಿವಾಲಾ ಹೃದಯ ಸ್ತಂಭನಕ್ಕೆ ಬಲಿಯಾಗಿದ್ದಾರೆ. 42ನೇ ವಯಸ್ಸಿನಲ್ಲೇ ಶೆಫಾಲಿ ಕಾರ್ಡಿಯಾಕ್​ ಅರೆಸ್ಟ್​ಗೆ ಕೊನೆಯುಸಿರೆಳೆದಿದ್ದಾರೆ. ನಿನ್ನೆ ರಾತ್ರಿ ಶೆಫಾಲಿ ಜರಿವಾಲಾಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಕೂಡಲೇ ಪತಿ, ನಟ ಪರಾಗ್ ತ್ಯಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅದ್ರೆ ಆಸ್ಪತ್ರೆ ತಲುಪುವಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದರು. ಬ್ರಾಟ್ ಡೆಡ್ ಅಂತ ಆಸ್ಪತ್ರೆಯ ವೈದ್ಯರು ಘೋಷಣೆ ಮಾಡಿದ್ದರು.

publive-image

ಗುಜರಾತ್‌ನ ಅಹಮದಾಬಾದ್‌ನಲ್ಲಿ 15 ಡಿಸೆಂಬರ್ 1982 ರಂದು ನಟಿ ಶೆಫಾಲಿ ಜರಿವಾಲಾ ಜನನವಾಗಿತ್ತು. 1964 ರ ‘ಸಂಜೋತಾ’ ಚಿತ್ರದ ಪ್ರಸಿದ್ಧ ಹಾಡಿನ ಮರು ಚಿತ್ರೀಕರಣದಲ್ಲಿ ಶೆಫಾಲಿ ನಟಿಸಿದ್ದಳು. 2002ರಲ್ಲಿ ‘ಕಾಂಟಾ ಲಗಾ’ ಹಾಡಿನಿಂದಲೇ ಶೆಫಾಲಿ ಮನೆಮಾತಾಗಿದ್ಲು. ರಾತ್ರೋರಾತ್ರಿ ‘ಕಾಂಟಾ ಲಗಾ’ ಸಾಂಗ್​ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. 2014 ರಲ್ಲಿ ಸಿರಿಯಲ್​ ನಟ ಪ್ರಾಗ್ ತ್ಯಾಗಿ ಜೊತೆ ಜರಿವಾಲಾ ವಿವಾಹವಾಗಿತ್ತು. ಕನ್ನಡದ ‘ಹುಡುಗರು’ ಚಿತ್ರದ ಪಂಕಜ ಸಾಂಗ್‌ನಲ್ಲಿ ನಟಿ ಹೆಜ್ಜೆ ಹಾಕಿದ್ರು. ಬಳಿಕ ಹಿಂದಿ ಬಿಗ್​ಬಾಸ್ 13ರಲ್ಲಿಯೂ ಜರಿವಾಲಾ ಕಾಣಿಸಿಕೊಂಡಿದ್ದರು.

publive-image

ನಟಿ ಶೆಫಾಲಿ ಸಾವಿನ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿದ್ದು, ಶೆಫಾಲಿ ಜರಿವಾಲಾ ಪತಿಯನ್ನ ವಿಚಾರಣೆಗೊಳಪಡಿಸಿದ್ದಾರೆ. ಶೆಫಾಲಿ ವೈಯಕ್ತಿಕ ಜೀವನದ ಬಗ್ಗೆಯೂ ಹಲವು ಮಾಹಿತಿ ಕಲೆ ಹಾಕಿದ್ದಾರೆ. ನಟಿ ಶೆಫಾಲಿ ಜರಿವಾಲಾ ಸಾವಿಗೆ ಌಂಟಿ ಏಜಿಂಗ್ ಟ್ರೀಟ್ಮೆಂಟ್ ಕಾರಣವಾಯ್ತಾ ಅನ್ನೋ ಶಂಕೆ ಕೂಡ ವ್ಯಕ್ತವಾಗಿತ್ತು. ಆದ್ರೆ, ಌಂಟಿ ಏಜಿಂಗ್ ಚಿಕಿತ್ಸೆ, ಹೃದಯ ಸ್ತಂಭನಕ್ಕೆ ಸಂಬಂಧವಿಲ್ಲ ಎಂದು ಜರಿವಾಲಾಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಸ್ಪಷ್ಟನೆ ನೀಡಿದ್ದಾರೆ.

publive-image

ದುರಾದೃಷ್ಟ ವಿಚಾರ ಏನೆಂದರೆ ಶೆಫಾಲಿ ಮಾಜಿ ಪ್ರಿಯಕರ ನಟ, ಮತ್ತು ಬಿಗ್​ಬಾಸ್​ ವಿನ್ನರ್​ ಸಿದ್ಧಾರ್ಥ್​ ಶುಕ್ಲಾ ಕೂಡ 40ನೇ ವಯಸ್ಸಿಗೆ ಹೃದಯಾಘಾತಕ್ಕೆ ಬಲಿಯಾಗಿದ್ರು. ಹುಡುಗರು ಸಿನಿಮಾದಲ್ಲಿ ಪಂಕಜಾ ಸಾಂಗ್​​ಗೆ ನಟಿ ಜೊತೆ ಹೆಜ್ಜೆ ಹಾಕಿದ್ದ ನಟ ಪುನೀತ್​ ರಾಜ್​ಕುಮಾರ್​ ಕೂಡ ಹಾರ್ಟ್ ಅಟ್ಯಾಕ್​ಗೆ ಕೊನೆಯುಸಿರೆಳೆದಿದ್ರು. ನಿನ್ನೆ ಶೆಫಾಲಿ ಕೂಡ ಕಾರ್ಡಿಯಾಕ್​ ಅರೆಸ್ಟ್​ಗೆ ಕಣ್ಮುಚ್ಚಿದ್ದು, ದುರಂತವೇ ಸರಿ. ಪಡ್ಡೆ ಹುಡುಗರ ನಿದ್ದೆ ಕದ್ದಿದ್ದ ಕಾಂಟಾ ಲಾಗಾ ಬೆಡಗಿ, ಕನ್ನಡಿಗರ ಪಂಕಜಾ 42ರ ಹರೆಯಕ್ಕೆ ಬದುಕಿನ ಸಿನಿಮಾಗೆ ವಿದಾಯ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment