ಶೆಫಾಲಿ ಜರಿವಾಲಾ ಮಾಜಿ ಬಾಯ್​ಫ್ರೆಂಡ್.. ಬಿಗ್​ಬಾಸ್​ ವಿನ್ನರ್​ ಕೂಡ​ ಈ ಹಿಂದೆ ಹೃದಯಾಘಾತದಿಂದ ನಿಧನ!

author-image
Bheemappa
Updated On
ಶೆಫಾಲಿ ಜೀವಬಿಟ್ಟಿದ್ದು ಹೃದಯಾಘಾತದಿಂದ ಅಲ್ವಾ? ನಟಿಯ ಸಾವಿನ ಹಿಂದೆ ಹಲವು ಅನುಮಾನ..!
Advertisment
  • ಬಾಯ್​ಫ್ರೆಂಡ್​ ಬಿಗ್​ಬಾಸ್​​ನಲ್ಲಿ ಮೀಟ್ ಮಾಡಿದ್ದ ಶೆಫಾಲಿ
  • ಶೆಫಾಲಿ ಕೊನೆ ಪೋಸ್ಟ್​ ಕೂಡ ಬಾಯ್​ಫ್ರೆಂಡ್​​ದ್ದು ಆಗಿತ್ತು
  • ಬಿಗ್​ಬಾಸ್​ಗೆ ವೈಲ್ಡ್​ಕಾರ್ಡ್​ ಆಗಿ ಎಂಟ್ರಿ ಕೊಟ್ಟಿದ್ದ ಶೆಫಾಲಿ

ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್​ ಶೆಫಾಲಿ ಜರಿವಾಲಾ ಅವರು ತಡರಾತ್ರಿ ಹೃದಯ ಸ್ತಂಭನ (Cardiac Arrest)ದಿಂದ ಕೊನೆಯುಸಿರೆಳೆದ್ದಾರೆ. ಕೇವಲ 42ನೇ ವಯಸ್ಸಿನಲ್ಲೇ ನಟಿ ಜೀವನ ಮುಗಿಸಿರುವುದು ಬಾಲಿವುಡ್​ ಮಂದಿಗೆ ಬಿಗ್ ಶಾಕ್​ ಕೊಟ್ಟಿದೆ. ಅಲ್ಲದೇ ಈ ಹಿಂದೆ ಶೆಫಾಲಿಯ ಮಾಜಿ ಗೆಳೆಯ ಕೂಡ ಕೇವಲ 40 ವರ್ಷಕ್ಕೆ ಕಾರ್ಡಿಕ್ ಅರೆಸ್ಟ್​ನಿಂದಲೇ ನಿಧನ ಹೊಂದಿದ್ದರು.

publive-image

ಕನ್ನಡದಲ್ಲಿ ಹುಡುಗರು ಸಿನಿಮಾದಲ್ಲಿನ ಪಂಕಜಾ ಹಾಡಿಗೆ ಹೆಜ್ಜೆ ಹಾಕಿದ್ದ ಶೆಫಾಲಿ ಜರಿವಾಲಾ 2019ರಲ್ಲಿ ಹಿಂದಿಯ ಬಿಗ್​​ಬಾಸ್​ ಸೀಸನ್​ 13ರಲ್ಲಿ ವೈರ್ಲ್ಡ್​ಕಾರ್ಡ್​ ಎಂಟ್ರಿ ಪಡೆದಿದ್ದರು. ಈ ಸೀಸನ್​​ನಲ್ಲಿ ತನ್ನ ಬಹುದಿನದ ಗೆಳೆಯ ಸಿದ್ಧಾರ್ಥ್ ಶುಕ್ಲಾರನ್ನು ಭೇಟಿ ಮಾಡಿದ್ದರು. 15 ವರ್ಷಗಳ ಹಿಂದೆ ಈ ಇಬ್ಬರು ಡೇಟಿಂಗ್ ಮಾಡಿದ್ದರು. ಬಿಗ್​​ಬಾಸ್​ ಮನೆಯಲ್ಲಿ ನಡೆಯುವ ಟಾಸ್ಕ್​ಗಳಲ್ಲಿ ಇಬ್ಬರು ಆಡಿದ್ದರು. ಕೊನೆಯದಾಗಿ ಬಿಗ್​​ಬಾಸ್​​ನಲ್ಲಿ ಸಿದ್ಧಾರ್ಥ್ ಶುಕ್ಲಾ ಜಯಶಾಲಿಯಾಗಿದ್ದರು.

ಇದಾದ ಮೇಲೆ ಶೆಫಾಲಿ ಬಾಯ್​​ಫ್ರೆಂಡ್​ ಸಿದ್ಧಾರ್ಥ್ ಶುಕ್ಲಾ ತನ್ನ 40ನೇ ವಯಸ್ಸಿನಲ್ಲಿ 2021ರ ಸೆಪ್ಟೆಂಬರ್​ 02 ರಂದು ಮುಂಬೈನ ಕೂಪರ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಈ ವೇಳೆ ಶೆಫಾಲಿ ತೀವ್ರ ದುಃಖ ವ್ಯಕ್ತಪಡಿಸಿದ್ದರು. ನಂತರ ಸಿದ್ಧಾರ್ಥ್ ಶುಕ್ಲಾ ಅವರ ಪುಣ್ಯತಿಥಿ 2024 ಸೆಪ್ಟೆಂಬರ್ 2 ರಂದು ಶೆಫಾಲಿ ತನ್ನ ಎಕ್ಸ್​ ಅಕೌಂಟ್​ನಲ್ಲಿ ಕೊನೆಯದಾಗಿ ಫೋಟೋವೊಂದನ್ನ ಶೇರ್ ಮಾಡಿದ್ದರು.

ಇದನ್ನೂ ಓದಿ: ಬಾಲಿವುಡ್​ ಹೀರೋಯಿನ್.. ಹುಡುಗರು ಸಿನಿಮಾದ ‘ಪಂಕಜಾ’ ಹಾಡಿನ ನಟಿ ಕಾರ್ಡಿಕ್​ ಅರೆಸ್ಟ್​​ನಿಂದ ನಿಧನ

publive-image

ಹಿಂದಿಯ ಬಿಗ್​ ಬಾಸ್​ ಸೀಸನ್​ 13 ರಲ್ಲಿ ಶೆಫಾಲಿ ಹಾಗೂ ಬಾಯ್​​ಫ್ರೆಂಡ್​ ಸಿದ್ಧಾರ್ಥ್ ಶುಕ್ಲಾ ಇಬ್ಬರು ಪರಸ್ಪರ ತಬ್ಬಿಕೊಂಡಿರುವ ಫೋಟೋವನ್ನ ಪೋಸ್ಟ್ ಮಾಡಿ ಶೇರ್ ಮಾಡಿದ್ದರು. ಇಂದು ನಿನ್ನ ಬಗ್ಗೆ ಯೋಚಿಸುತ್ತಿದ್ದೇನೆ ಅಷ್ಟೇ ದೋಸ್ತ್ @sidharth_shukla ಎಂದು ಬರೆದು ಹಾರ್ಟ್​ ಎಮೋಜಿಯನ್ನ ಟ್ಯಾಗ್ ಮಾಡಿದ್ದರು. ಇದೇ ಅವರ ಕೊನೆ ಟ್ವಿಟರ್​ ಪೋಸ್ಟ್​ ಆಗಿತ್ತು. 2024ರ ಸೆಪ್ಟೆಂಬರ್​ 2 ರಿಂದ ಈವರೆಗೂ ಯಾವುದೇ ಪೋಸ್ಟ್​ ಕೂಡ ಅವರು ಶೇರ್ ಮಾಡಿರಲಿಲ್ಲ ಎನ್ನುವುದು ಅಚ್ಚರಿ ಮೂಡಿಸುತ್ತದೆ. ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment