/newsfirstlive-kannada/media/post_attachments/wp-content/uploads/2025/06/Shehnaaz_Gill.jpg)
ದೇಹ ದಪ್ಪಗಿದ್ದರೆ ತೆಳ್ಳಗೆ ಆಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ತೂಕ ಇಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಟ್ಟರು ದೇಹ ಮಾತ್ರ ಇನ್ನು ಹೆಮ್ಮರವಾಗಿ ಬೆಳೆಯುತ್ತಿರುತ್ತದೆ. ಇದರಿಂದ ಮನಸಿಗೆ ಬೇಸರ ಹಾಗೂ ಕೆಲವು ಕಡೆ ಹೋದಲ್ಲಿ ಮುಜುಗುರ ಕೂಡ ಆಗಬಹುದು. ಆದರೆ ನಟಿಯೊಬ್ಬರು ಈ ಎಲ್ಲವನ್ನು ಮೆಟ್ಟಿನಿಂತು ಕೇವಲ 6 ತಿಂಗಳಲ್ಲಿ 55 ಕೆ.ಜಿ ದೇಹದ ಭಾರ ಕಡಿಮೆ ಮಾಡಿಕೊಂಡಿದ್ದಾರೆ.
ನಟಿ, ರೂಪದರ್ಶಿ ಹಾಗೂ ಗಾಯಕಿ ಆಗಿರುವ ಶೆಹನಾಜ್ ಕೌರ್ ಗಿಲ್ ಅವರು ಕೇವಲ 6 ತಿಂಗಳಲ್ಲಿ 55 ಕೆ.ಜಿ ತೂಕ ಇಳಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಫಿಟ್ನೆಸ್ ಬಗ್ಗೆ ಹೆಚ್ಚಿನ ಮಹತ್ವ ವಹಿಸಿದ್ದ ಇವರು ಕೆಲ ಆಹಾರವನ್ನು ನಿಯಮಿತವಾಗಿ ಸೇವನೆ ಮಾಡಿದ್ದರು. ಅಲ್ಲದೇ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ಅರಿಶಿಣ ಮಿಶ್ರಿತ ನೀರು ಕುಡಿದು ದೇಹದ ತೂಕ ಇಳಿಸಿಕೊಂಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತೂಕ ಇಳಿಸಿಕೊಂಡಿರುವ ಕುರಿತು ನಟಿ ಶೆಹ್ನಾಜ್ ಗಿಲ್ ಮಾತನಾಡಿದ್ದಾರೆ. ಕೇವಲ 6 ತಿಂಗಳಲ್ಲಿ 55 ಕೆಜಿ ತೂಕ ಇಳಿಸಿಕೊಂಡ ಬಗ್ಗೆ ಹೇಳಿದ್ದಾರೆ. ಇದಕ್ಕಾಗಿ, ಶೆಹ್ನಾಜ್ ಗಿಲ್ ದೇಸಿ ಪರಿಹಾರಗಳು, ಆರೋಗ್ಯಕರ ಆಹಾರ ಹಾಗೂ ವ್ಯಾಯಾಮದ ಮೊರೆ ಹೋಗಿದ್ದರಂತೆ. ಆಯುರ್ವೇದ ಬಳಕೆ ಇದರ ಜೊತೆ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅರಿಶಿಣ ಮಿಶ್ರಿಣದ ಉಗುರು ಬೆಚ್ಚಗಿನ ನೀರನ್ನು ಕುಡಿಯುತ್ತಿದ್ದರು.
ಬೆಳಗಿನ ಉಪಾಹಾರದಲ್ಲಿ ಪ್ರೋಟೀನ್
ಬೆಳಗಿನ ಉಪಾಹಾರಕ್ಕೆ ಮೊಳಕೆ ಕಾಳುಗಳು ಮತ್ತು ಮೆಂತ್ಯ ಪರಾಠವನ್ನು ಶೆಹ್ನಾಜ್ ಗಿಲ್ ತಿನ್ನುತ್ತಿದ್ದರು. ಉಪ್ಮಾ ಅಥವಾ ಉಪ್ಪಿಟ್ಟು ಇದನ್ನು ತಿನ್ನಬೇಕೆಂದು ಅನಿಸಿದಾಗ ಹೆಚ್ಚು ತರಕಾರಿಗಳಿಂದ ಮಾಡಿ ಬಳಿಕ ಅದನ್ನು ಸೇವನೆ ಮಾಡುತ್ತಿದ್ದರು. ಇದರಿಂದ ದೇಹದ ತೂಕ ಹೆಚ್ಚಿಗೆ ಆಗಲ್ಲ. ಜೊತೆಗೆ ಅಧಿಕ ಪ್ರೋಟೀನ್ ದೇಹಕ್ಕೆ ಸೇರಿದಂತೆ ಆಗುತ್ತದೆ. ಕೆಲವೊಮ್ಮೆ ಬೆಳಗಿನ ತಿಂಡಿಯಲ್ಲಿ ಮೊಸರು ಹಾಗೂ ಗ್ರಾನೋಲಾ (Granola) ಕೂಡ ತೆಗೆದುಕೊಳ್ಳುತ್ತಿದ್ದೆ ಎಂದಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಬಿಗ್ ಶಾಕ್.. ಮಹತ್ವದ ಟೂರ್ನಿಯಲ್ಲಿ ರಿಷಭ್ ಪಂತ್ ಆಡೋದು ಡೌಟ್!
ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ಶೆಹ್ನಾಜ್ ಗಿಲ್ ಈ ಎಲ್ಲ ಆಹಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಎಲ್ಲವೂ ಒಂದೇ ಬಾರಿಗೆ ಅಲ್ಲ. ನಿಯಮಿತವಾಗಿ ಸೇವನೆ ಮಾಡುತ್ತಿದ್ದರು. ದಾಲ್, ಸಲಾಡ್, ಟೊಫು (Tofu), ತರಕಾರಿಗಳು, ತುಪ್ಪದ ರೊಟ್ಟಿ ತಿನ್ನುತ್ತಿದ್ದರು. ಇವು ನಟಿಗೆ ಸಾಕಷ್ಟು ಪೋಷಕಾಂಶಗಳು ಹಾಗೂ ಊಟಕ್ಕೆ ಒಳ್ಳೆಯ ರುಚಿ ನೀಡುತ್ತಿದ್ದವು.
ರಾತ್ರಿ ಊಟದಲ್ಲಿ ಕಿಚಿಡಿ, ಮೊಸರು, ಸೋರೆಕಾಯಿ ಸೂಪ್ ಕುಡಿಯುತ್ತಿದ್ದರು. ಇದರ ಜೊತೆಗೆ ಮಲಗುವ ಮೊದಲು ಒಂದು ಗ್ಲಾಸ್ ಅರಿಶಿಣ ಮಿಶ್ರಿತ ನೀರನ್ನು ಕುಡಿಯುತ್ತಿದ್ದರು. ಈ ಆಹಾರ ಪದ್ಧತಿಯನ್ನು ಪಾಲನೆ ಮಾಡಿ ಸ್ವಾಭಾವಿಕವಾಗಿಯೇ ಕೇವಲ 6 ತಿಂಗಳಲ್ಲಿ 55 ಕೆ.ಜಿ ದೇಹದ ತೂಕವನ್ನು ಕಡಿಮೆ ಮಾಡಿಕೊಂಡು ಈಗ ಸ್ಲಿಮ್ ಆ್ಯಂಡ್ ಸ್ಮಾರ್ಟ್ ಆಗಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ