/newsfirstlive-kannada/media/post_attachments/wp-content/uploads/2024/08/Bangladesh-Sheikh-hassina-and-US.jpg)
ಢಾಕಾ: ಮೀಸಲಾತಿ ಬೆಂಕಿಯಲ್ಲಿ ಬೆಂದಿರುವ ಬಾಂಗ್ಲಾದಲ್ಲಿ ಸದ್ಯ ಮಧ್ಯಂತರ ಸರ್ಕಾರ ರಚನೆಯಾಗಿದೆ. ಹಿಂಸಾತ್ಮಕ ಪ್ರತಿಭಟನೆಯಿಂದ ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತದಲ್ಲಿ ಆಶ್ರಯ ಪಡೆದಿರುವ ಶೇಖ್​ ಹಸೀನಾ ಮೌನ ಮುರಿದಿದ್ದಾರೆ. ಬಾಂಗ್ಲಾದೇಶದಲ್ಲಿ ಅರಾಜಕತೆ ಸೃಷ್ಟಿಯಾಗಲು ಅಮೆರಿಕಾ ಷಡ್ಯಂತ್ರ ಕಾರಣ ಅಂತ ಹಸೀನಾ ಆರೋಪಿಸಿ ಇಡೀ ಘಟನೆಗೆ ಟ್ವಿಸ್ಟ್ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/08/Bangladesh-Sheikh-hassina-2.jpg)
ಪ್ರಧಾನಿ ಸ್ಥಾನದಿಂದ ಕೆಳಗಿಳಿದಿರುವ, ಭಾರತದಲ್ಲಿ ಆಶ್ರಯ ಪಡೆದಿರುವ ಬಾಂಗ್ಲಾ ಮಾಜಿ ಪ್ರಧಾನಿ ಶೇಖ್​ ಹಸೀನಾ, ಅಮೆರಿಕ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ. ಬಾಂಗ್ಲಾದಲ್ಲಿ ಅರಾಜಕತೆ ಸೃಷ್ಟಿಯಾಗಲು ಹಾಗೂ ಪ್ರಧಾನಿ ಸ್ಥಾನದಿಂದ ತಾವು ಕೆಳಗಿಳಿಯಲು ಅಮೆರಿಕಾ ಷಡ್ಯಂತ್ರವೇ ಕಾರಣ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2024/08/St-Martins-Island.jpg)
‘ನಾನು ಅಮೆರಿಕ ಮಾತು ಕೇಳಿದ್ದರೇ ಅಧಿಕಾರಿದಲ್ಲಿರುತ್ತಿದೆ’
ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮೊದಲ ಬಾರಿಗೆ ಎಕನಾಮಿಕ್ ಟೈಮ್ಸ್‌ಗೆ ಪ್ರತಿಕ್ರಿಯಿಸಿರೋ ಶೇಕ್ ಹಸೀನಾ, ನಾನು ಸೇಂಟ್​​ ಮಾರ್ಟಿನ್​ ದ್ವೀಪವನ್ನು ಬಿಟ್ಟುಕೊಟ್ಟಿದ್ದರೆ, ಮತ್ತು ಬಂಗಾಳಕೊಲ್ಲಿಯ ಮೇಲೆ ಅಮೆರಿಕದ ಹಿಡಿತಕ್ಕೆ ಅವಕಾಶ ನೀಡಿದ್ದರೇ ನಾನು ಅಧಿಕಾರದಲ್ಲಿ ಉಳಿಯಬಹುದಿತ್ತು ಅಂತ ಹೇಳಿದ್ದಾರೆ. ಇಷ್ಟೇ ಅಲ್ಲದೇ, ನಾನು ದೇಶದಲ್ಲಿಯೇ ಉಳಿದಿದ್ದರೇ ಮತ್ತಷ್ಟು ಹಿಂಸಾಚಾರ ನಡೆಯುತ್ತಿತ್ತು. ಆದ್ದರಿಂದ ರಾಜೀನಾಮೆ ನೀಡಿದೆ ಎಂದು ಶೇಖ್​​ ಹಸೀನಾ ದೇಶದ ಜನರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಬ್ಬಾ.. ಬಾಂಗ್ಲಾದಲ್ಲಿ ತಿರುಗಿಬಿದ್ದ ಹಿಂದೂಗಳಿಂದ ಅತಿ ದೊಡ್ಡ ದಂಗೆ; ಏನೆಲ್ಲಾ ನೋವು? ಎಷ್ಟೆಲ್ಲಾ ಕ್ರೌರ್ಯ?
ಈ ಹಿಂದೆ ಬಾಂಗ್ಲಾ ಸಂಸತ್‌ನಲ್ಲೂ ಅಮೆರಿಕಾ ಷಡ್ಯಂತ್ರದ ಬಗ್ಗೆ ಶೇಕ್ ಹಸೀನಾ ಪರೋಕ್ಷವಾಗಿ ಮಾತನಾಡಿದ್ದರು. ಬಾಂಗ್ಲಾದ ದಕ್ಷಿಣ ಭಾಗದಲ್ಲಿರುವ ಸೇಂಟ್​​ ಮಾರ್ಟಿನ್​ ದ್ವೀಪದಲ್ಲಿ ಅಮೆರಿಕಾ ಸೇನಾ ನಿರ್ಮಿಸಲು ಈ ದ್ವೀಪವನ್ನ ಕೇಳಿತ್ತೇನ್ನಲಾಗಿದೆ. ಆದ್ರೆ ಶೇಖ್​ ಹಸೀನಾ ದ್ವೀಪವನ್ನು ಅಮರಿಕಾಕ್ಕೆ ನೀಡಲು ಸಮ್ಮತಿಸರಲಿಲ್ಲ, ಇದೇ ಕಾರಣಕ್ಕೆ ತಮ್ಮ ಸರ್ಕಾರದ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಶೇಖ್​ ಹಸೀನಾ ಆರೋಪ ಮಾಡಿದ್ದಾರೆ . ದ್ವೀಪದಲ್ಲಿ ಸೇನಾ ನೆಲೆ ನಿರ್ಮಿಸುವ ಮೂಲಕ ಬಂಗಾಳಕೊಲ್ಲಿಯಲ್ಲಿ ಪಾರುಪತ್ಯಕ್ಕಾಗಿ ಅಮೆರಿಕಾ ಹವಣಿಸಿದೆ ಎನ್ನಲಾಗ್ತಿದ್ದು, ಇದೇ ಕಾರಣಕ್ಕೆ ಶೇಕ್ ಹಸೀನಾ ಅಧಿಕಾರ ಕಳೆದುಕೊಳ್ಳುವಂತಾಯಿತು ಎಂದು ಹೇಳಲಾಗ್ತಿದೆ.
ಐತಿಹಾಸಿಕವಾಗಿ ನೋಡಿದರೆ ಅಮೆರಿಕ ವಿಶ್ವಾದ್ಯಂತ ಹಲವು ದೇಶಗಳಲ್ಲಿ ಹಸ್ತಕ್ಷೇಪ ಮಾಡಿದ ಸಾಕಷ್ಟು ಉದಾಹರಣೆಗಳಿವೆ. ಇದೇ ರೀತಿ ಬಂಗಾಳಕೊಲ್ಲಿಯಲ್ಲೂ ತನ್ನ ಪಾರುಪತ್ಯ ಸಾಧಿಸಲು ಮುಂದಾಗಿತ್ತಾ ಎಂಬ ಅನುಮಾನಕ್ಕೆ ಶೇಖ್​ ಹಸೀನಾ ಹೇಳಿಕೆ ಸಾಕಷ್ಟು ಪುಷ್ಟಿ ನೀಡಿದ್ದು, ತನ್ನ ಸ್ವಾರ್ಥಕ್ಕಾಗಿ ಅಮೆರಿಕ ಬಾಂಗ್ಲಾದಲ್ಲಿ ನಡೆದ ಗಲಭೆಗೆ ಪರೋಕ್ಷವಾಗಿ ಬೆಂಬಲಿಸಿತ್ತಾ ಎಂಬ ಪ್ರಶ್ನೆ ಮೂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us