ಬಾಂಗ್ಲಾದೇಶದಲ್ಲಿ ಮಿತಿ ಮೀರಿದ ಅರಾಜಕತೆ; ಶೇಖ್​ ಹಸೀನಾ ಒಳ ಉಡುಪು ಬಿಡದ ಕಾಮುಕರು

author-image
Gopal Kulkarni
Updated On
ಬಾಂಗ್ಲಾದೇಶದಲ್ಲಿ ಮಿತಿ ಮೀರಿದ ಅರಾಜಕತೆ; ಶೇಖ್​ ಹಸೀನಾ ಒಳ ಉಡುಪು ಬಿಡದ ಕಾಮುಕರು
Advertisment
  • ಬಾಂಗ್ಲಾದೇಶದಲ್ಲಿ ನಿಲ್ಲದ ಲೂಟಿ, ಕಿಡಿಗೇಡಿಗಳ ಹುಚ್ಚಾಟ
  • ಹಸೀನಾ ಶೇಖ್ ಮನೆಯಲ್ಲಿ ಒಳ ಉಡುಪುಗಳನ್ನು ಬಿಟ್ಟಿಲ್ಲ
  • ಸೀರೆ, ಬ್ಲೌಸ್​​, ಒಳ ಉಡುಪುಗಳನ್ನು ಎತ್ಹಾಕಿಕೊಂಡು ಬಂದ ನೀಚರು

ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಮನೆಯನ್ನ ಕಿಡಿಗೇಡಿಗಳು ಗುಡಿಸಿ ಗುಂಡಾಂತರ ಮಾಡಿದ್ದಾರೆ. ಇಡೀ ಪ್ಯಾಲೆಸ್‌ ಅನ್ನು ಲೂಟಿ ಮಾಡಿರೋ ಪುಂಡರು ಹುಚ್ಚಾಟ ಮೆರೆದಿದ್ದಾರೆ. ಸಿಕ್ಕ, ಸಿಕ್ಕದನ್ನು ತಿಂದು ತೇಗಿರೋ ಯುವಕರ ಅಟ್ಟಹಾಸ ಕೇವಲ ಲೂಟಿಗೆ ಮುಗಿದಿಲ್ಲ.

publive-image

ಶೇಖ್‌ ಹಸೀನಾ ವಾಸವಿದ್ದ ಕೋಣೆಗೂ ನುಗ್ಗಿರೋ ಯುವಕರ ದಂಡು ಮನೆಯಲ್ಲಿ ಬಟ್ಟೆಯನ್ನು ಬಿಟ್ಟಿಲ್ಲ, ಡಸ್ಟ್ ​ಬಿನ್​ ಕೂಡ ಬಿಟ್ಟಿಲ್ಲ, ಅಷ್ಟೆ ಏಕೆ, ಪ್ಯಾಲೇಸ್​ನಲ್ಲಿದ್ದ ಹೆಣ್ಣು ಮಕ್ಕಳ ಒಳ ಉಡುಪುಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಅವುಗಳನ್ನು ಪ್ರದರ್ಶಿಸಿ ವಿಕೃತ ಮನಸ್ಸುನ್ನು ತೆರಿದಿಟ್ಟಿದ್ದಾರೆ ಕಾಮುಕರು.

ಇದನ್ನೂ ಓದಿ: VIDEO: ಶೇಖ್ ಹಸೀನಾ ಮನೆಯಲ್ಲಿ ಉಂಡು ತೇಗಿದ ಪುಂಡರು; ಬಾಂಗ್ಲಾದಲ್ಲಿ ಭಯಾನಕ ಲೂಟಿ; ಏನೆಲ್ಲಾ ಆಯ್ತು?

ಬಾಂಗ್ಲಾದೇಶದಲ್ಲಿ ಸದ್ಯ ಅರಾಜಕತೆ ಅನ್ನೋದು ತಾಂಡವಾಡುತ್ತಿದೆ. ಬಾಂಗ್ಲಾ ಸೇನೆ ಮಧ್ಯಂತರ ಸರ್ಕಾರವನ್ನು ನಡೆಸುತ್ತಿದ್ದರು ಕೂಡ ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮತ್ತೊಂದು ಕಡೆ ಮಾಜಿ ಪ್ರಧಾನಿ ಹಸೀನಾ ಸೇಖ್, ಭಾರತದಲ್ಲಿರಬೇಕೋ, ಇಲ್ಲವೇ ಲಂಡನ್​ಗೆ ಹಾರಬೇಕೋ ಅನ್ನುವ ಗೊಂದಲದಲ್ಲಿ ಇನ್ನೂ ಇದ್ದಾರೆ. ಈ ಕಡೆ ಬಾಂಗ್ಲಾದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಾಡಿಯಿಸುತ್ತಲೇ ಇದೆ. ಸದ್ಯ ಪಾರ್ಲಿಮೆಂಟ್, ಮ್ಯೂಸಿಯಂ, ಪ್ರಧಾನಮಂತ್ರಿ ನಿವಾಸ ಪ್ರತಿಭಟನಾಕಾರರ ಗುರಿಗೆ ನಲುಗಿವೆ. ಮುಂದೆ ಎಲ್ಲಿ ಯಾರಿಗೆ ಏನು ಕಾದಿದೆಯೋ ಗೊತ್ತಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment