/newsfirstlive-kannada/media/post_attachments/wp-content/uploads/2025/05/India-Pakistan-War-1.jpg)
ಕದನ ವಿರಾಮ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರತದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿಯನ್ನು ತೋರಿಸಿದೆ. ಕದನ ವಿರಾಮ ಉಲ್ಲಂಘನೆ ಮಾಡಿರುವ ಪಾಕಿಸ್ತಾನ ಜಮ್ಮುವಿನ ಹಲವು ಪ್ರದೇಶಗಳಲ್ಲಿ ದಾಳಿ ನಡೆಸುತ್ತಿದೆ.
ಜಮ್ಮುವಿನ ಬಳಿ ಇರುವ ಅಂತಾರಾಷ್ಟ್ರೀಯ ಗಡಿ ರೇಖೆ (ಎಲ್ಒಸಿ), ಪಲಾನ್ವಾಲ್, ಬಾರ್ಮರ್, ಕಛ್, ಅಖ್ನೂರು, ಶ್ರೀನಗರ, ಉದಂಪುರ್, ಅನಂತ್ನಾಗ್, ಸಾಂಬಾ ಸೇರಿದಂತೆ ವಿವಿಧ ನಗರಗಳಲ್ಲಿ ಪಾಕಿಸ್ತಾನ ದಾಳಿ ಮಾಡುತ್ತಿದೆ. ಈ ಮೂಲಕ ಇಂದು ಸಂಜೆ ಅಮೆರಿಕ ಮಧ್ಯಸ್ಥಿಕೆಯಲ್ಲಿ ಘೋಷಣೆ ಆಗಿದ್ದ ಕದನ ವಿರಾಮವನ್ನು ಉಲ್ಲಂಘನೆ ಮಾಡಿ ಪಾಪಿ ಪಾಕಿಸ್ತಾನ ತನ್ನ ಕಪಿ ಬುದ್ಧಿಯನ್ನು ವಿಶ್ವದ ಮುಂದೆ ಮತ್ತೆ ತೆರೆದು ಇಟ್ಟಂತೆ ಆಗಿದೆ.
ಇದನ್ನೂ ಓದಿ:1 KG ಮಾವಿನ ಹಣ್ಣುಗಳ ಬೆಲೆ 2,50,000 ರೂಪಾಯಿ.. ಇದರ ಒಂದು ಗಿಡದ ಬೆಲೆ ಎಷ್ಟು?
ಕದನ ವಿರಾಮ ಹೇಳಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಜಮ್ಮುವಿನ ಸುಮಾರು 11 ನಗರಗಳ ಮೇಲೆ ಶೆಲ್, ಡ್ರೋಣ್, ಗುಂಡಿನ ದಾಳಿಗೆ ಯತ್ನಿಸಿದೆ. ಇದರಿಂದ ಅಲ್ಲಿನ ಇವಾಸಿಗಳು ಆತಂಕದಲ್ಲಿದ್ದಾರೆ. ಅಖ್ನೂರು ಪ್ರದೇಶವನ್ನು ಬ್ಲ್ಯಾಕ್ಔಟ್ ಎಂದು ಘೋಷಣೆ ಮಾಡಲಾಗಿದೆ. ಪಾಕ್ನ ಡ್ರೋಣ್ ದಾಳಿಗಳನ್ನು ತಡೆದಿರುವ ಭಾರತೀಯ ಸೇನೆ ಎಲ್ಲವನ್ನು ಹೊಡೆದುರುಳಿಸಿದೆ.
ಕತ್ತಲು ಆದರೂ ಜಮ್ಮುವಿನ ಹಲವೆಡೆ ಪಾಕ್‌ನಿಂದ ಫೈರಿಂಗ್ ನಡೆಯುತ್ತಿದೆ. ಅಖ್ನೂರ್, ಆರ್ಎಸ್ ಪುರ, ರಜೌರಿಯಲ್ಲಿ ದಾಳಿಗೆ ವಿಫಲ ಯತ್ನ ನಡೆಸುತ್ತಿದೆ. ಏಕೆಂದರೆ ವಿರೋಧಿ ರಾಷ್ಟ್ರದ ಎಲ್ಲ ಅಸ್ತ್ರಗಳನ್ನು ಭಾರತ ನೆಲಕ್ಕೆ ಉರುಳಿಸುತ್ತಿದೆ. ಇಂದು ಸಂಜೆ 5 ಗಂಟೆಗೆ ಕದನ ವಿರಾಮ ಘೋಷಣೆ ಮಾಡಿದ ಬೆನ್ನಲ್ಲೇ ಉಲ್ಲಂಘಿಸಿರುವ ಪಾಕಿಸ್ತಾನಕ್ಕೆ ಬಿಎಸ್‌ಎಫ್ ತಕ್ಕ ಪ್ರತ್ಯುತ್ತರ ನೀಡುತ್ತಿದೆ.
ದೇಶದ 4 ರಾಜ್ಯಗಳಲ್ಲಿ ಕಳೆದೊಂದು ಗಂಟೆಯಲ್ಲಿ 100 ಡ್ರೋಣ್ಗಳಿಂದ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ 3 ದಿನಕ್ಕಿಂತ ಇಂದು ಶ್ರೀನಗರದಲ್ಲಿ ಪಾಕಿಸ್ತಾನ ಹೆಚ್ಚಿನ ಡ್ರೋಣ್ಗಳನ್ನು ಉಡಾವಣೆ ಮಾಡಿದೆ. ಡ್ರೋಣ್ ದಾಳಿಗೆ ದಿಟ್ಟ ಉತ್ತರ ನೀಡುತ್ತಿರುವ ಭಾರತದ ಭದ್ರತಾ ಪಡೆಗಳು, ಎಲ್ಲವನ್ನು ಹೊಡೆದುರುಳಿಸುತ್ತಿದೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ