‘ಬಾಯಿ ಮುಚ್ಕೊಂಡು ಇರು..’ ಭಾರತೀಯ ಸೇನೆ ವಿರುದ್ಧ ಮಾತಾಡಿದ್ದ ಅಫ್ರಿದಿಗೆ ಧವನ್ ಎಚ್ಚರಿಕೆ..!

author-image
Ganesh
Updated On
‘ಬಾಯಿ ಮುಚ್ಕೊಂಡು ಇರು..’ ಭಾರತೀಯ ಸೇನೆ ವಿರುದ್ಧ ಮಾತಾಡಿದ್ದ ಅಫ್ರಿದಿಗೆ ಧವನ್ ಎಚ್ಚರಿಕೆ..!
Advertisment
  • ಸೇನೆ ವಿರುದ್ಧ ಮಾತಾಡಿದ್ಕೆ ಗಬ್ಬರ್ ಸಿಂಗ್ ಫೈರ್
  • ಪಹಲ್ಗಾಮ್ ದಾಳಿ ಬಗ್ಗೆ ಅಫ್ರಿದಿ ಏನ್ ಹೇಳಿದ್ದ..?
  • ಪ್ರತಿಯಾಗಿ ಧವನ್ ಅಫ್ರಿದಿಗೆ ಏನು ಹೇಳಿದ್ರು..?

ಭಾರತದ ಮಾಜಿ ಕ್ರಿಕೆಟಿಗ ಶಿಖರ್ ಧವನ್, ಪಾಕಿಸ್ತಾನದ ಶಾಹಿದ್ ಅಫ್ರಿದಿಗೆ ಎಚ್ಚರಿಕೆ ನೀಡಿದ್ದಾರೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಸಂಬಂಧ ಅಫ್ರಿದಿ ಭಾರತೀಯ ಸೇನೆಯನ್ನು ದೂಷಿಸಿದ್ದ. ಅಫ್ರಿದಿ ಸೇನೆ ವಿರುದ್ಧ ಮಾತನಾಡಿದ್ದಕ್ಕೆ ಧವನ್ ಕೌಂಟರ್ ನೀಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶಿಖರ್ ಧವನ್, ಬಾಯಿ ಮುಚ್ಚಿಕೊಂಡು ಸುಮ್ಮನೆ ಇರುವಂತೆ ಹೇಳಿದ್ದಾರೆ. ದೇಶದ ಪ್ರತಿಯೊಬ್ಬರೂ ಸೇನೆಯ ಪ್ರಯತ್ನಗಳ ಬಗ್ಗೆ ಹೆಮ್ಮೆಪಡುತ್ತಾರೆ ಎಂದಿದ್ದಾರೆ. ನಾವು ನಿಮ್ಮನ್ನು ಕಾರ್ಗಿಲ್​ನಲ್ಲೂ ಸೋಲಿಸಿದ್ದೇವೆ. ನೀವು ಈಗಾಗಲೇ ತುಂಬಾ ಕೆಳಮಟ್ಟಕ್ಕೆ ಇಳಿದಿದ್ದೀರಿ. ನೀವು ಇನ್ನೂ ಎಷ್ಟು ಕೆಳಮಟ್ಟಕ್ಕೆ ಇಳಿಯುತ್ತೀರಿ? ನಿಷ್ಪ್ರಯೋಜಕ ಕಾಮೆಂಟ್‌ಗಳನ್ನು ಮಾಡುವ ಬದಲು, ದೇಶದ ಪ್ರಗತಿಗೆ ಮೆದುಳನ್ನು ಬಳಸುವುದು ಉತ್ತಮ ಎಂದು ಅಫ್ರಿದಿಗೆ ಟ್ಯಾಗ್ ಮಾಡಿದ್ದಾರೆ. ಭಾರತೀಯ ಸೇನೆ ಬಗ್ಗೆ ತುಂಬಾ ಹೆಮ್ಮೆಯಿದೆ. ಭಾರತ್ ಮಾತಾ ಕಿ ಜೈ! ಜೈ ಹಿಂದ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 14 ವರ್ಷ 32 ದಿನದ ಪೋರ.. ವೈಭವ್ ಸೂರ್ಯವಂಶಿ ಸ್ಟ್ರೈಕ್​ರೇಟ್​ ಎಷ್ಟಿತ್ತು..?

ಅಫ್ರಿದಿ ಏನ್ ಹೇಳಿದ್ದ..?

ಭಾರತ ಮಾಡಿದ ತಪ್ಪುಗಳಿಂದಲೇ ಪಹಲ್ಗಾಮ್‌ನಲ್ಲಿ ಗುಂಡಿನ ದಾಳಿ ನಡೆದಿದೆ. ಆದರೆ ಭಾರತ ಪಾಕಿಸ್ತಾನದ ಮೇಲೆ ಆರೋಪ ಮಾಡುತ್ತದೆ. ಭಾರತವೇ ಭಾರತೀಯರನ್ನು ಕೊಲ್ಲುವಂತೆ ಮಾಡಿಕೊಂಡಿದೆ. ಇಸ್ಲಾಂ ಧರ್ಮ ನಮಗೆ ಶಾಂತಿಯನ್ನು ಮಾತ್ರ ಬೋಧಿಸುತ್ತದೆ. ಪಾಕಿಸ್ತಾನ ಎಂದಿಗೂ ಇಂತಹ ಭಯೋತ್ಪಾದನಾ ದಾಳಿಗೆ ಬೆಂಬಲ ನೀಡುವುದಿಲ್ಲ. ಭಾರತೀಯರು ತಮ್ಮನ್ನು ತಾವೇ ದೂಷಿಸಿಕೊಳ್ಳಬೇಕು. ನಾವು ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಲು ಸದಾ ಪ್ರಯತ್ನ ಪಡುತ್ತೇವೆ ಎಂದಿದ್ದ. ಅಲ್ಲದೇ ಉಗ್ರರ ದಾಳಿಗೆ ಭದ್ರತಾ ಲೋಪವೇ ಕಾರಣ ಅಂತಾ ಟಿವಿ ವಾಹಿನಿಯಲ್ಲಿ ನಾಲಿಗೆ ಹರಿಬಿಟ್ಟಿದ್ದ.

ಇದನ್ನೂ ಓದಿ: ಶಿಷ್ಯನ ಶತಕ ವೈಭವಕ್ಕೆ ಬೆರಗಾದ ದ್ರಾವಿಡ್​.. ವೀಲ್​​ ಚೇರ್​ನಿಂದ ಎದ್ದು ನಿಂತು ಸಂಭ್ರಮಿಸಿದ ಗುರು – VIDEO

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment