/newsfirstlive-kannada/media/post_attachments/wp-content/uploads/2024/11/Dhawan.jpg)
ಸತತ ಸೋಲು, ಸಾಲು ಸಾಲು ಆಘಾತ ಎದುರಿಸಿದ್ದ ಟೀಮ್​ ಇಂಡಿಯಾ ಮಾಜಿ ಕ್ರಿಕೆಟಿಗ ಶಿಖರ್​ ಧವನ್​ ಬಾಳಲ್ಲಿ ಇದೀಗ ಹೊಸ ಚೇತನ ಎಂಟ್ರಿಯಾಗಿದೆ. ಒಂಟಿಯಾಗಿದ್ದ ಧವನ್​ ಇದೀಗ ಫಾರಿನ್​ ಚೆಲುವೆಯೊಂದಿಗೆ ಸುತ್ತಾಟ ನಡೆಸ್ತಿದ್ದಾರೆ. ಧವನ್​ ಜೊತೆ ಕಾಣಿಸಿಕೊಂಡ ಮಿಸ್ಟ್ರಿ ಹುಡುಗಿ ಸದ್ಯ ಟಾಕ್​ ಆಫ್​ ದ ಟೌನ್​ ಆಗಿದ್ದಾಳೆ.
ಧವನ್​ ಜೀವನದಲ್ಲಿ ಹೊಸ ಚೇತನ
ಕಳೆದೊಂದು ವರ್ಷದಿಂದ ಸಾಲು ಸಾಲು ಆಘಾತಗಳನ್ನ ಶಿಖರ್​ ಧವನ್​ ಎದುರಿಸಿದ್ದಾರೆ. ಆನ್​ಫೀಲ್ಡ್​​ನ ವೈಫಲ್ಯದ ಪರಿಣಾಮ ಟೀಮ್​ ಇಂಡಿಯಾದಿಂದಲೇ ದೂರವಾದ್ರು. ಆಫ್​ ದ ಫೀಲ್ಡ್​ನಲ್ಲಿ ವೈವಾಹಿಕ ಜೀವನದ ಭಿನ್ನಾಭಿಪ್ರಾಯಗಳಿಂದಾಗಿ ಪತ್ನಿಯಿಂದ ದೂರಾದ್ರು. ಮೇಲಿಂದ ಮೇಲೆ ಪೆಟ್ಟು ತಿಂದು​ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಧವನ್​, ಇದಕ್ಕಿದ್ದಂತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನಕ್ಕೂ ಗುಡ್​ ಬೈ ಹೇಳಿಬಿಟ್ರು. ಸತತ ಸೋಲುಗಳಿಂದ ಕಂಗೆಟ್ಟ ಧವನ್​ ಜೀವನಕ್ಕೆ ಇದೀಗ ಹೊಸ ಚೇತನದ ಎಂಟ್ರಿಯಾದಂತಿದೆ.
ಸ್ಟೈಲಿಶ್​ ಲುಕ್​ನಲ್ಲಿ ಧವನ್​
ಮೊನ್ನೆ ಯಾವುದೋ ಊರಿಗೆ ಪ್ರಯಾಣ ಬೆಳೆಸಿದ್ದ ಶಿಖರ್​ ಧವನ್​, ಮುಂಬೈನ ಏರ್​ಪೋರ್ಟ್​​ಗೆ ಬಂದಿದ್ರು. ಭರ್ಜರಿ​ ಎಂಟ್ರಿ ಕೊಟ್ಟ ಧವನ್​, ಮೀಡಿಯಾಗಳತ್ತ ಕೈ ಬೀಸಿ, ಕ್ಯಾಮರಾಗೆ ಸ್ಟೈಲಿಷ್​ ಪೋಸ್​ ಕೊಟ್ಟು ಏರ್​ಪೋರ್ಟ್​​ ಒಳಗೆ ತೆರಳಿದ್ದರು.
ಲವ್​ನಲ್ಲಿ ಬಿದ್ರಾ ಧವನ್?
ಧವನ್​ ಬಂದಿದ್ದು.. ಏರ್​​ಪೋರ್ಟ್​​ ಒಳಗೆ ಹೋಗಿದ್ದು ಎಲ್ಲಾ ಸರಿ.. ಇದ್ರ ನಡುವೆ ಅಲ್ಲಂದು ಅಚ್ಚರಿ ಎಲ್ಲರಿಗೂ ಕಾದಿತ್ತು. ಧವನ್ ತಮ್ಮ ಆಡಿ​ ಕಾರಿನ ಈ ಕಡೆಯಿಂದ ಇಳಿದು ಮೀಡಿಯಾಗಳ ಕಡೆಗೆ ಬಂದ್ರೆ, ಮತ್ತೊಂದು ಡೋರ್​ನಿಂದ ಮಿಸ್ಟರಿ ಬೆಡಗಿಯೊಬ್ಬಳು ಕಾರ್​ನಿಂದ ಕೆಳಗಿಳಿದಿದ್ದರು.
ವಿದೇಶಿ ಬೆಡಗಿ ಜೊತೆ ಡೇಟಿಂಗ್​
ಏರ್​​ಪೋರ್ಟ್​ನಲ್ಲಿ ಫಾರಿನ್ ಹುಡುಗಿ ಜೊತೆಗೆ ಧವನ್​ ಕಾಣಸಿಕೊಂಡಿರೋ ವಿಡಿಯೋ ಸಖತ್​ ವೈರಲ್​ ಆಗಿದೆ. ಅದ್ರಲ್ಲೂ ಮಿಸ್ಟ್ರಿ ಬೆಡಗಿ ಕ್ಯಾಮರಾ ಕಂಡಕೂಡಲೇ ಅಡಗಿಕೊಳ್ಳಲು ಯತ್ನಿಸಿದ್ದನ್ನ ನೋಡಿದವರಿಗೆಲ್ಲಾ ಧವನ್​ಗೆ​ ಮತ್ತೆ ಲವ್​ ಆಯ್ತಾ ಎಂಬ ಅನುಮಾನ ಹುಟ್ಟಿದೆ. ಇಬ್ಬರೂ ಒಟ್ಟಾಗೆ ಬಂದು ಒಟ್ಟಾಗಿ ಯಾವುದೋ ಊರಿಗೆ ಏರ್​ಪೋರ್ಟ್​ನಿಂದ ಹೋದ ಬಳಿಕ ಡೇಟಿಂಗ್​ನ ಗಾಸಿಪ್​ ಸಖತ್​ ಸದ್ದು ಮಾಡ್ತಿದೆ.
ಫ್ಯಾನ್ಸ್​ ತಲೆಗೆ ಹುಳ
ಧವನ್​ ಡೇಟಿಂಗ್​ ರೂಮರ್ಸ್​ ಸದ್ಯ ಸೆನ್ಸೇಷನ್​ ಸೃಷ್ಟಿಸಿದೆ. ಜೊತೆಗೆ ಈ ಮಿಸ್ಟ್ರಿ ಬೆಡಗಿ ಯಾರು? ಎಂಬ ಪ್ರಶ್ನೆಯೂ ಎಲ್ಲರ ಕಾಡ್ತಿದೆ. ಕೆಲವರು ಈಕೆಯನ್ನ ವಿದೇಶಿ ಮಾಡೆಲ್​ ಎಂದು ಹೇಳ್ತಿದ್ದಾರೆ. ಈ ಫಾರಿನ್​ ಸುಂದರಿ ಯಾರು ಅನ್ನೋ ಅಧಿಕೃತ ಮಾಹಿತಿ ಯಾರಿಗೂ ಸಿಕ್ಕಿಲ್ಲ. ಮಿಸ್ಟ್ರಿ ಗರ್ಲ್​ ಯಾರು? ಒಂಟಿಯಾಗಿದ್ದವರು ಮತ್ತೆ ಜಂಟಿಯಾದ್ರಾ? ಅನ್ನೋದನ್ನ ಶಿಖರ್​​ ಧವನೇ ತಿಳಿಸಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್